Pro Kabaddi League 2022 | ಎಲಿಮಿನೇಟರ್ ಪಂದ್ಯದಲ್ಲಿ ಬುಲ್ಸ್ ಗೆ ಜೈಂಟ್ಸ್ ಸವಾಲು
ಎಂಟನೇ ಆವೃತ್ತಿಯ ಪ್ರೋ ಕಬ್ಬಡಿ ಲೀಗ್ ಎಲಿಮಿನೇಟರ್ ಪಂದ್ಯಗಳು ಇಂದಿನಿಂದ ಆರಂಭವಾಗಲಿದ್ದು, ಬೆಂಗಳೂರು ಬುಲ್ಸ್ ತಂಡ ಎರಡನೇ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಎರಡನೇ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡ ದಬಾಂಗ್ ದೆಹಲಿ ವಿರುದ್ಧದ ಕಾದಾಟ ನಡೆಸಲಿದೆ.
ಟೂರ್ನಿಯ ಆರಂಭದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಬೆಂಗಳೂರು ಬುಲ್ಸ್ ತಂಡ, ಕೊನೆ ಕೊನೆಗೆ ಸತತ ಸೋಲುಗಳಿಂದ ಅಂಕ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ತೃಪ್ತಿಪಡೆದುಕೊಂಡಿತ್ತು.
ಈ ಆವೃತ್ತಿಯಲ್ಲಿ 22 ಪಂದ್ಯಗಳನ್ನಾಡಿರುವ ಬುಲ್ಸ್, 11 ಜಯ, 9 ಸೋಲು, 2 ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. ಇದರೊಂದಿಗೆ 66 ಅಂಕಗಳನ್ನ ಪಡೆದುಕೊಂಡಿದೆ.
ನಾಯಕ ಪವನ್ ಸೆಹ್ರಾವತ್ ಮೇಲೆ ಎಲ್ಲರ ಚಿತ್ತ ನೆಟ್ಟಿದ್ದು, 22 ಪಂದ್ಯಗಳಲ್ಲಿ ಪವನ್ 247 ಅಂಕಗಳನ್ನ ಗಳಿಸಿದ್ದಾರೆ. ಇವರಿಗೆ ಭರತ್ ಉತ್ತಮ ಸಾಥ್ ನೀಡುತ್ತಿದ್ದು, 106 ಅಂಕ ಪಡೆದಿದ್ದಾರೆ. ರಕ್ಷಣಾ ವಿಭಾಗದಲ್ಲಿ ಸೌರಭ್ ನಡಾಲ್ 22 ಪಂದ್ಯಗಳಲ್ಲಿ 61 ಅಂಕಗಳನ್ನು ಸೇರಿಸಿ ಎದುರಾಳಿ ರೈಡರ್ ಗಳನ್ನು ಕಾಡಿದ್ದಾರೆ.
ಇನ್ನು ಜೈಂಟ್ಸ್ ತಂಡ 10 ಜಯ, 8 ಸೋಲು, 4 ಡ್ರಾ ಕಂಡಿದ್ದು 67 ಅಂಕಗಳನ್ನು ಸೇರಿಸಿದೆ. ಜೈಂಟ್ಸ್ ಪರ ಅಜಯ್ ಕುಮಾರ್ 76 ಅಂಕ ಸೇರಿಸಿದ್ದಾರೆ. ಪರವೇಶ್ ಸಹ ರಕ್ಷಣಾ ವಿಭಾಗದಲ್ಲಿ ಮಿಂಚು ಹರಿಸಬಲ್ಲರು. pro-kabaddi-league-2022-bengaluru-bulls vs Gujarat Giants saaksha tv









