Pro Kabaddi 9 : ಪ್ರದೀಪ್ ನರ್ವಾಲ್ ಅಬ್ಬರಕ್ಕೆ ತತ್ತರಿಸಿದ ದಬಾಂಗ್ಸ್..!!
ದಂಬಾಗ್ ದೆಹಲಿ ,, ಪ್ರೋ ಕಬಡ್ಡಿ ಸೀಸನ್ 2021 ರ ಚಾಂಪಿಯನ್ ತಂಡ..
ಈ ಸೀಸನ್ ನಲ್ಲೂ ದಬಾಂಗ್ ದೆಹಲಿ ಆರಂಭದಲ್ಲಿ ಅಬ್ಬರಿಸಿತ್ತು.. ಆದ್ರೆ ,, ಕಳೆದ 5 -6 ಮ್ಯಾಚ್ ಗಳಿಂದ ದೆಹಲಿ ಟೈಮ್ ಸರಿ ಇಲ್ಲ.. ಸತತ ಮ್ಯಾಚ್ ಗಳನ್ನ ಸೋಲುತ್ತಲೇ ಬಂದಿದೆ,..
ಅದ್ರಲ್ಲೂ ನವೆಂಬರ್ 16 ರಂದು ಯು ಪಿ ಯೋಧಾಸ್ ದಬಾಂಗ್ ದೆಹಲಿಯನ್ನ ಹೀನಾಯವಾಗಿ ಸೋಲಿಸಿದ್ದಾರೆ.. ಈ ಮ್ಯಾಚ್ ನಲ್ಲಿ ಪ್ರದೀಪ್ ನರ್ವಾಲ್ ಹಳೇ ಖದರ್ ನಲ್ಲೇ ಅಬ್ಬರಿಸಿ ದಬಾಂಗ್ಸ್ ಸೋಲಿಗೆ ಪ್ರಮುಖ ಕಾರಣವಾಗಿದ್ದಾರೆ..
ಅಲ್ಲದೇ ದ್ವಿತೀಯಾರ್ಧದಲ್ಲಿ ದಬಾಂಗ್ ದೆಹಲಿ ಮಾಡಿದ್ದ ಸೂಪರ್ ಟ್ಯಾಕಲ್ ಅನ್ನ ಬಿಡಿಸಿಕೊಂಡು ಬಂದಿದ್ದೇ ಒಂದು ರಣ ರೋಚಕ ರೈಡಿಂಗ್..
ಅವರ ಈ ಸೂಪರ್ ರೈಡಿಂಗ್ ಮಾತ್ರ ಸದಾ ಕಾಲ ನೆನಪಲ್ಲೇ ಉಳಿಯುವಂತಹದ್ದು , ಈ ಪಂದ್ಯದಲ್ಲಿ ಮತ್ತೆ ಹಳೇ ಪ್ರದೀಪ್ ನರ್ವಾಲ್ ಅವರ ದರ್ಶನವಾಗಿದೆ..
ಸೂಪರ್ ಟ್ಯಾಕಲ್ ಬೇಧಿಸಿ ಮಿಡ್ ಲೈನ್ ಮುಟ್ಟಿದ್ದ ಪ್ರದೀಪ್ ನರ್ವಾಲ್ ಅವರ ಆಟಕ್ಕೆ ದಬಾಂಗ್ಸ್ ಬೆಚ್ಚಿಬಿದ್ದಿದ್ದರು.. ಈ ರೈಡಿಂಗ್ ಮೂಲಕ ಸೂಪರ್ ರೈಡಿಂಗ್ ಮಾಡಿ ಮೂರು ಪಾಯಿಂಟ್ಸ್ ಜೊತೆಗೆ ಆಲ್ ಔಟ್ ಮಾಡಿ ತಂಡಕ್ಕೆ ಒಟ್ಟು 5 ಪಾಯಿಂಟ್ ಗಳನ್ನ ತಂದುಕೊಟ್ಟರು ಪ್ರದೀಪ್..
ಒಟ್ಟಾರೆ 22 ಪಾಯಿಂಟ್ಸ್ ತೆಗೆದರು..
ಈ ಮೂಲಕ ದಬಾಂಗ್ಸ್ ವಿರುದ್ಧ ಯುಪಿ ಯೋಧಾಸ್ ವಿರುದ್ಧ 50 -31 ಅಂದ್ರೆ ಸರಿ ಸುಮಾರು 19 ಪಾಯಿಂಟ್ಸ್ ಲೀಡ್ ನಲ್ಲಿ ಗೆದ್ದಿದ್ದಾರೆ..