Pro Kabaddi : ಯೂ ಮುಂಬಾ ಮಣಿಸಿದ ಡೆಲ್ಲಿಗೆ ಪ್ಲೇ ಆಫ್ ಗೆ ಕೊನೆಯ ಅವಕಾಶ
ಪ್ರೊ ಕಬಡ್ಡಿಯ ಒಂಭತ್ತನೆಯ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ಡೆಲ್ಲಿ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಹೈದ್ರಾಬಾದ್ನ ಗಾಚಿಬೌಲಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಡೆಲ್ಲಿ ತಂಡ ಯೂ ಮುಂಬಾ ತಂಡವನ್ನು 41-21 ಅಂಕಗಳಿಂದ ಮಣಿಸಿತು.
ಗೆಲ್ಲಲೇ ಬೇಕಾಗಿದ್ದ ಪಂದ್ಯದಲ್ಲಿ ಯೂ ಮೂಂಬಾ ಭಾರೀ ಅಂತರದಿಂದ ಸೋತು ಟೂರ್ನಿಯಿಂದ ಹೊರ ಬಿತ್ತು.
ಆರನೆ ಸ್ಥಾನದಲ್ಲಿರುವ ಡೆಲ್ಲಿ 21 ಪಂದ್ಯಗಳಿಂದ 60 ಅಂಕಗಳನ್ನು ಸಂಪಾದಿಸಿರುವ ಡೆಲ್ಲಿ ಬೆಂಗಾಲ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಟೈ ಮಾಡಿಕೊಂಡರೂ ಪ್ಲೇಆಫ್ ತಲುಪಲಿದೆ.
ಜೈಪುರ, ಪುಣೇರಿ, ಬೆಂಗಳೂರು ಬುಲ್ಸ್ ಮತ್ತು ಯುಪಿ ಯೋಧಾಸ್ ಪ್ಲೇ ಆಫ್ ತಲುಪಿವೆ.
ಉಳಿದ ಎರಡು ಸ್ಥಾನಗಳಿಗೆ ಡೆಲ್ಲಿ, ತಮೀಲ್ ತಲೈವಾಸ್, ಹರ್ಯಾಣ ಹಾಗೂ ಗುಜರಾತ್ ತಂಡಗಳು ಸೆಣಸಲಿವೆ. ಬುಧವಾರ ಯುಪಿ ಯೋಧಾಸ್ ವಿರುದ್ಧ ಗೆದ್ದರೆ ತಮಿಳ್ ತಲಯವಾಸ್ ಫ್ಲೇ ಆಫ್ ಖಚಿತವಾಗಲಿದೆ.
Pro Kabaddi , Dehli defeats u mumba , playoff chance