ಒಂದೇ ಒಂದು ಅಂಕದಲ್ಲಿ ಬೆಂಗಾಲ್ ವಿರುದ್ಧ ಸೋತ ಬೆಂಗಳೂರು ಬುಲ್ಸ್..!! ಸೂಪರ್ 10 ಪಡೆದ ಪವನ್ ಶೆರಾವತ್..!!
ಡಿಸೆಂಬರ್ 22 ರಿಂದ ಆರಂಭವಾಗಿ ಮೊದಲಾರ್ಧದ ಕೊನೆ ಹಂತಕ್ಕೆ ತಲುಪಿರುವ ಪ್ರೋ ಕಬಡ್ಡಿ ಲೀಗ್ 2022ನಲ್ಲಿ ಬೆಂಗಳೂರು ಬುಲ್ಸ್ ಗೂಳಿಗಳಂತೆಯೇ ಇಲ್ಲಿವರೆಗೂ ಆಡಿದ್ದಾರೆ.. ಅಂಕಪಟ್ಟಿಯಲ್ಲಿ ಆರಂಭದಿಂದಲೂ ಮೊದಲ ಮೂರು ಸ್ಥಾನಗಳನ್ನೇ ಕಾಯ್ದುಕೊಂಡು ಬಂದಿರುವ ಬುಲ್ಸ್ ಸದ್ಯ ನಿನ್ನೆ ನಡೆದ ಪಂದ್ಯದಲ್ಲಿ ಬೆಂಗಾಲ್ ವಿರುದ್ಧ ಸೋತ್ರೂ ಸಹ ಅಂಕಪಟ್ಟಿಯಲ್ಲಿ 2 ಸ್ಥಾನದಲ್ಲಿದೆ..
ಬೆಂಗಾಲ್ ವಾರಿಯರ್ಸ್ ವಿರುದ್ಧ ರೋಚಕ ಹಪಣಾಹಣಿಯಲ್ಲಿ ಬೆಂಗಳೂರಿನ ಗೂಳಿಗಳು ಅಬ್ಬರಿಸಿದರೂ ಕೊನೆ ಕ್ಷಣದಲ್ಲಿ ಕೆಲ ಎಡವಟ್ಟುಗಳಿಂದಾಗಿ ಒಂದೇ ಒಂದು ಅಂಕದಿಂದ ಸೋತು ನಿರಾಸೆ ಅನುಭವಿಸಿದ್ರು.. ಪಟ್ನಾ ಪೈರೇಟ್ಸ್ ಜೊತೆಗಿನ ಸೋಲಿನ ನಂತರ ಈಗ ಬೆಂಗಾಲ್ ವಿರುದ್ಧವೂ ಸೋತಿದೆ.. ಎಂದಿನಂತೆ ಬೆಂಗಳೂರು ಬುಲ್ಸ್ ನ ಕ್ಯಾಪ್ಟನ್ ಪವನ್ ಶೆರಾವತ್ ಈ ಬಾರಿಯೂ ಮಿಂಚಿ ಎದುರಾಳಿಗಳ ಎದೆಯಲ್ಲಿ ನಡುಕು ಹುಟ್ಟಿಸಿದ್ರೂ , ಅವರ ಆಟಕ್ಕೆ ಸೆಡ್ಡು ಹೊಡೆದ ಮಣಿಂದರ್ ಸಿಂಗ್ ಚಾಣಾಕ್ಷ ಆಟದಿಂದಾಗಿ ಬೆಂಗಾಲ್ ವಾರಿಯರ್ಸ್ ತಂಡವು ಗೆದ್ದು ಬೀಗಿದೆ..
ವೈಟ್ಫೀಲ್ಡ್ನ ಗ್ರ್ಯಾಂಡ್ ಶೆರಟಾನ್ ಹೋಟೆಲ್ನಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಟೂರ್ನಿಯ ಪಂದ್ಯದಲ್ಲಿ ಬುಲ್ಸ್ ತಂಡವು 39–40 ರಿಂದ ಬೆಂಗಾಲ್ ವಿರುದ್ಧ ಸೋತಿದೆ.. ಈ ಮೂಲಕ ಆಡಿರುವ ಒಟ್ಟಾರೆ ಪಂದ್ಯಗಳ ಪೈಕಿ ಇದು ಬೆಂಗಳೂರಿಗೆ 4 ನೇ ಸೋಲಾಗಿದ್ದು , ಒಂದು ಟೈ 7 ಗೆಲುಗು ಸಿಕ್ಕಿದೆ..
ಬುಲ್ಸ್ ನಾಯಕ ಪವನ್ 13 ಪಾಯಿಂಟ್ಸ್ ಗಳಿಸಿದರು. ರೇಡರ್ ಚಂದನ್ ರಂಜೀತ್ ಎಂಟು ಮತ್ತು ಸೌರಭ್ ನಂದಾಲ್ ನಾಲ್ಕು ಅಂಕ ಗಳಿಸಿದರು. ಬೆಂಗಾಲ್ ತಂಡದ ನಾಯಕ ಮಣಿಂದರ್ ಒಂಬತ್ತು ಮತ್ತು ಸುಖೇಶ್ ಹೆಗಡೆ ಏಳು ಅಂಕ ಗಳಿಸಿ ಮಿಂಚಿದರು. ಉಭಯ ತಂಡಗಳು ಆರಂಭದಿಂದಲೂ ಭರ್ಜರಿ ಪೈಪೋಟಿ ನಡೆಸಿದವು. ಆದ್ರೆ ಮೊದಲಾರ್ಧನ ನಂತರ ದ್ವಿತೀಯಾರ್ಧದ ವೇಳೆ ಬೆಂಗಾಲ್ ತಂಡವು ಕೇವಲ ಒಂದು ಅಂಕದ ಅಂತರದಿಂದ ಮುನ್ನಡೆಯಲ್ಲಿತ್ತು. ಕೊನೆಯವರೆಗೂ ಜಿದ್ದಾಜಿದ್ದಿನ ಆಟ ನಡೆಯಿತು. ಆದ್ರೂ ಕೊನೆಯಲ್ಲಿ ಒಂದು ಅಂಕದಲ್ಲಿ ಬೆಂಗಾಲ್ ಜಯ ಸಾಧಿಸಿತು.. ಆದ್ರೂ ಉತ್ತಪ ಪಾಯಿಂಟ್ಸ್ ಹೊಂದಿರುವ ಬುಲ್ಸ್ ಅಂಕಪಟ್ಟಿಯಲ್ಲಿ 2ನೇಸ್ಥಾನಕ್ಕೆ ಬಂದಿದ್ದು, ಪಟ್ನಾ 3ನೇ ಸ್ಥಾನಕ್ಕೆ ಕುಸಿದಿದೆ..
ಇನ್ನೂ ನಿನ್ನೆಯೇ ನಡೆದ ಮತ್ತೊಂದು ಪಂದ್ಯದಲ್ಲಿ ಗುಜರಾತ್ ಜೇಂಟ್ಸ್ ತಮಿಳ್ ತಲೈವಾಸ್ ವಿರುದ್ಧ 2 ಅಂಕಗಳ ಅಂತರದಲ್ಲಿ ಭರ್ಜರಿ ಜಯ ದಾಖಲಿಸಿತು.. ರೇಡರ್ ಮಹೇಂದ್ರ ರಜಪೂತ್ ಮತ್ತು ರಾಕೇಶ್ ನರ್ವಾಲ್ ಅವರ ಅದ್ಭುತ ಆಟ ಜೇಂಟ್ಸ್ ಗೆ ಬಲ ನೀಡಿತು..









