Pro kabaddi | ಬೆಂಗಳೂರು ಬುಲ್ಸ್ ಗೆ ಕೊನೆ ಅವಕಾಶ pro-kabaddi-league-eliminator-match saaksha tv
ಬೆಂಗಳೂರು: ಪ್ರೊ ಕಬಡ್ಡಿ ಲೀಗ್ ಅಂತಿಮ ಹಂತ ತಲುಪಿದೆ. ಇಂದು ಎರಡು ಎಲಿಮಿನೇಟರ್ ಪಂದ್ಯಗಳು ನಡೆಯಲಿವೆ.
ಮೊದಲ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಜೊತೆ ಪುಣೇರಿ ಪಲ್ಟನ್ ಸೆಣಸಾಡಲಿವೆ. ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವನ್ನು ಗುಜರಾತ್ ಜೈಂಟ್ಸ್ ಎದುರಿಸಲಿದೆ.
ಈ ಪಂದ್ಯಗಳಲ್ಲಿ ಗೆಲ್ಲುವ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ. ಸೋತ ಎರಡು ತಂಡಗಳು ನಿರ್ಗಮಿಸುತ್ತವೆ.
ಲೀಗ್ ಹಂತದಲ್ಲಿ ಅಗ್ರ ಎರಡು ಸ್ಥಾನ ಗಳಿಸಿದ್ದ ಪಾಟ್ನಾ ಪೈರೇಟ್ಸ್ ಮತ್ತು ದಬಾಂಗ್ ಡೆಲ್ಲಿ ಸೆಮಿಫೈನಲ್‌ಗೆ ನೇರವಾಗಿ ಅರ್ಹತೆ ಪಡೆದಿವೆ. 23 ರಂದು ಸೆಮಿಫೈನಲ್ ಮತ್ತು 25 ರಂದು ಫೈನಲ್ ನಡೆಯಲಿದೆ.
ಈ ಆವೃತ್ತಿಯಲ್ಲಿ 22 ಪಂದ್ಯಗಳನ್ನಾಡಿರುವ ಬುಲ್ಸ್, 11 ಜಯ, 9 ಸೋಲು, 2 ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. ಇದರೊಂದಿಗೆ 66 ಅಂಕಗಳನ್ನ ಪಡೆದುಕೊಂಡಿದೆ.
ನಾಯಕ ಪವನ್ ಸೆಹ್ರಾವತ್ ಮೇಲೆ ಎಲ್ಲರ ಚಿತ್ತ ನೆಟ್ಟಿದ್ದು, 22 ಪಂದ್ಯಗಳಲ್ಲಿ ಪವನ್ 247 ಅಂಕಗಳನ್ನ ಗಳಿಸಿದ್ದಾರೆ. ಇವರಿಗೆ ಭರತ್ ಉತ್ತಮ ಸಾಥ್ ನೀಡುತ್ತಿದ್ದು, 106 ಅಂಕ ಪಡೆದಿದ್ದಾರೆ.
ರಕ್ಷಣಾ ವಿಭಾಗದಲ್ಲಿ ಸೌರಭ್ ನಡಾಲ್ 22 ಪಂದ್ಯಗಳಲ್ಲಿ 61 ಅಂಕಗಳನ್ನು ಸೇರಿಸಿ ಎದುರಾಳಿ ರೈಡರ್ ಗಳನ್ನು ಕಾಡಿದ್ದಾರೆ.
ಇನ್ನು ಜೈಂಟ್ಸ್ ತಂಡ 10 ಜಯ, 8 ಸೋಲು, 4 ಡ್ರಾ ಕಂಡಿದ್ದು 67 ಅಂಕಗಳನ್ನು ಸೇರಿಸಿದೆ. ಜೈಂಟ್ಸ್ ಪರ ಅಜಯ್ ಕುಮಾರ್ 76 ಅಂಕ ಸೇರಿಸಿದ್ದಾರೆ.









