Pro Kabaddi 2022
ಈ ಸೀಸನ್ ನಲ್ಲಿ ಗೂಳಿಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದು ಬಹುತೇಕ ಆರಂಭದದಿಂದಲೂ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ರಾರಾಜಿಸುತ್ತಿದ್ದಾರೆ..
ಅಂದ್ಹಾಗೆ ನವೆಂಬರ್ 18 ರಂದು ಹೈದ್ರಾಬಾದ್ನ ಗಾಚಿಬೌಲಿ ಮೈದಾನದಲ್ಲಿ ನಡೆದ ನಡೆದ ಮೂರನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಗುಜರಾತ್ ಜೈಂಟ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ..
49 – 38 ಅಂತರದಿಂದ ಭರ್ಜರಿ ಗೆಲುವು ದಾಖಲಿಸಿರುವ ಬುಲ್ಸ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನವನ್ನ ಕಾಯ್ದಿರಿಸಿಕೊಂಡಿದ್ದಾರೆ..
ಬುಲ್ಸ್ ಪರ ಭರ್ಜರಿ ರೈಡಿಂಗ್ ಮಾಡಿದ ಭರತ್ 18 ಅಂಕ, ರೈಡರ್ ವಿಖಾಶ್ ಕಾಂಡಾಲಾ 5 ಅಂಕ ಸಂಪಾದಿಸಿದರು.ಬುಲ್ಸ್ ಮೊದಲಾರ್ಧಧಲ್ಲಿ ಗುಜರಾತ್ ತಂಡವನ್ನು 2 ಬಾರಿ ಆಲೌಟ್ ಮಾಡಿತು. ಐದರಿಂದ ಆರು ಅಂಕಗಳ ಮುನ್ನಡೆ ಕಾಯ್ದುಕೊಂಡು ಜಯಿಸಿತು.
ಗುಜರಾತ್ ಪರ ಚಂದ್ರನ್ ರಂಜೀತ್ ರೈಡಿಂಗ್ನಲ್ಲಿ 12 ಅಂಕ ತಂದುಕೊಟ್ಟರು. ಆಲ್ರೌಂಡರ್ ಪ್ರತೀಕ್ ದಾಹಿಯಾ 10 ಅಂಕ ಪಡೆದರು.
ಬುಲ್ಸ್ ಈ ಆವೃತ್ತಿಯಲ್ಲಿ 15 ಪಂದ್ಯಗಳಲ್ಲಿ 10ರಲ್ಲಿ ಗೆಲುವು ದಾಖಲಿಸಿ 56 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. 54 ಅಂಕ ಪಡೆದ ಪುಣೇರಿ ಪಲ್ಟಾನ್ ಎರಡೆನೆ ಸ್ಥಾನದಲ್ಲಿದೆ.
ಟ್ರಿಪಲ್ ಪಂಗಾ ದಿನದ ಕೊನೆಯ ಪಂದ್ಯದಲ್ಲಿ, ಪ್ರೊ ಕಬಡ್ಡಿ ಲೀಗ್ 2022 ರಲ್ಲಿ ಶುಕ್ರವಾರದಂದು ಬೆಂಗಳೂರು ಬುಲ್ಸ್ ಗುಜರಾತ್ ಟೈಟಾನ್ಸ್ ಅನ್ನು ಸೋಲಿಸಿತು. ವಿಜಯದ ನಂತರ ಬೆಂಗಳೂರು ಬುಲ್ಸ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪುನಃ ಪಡೆದುಕೊಂಡಿತು..
ಟಾಪ್ 5 ತಂಡಗಳ ಪಾಯಿಂಟ್ಸ್ ಟೇಬಲ್ ಲರಕ್ಕಾಚಾರ…. ಗೆದ್ದು – ಸೋತ ಡೀಟೇಲ್ಸ್
ಬೆಂಗಳೂರು ಬುಲ್ಸ್: ಆಡಿದ – 15 ಪಂದ್ಯಗಳಲ್ಲಿ ,10 ಗೆಲುವು, 4 ಸೋಲು, 1 ಟೈ – ಒಟ್ಟಾರೆ ಅಂಕಗಳು 56
ಪುಣೇರಿ ಪಲ್ಟನ್ : ಆಡಿದ – 15 ಪಂದ್ಯಗಳಲ್ಲಿ, 9 ಗೆಲುವು ,4 ಸೋಲು, 2 ಟೈ – ಒಟ್ಟಾರೆ ಅಂಕಗಳು 54
ಜೈಪುರ ಪಿಂಕ್ ಪ್ಯಾಂಥರ್ಸ್ : 14 ಪಂದ್ಯಗಳಲ್ಲಿ , 9 ಗೆಲುವು , 5 ಸೋಲು – ಒಟ್ಟಾರೆ ಅಂಕಗಳು 48
ಯುಪಿ ಯೋಧಾಸ್ – 14 ಪಂದ್ಯಗಳಲ್ಲಿ ,7 ಗೆಲುವು, 5 ಸೋಲು , 2 ಟೈ – ಒಟ್ಟಾರೆ ಅಂಕಗಳು 45
ಯು ಮುಂಬಾ – 13 ಪಂದ್ಯಗಳಲ್ಲಿ , 8 ಗೆಲುವು, 5 ಸೋಲು– ಒಟ್ಟಾರೆ ಅಂಕಗಳು 45
Pro Kabaddi 2022 – bengaluru bulls in top in points table – saakshatv








