ಇಂದು ದಬಾಂಗ್ ಡೆಲ್ಲಿ – ಸ್ಟೀಲರ್ಸ್ , ವಾರಿಯರ್ಸ್ – ಯೋಧಾಸ್ ನಡುವೆ ರೋಚಕ ಹಣಾಹಣಿ.. ಗೆಲ್ಲೋದ್ಯಾರು..???
ವೈಟ್ ಫೀಲ್ಡ್ ನ ಶೆರ್ ಟಲ್ ಹೋಟೆಲ್ ನಲ್ಲಿ ನಡೆಯುತ್ತಿರುವ ಪ್ರೋ ಕಬಡ್ಡಿ 2022 ರ ಲೀಗ್ ನಲ್ಲಿ ಇಂದು ದಬಾಂಗ್ ಡೆಲ್ಲಿ ಹಾಗೂ ಹರಿಯಾಣ ಸ್ಟೀಲರ್ಸ್ ನಡುವೆ ಮೊದಲ ಪಂದ್ಯ ನಡೆಯಲಿದೆ.. ಆ ನಂತರ ಬೆಂಗಾಲ್ ವಾರಿಯರ್ಸ್ ಮತ್ತು ಯುಪಿ ಯೋಧ ನಡುವೆ ಸೆಣಸಾಟ ನಡೆಯಲಿದೆ.. ಎರೆಡೂ ಪಂದ್ಯಗಳೂ ಅತ್ಯಂತ ರೋಚಕತೆಯಿಂದ ಕೂಡಿರಲಿದೆ..
ದಬಾಂಗ್ ಡೆಲ್ಲಿ ಹಾಗೂ ಹರಿಯಾಣ ಸ್ಟೀಲರ್ಸ್
ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ದಬಾಂಗ್ ಡೆಲ್ಲಿ ಆರಂಭದಿಂದಲೂ ಬಲಿಷ್ಟವಾಗಿಯೇ ಗುರುತಿಸಿಕೊಂಡಿದೆ.. ಆಡಿರುವ 11 ಪಂದ್ಯಗಳಲ್ಲಿ 7 ಗೆಲುವು , 2 ಡ್ರಾ , 2 ಸೂಲು ಕಂಡಿರುವ ದಬಾಂಗ್ ದೆಹಲಿ ವಿರುದ್ಧ ಸೆಣಸಾಡಲಿರುವ ಹರಿಯಾಣಾ ಸ್ಟೀಲರ್ಸ್ ಕೂಡ 11 ಪಂದ್ಯಗಳನ್ನ ಆಡಿದೆ ಆದ್ರೆ ಗೆದ್ದಿರೋದು 4 ಪಂದ್ಯಗಳು , 2 ಟೈ , ಉಳಿದ ಪಂದ್ಯಗಳಲ್ಲಿ ಸೋಲುಂಡಿದೆ.. ಕಳಪೆ ಪ್ರದರ್ಶನದಿಂದಾಗಿ ಹರಿಯಾಣ ಸದ್ಯ ಅಂಕಪಟ್ಟಿಯಲ್ಲಿ 9ನೇ ಸ್ತಾನದಲ್ಲಿದೆ..
ಹೀಗಾಗಿ ಸಹಜವಾಗಿಯೇ ಈ ಎರೆಡೂ ಮ್ಯಾಚ್ ಗಳ ನಡುವಿನ ಪೈಪೋಟಿ ರೋಚಕತೆಯಿಂದ ಕೂಡಿರಲಿದೆ.. ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಬಲಿಷ್ಠ ತಂಡವನ್ನ ಮಣಿಸಿ ಹರಿಯಾಣ ಸ್ಟೀಲರ್ ಗಳು ಫೀನಿಕ್ಸ್ ನಂತೆ ಮಿಂಚುತ್ತಾರಾ , ಅಥವ ಹರಿಯಾಣಾ ಸ್ಟೀರಲ್ ಗಳ ಮೇಲೆ ದಬಾಂಗ್ ಡೆವಿಲ್ಸ್ ಅಬ್ಬರದ ಆಟವಾಡಿ ಮೊದಲ ಸ್ಥಾನವನ್ನ ಖಾಯಂ ಮಾಡಿಕೊಳ್ತಾ ಕಾದುನೋಡ್ಬೇಕಿದೆ.. ಆದ್ರೆ ದಬಾಂಗ್ ಸೋತ್ರೆ ಬೆಂಗಳೂ ಮೊದಲನೇ ಸ್ಥಾನಕ್ಕೇರೋದಂತು ಪಕ್ಕಾ… ಹರಿಯಾಣ 8 ನೇ ಸ್ಥಾನಕ್ಕೆ ಏರುವ ಸಾಧ್ಯತೆ ಇದೆ ಆದ್ರೆ ಅತಿ ಹೆಚ್ಚು ಲೀಡ್ ತೆಗೆದುಕೊಳ್ಳುವುದು ಅಗತ್ಯ.. ಎರೆಡೂ ಟೀಮ್ ಗಳಲ್ಲೂ ಸ್ಟಾರ್ ಆಟಗಾರರಿದ್ದು ಟೀಮ್ ನ ಗೆಲುವಿನ ದಡ ಸೇರಿಸುವ ಕ್ಷಮತೆ ಹೊಂದಿದ್ದಾರೆ..
ಬೆಂಗಾಲ್ ವಾರಿಯರ್ಸ್ – ಯುಪಿ ಯೋಧ
ಇನ್ನೂ ಇಂದು ನಡೆಯಲಿರುವ 2ನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ – ಯುಪಿ ಯೋಧ ಸೆಣಸಾಡಲಿವೆ. ಬೆಂಗಾಲ್ ವಾರಿಯರ್ಸ್ ನಿನ್ನೆ ಅಂದ್ರೆ ಶುಕ್ರವಾರ ಬೆಂಗಳೂರು ಗೂಳಿಗಳನ್ನ ಒಂದು ಅಂಕದ ಅಂತರದಿಂದ ಮಣಿಸಿ ಮತ್ತೊಂದು ಗೆಲುವಿನ ವಿಶ್ವಾದ ಜೊತೆಗೆ ಉತ್ಸಾಹದಲ್ಲಿದ್ರೆ , ಯುಪಿ ಯೋಧ ಈ ಹಿಂದಿನ ಮ್ಯಾಚ್ ( ಮಾರ್ಚ್ 17 ) ನಲ್ಲಿ ಪುಣೇರಿ ಪಲ್ಟನ್ಸ್ ವಿರುದ್ಧ ಗೆದ್ದು ಬೀಗಿದೆ.. ಸದ್ಯಕ್ಕೆ ಎರೆಡೂ ಪಂದ್ಯಗಳು ಗೆಲ್ಲುವ ವಿಶ್ವಾದಲ್ಲಿವೆ.. ಹಾಗೇ ನೋಡೋದಾದ್ರೆ ಅಂಕಪಟ್ಟಿಯಲ್ಲೂ ಈ ಎರೆಡೂ ಟೀಮ್ ಗಳ ನಡುವೆ ಹೆಚ್ಚೇನು ಅಂತರವಿಲ್ಲ.. ಬೆಂಗಾಲ್ ವಾರಿಯರ್ಸ್ 4 ನೇ ಸ್ಥಾನದಲ್ಲಿದ್ರೆ ಯು ಪಿ ಯೋಧ 5ನೇ ಸ್ಥಾನದಲ್ಲಿದೆ.. ಎರೆಡೂ ಸಮ ಬಲ ಟೀಮ್ ಗಳೇ ಆಗಿದ್ದು , ದಿನದ 2ನೇ ಪಂದ್ಯ ಅತ್ಯಂತ ರೋಚಕತೆಯಿಂದ ಕೂಡಿರಲಿದೆ… ಬೆಂಗಾಲ್ ಗೆದ್ರೆ ಇದು ಅವರ ಹ್ಯಾಟ್ರಿಕ್ ಗೆಲುವಾಗಲಿದೆ.. ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿಯುವ ಸಾಧ್ಯತೆಯಿದೆ.. ಅಂತೆಯೇ ಯುಪಿ ಗೆದ್ರೆ ಅಂಕಪಟ್ಟಿಯಲ್ಲಿ 4 ನೇ ಸ್ಥಾನಕ್ಕೆ ಏರುವ ಸಾಧ್ಯತೆಯಿದೆ..









