ನನ್ನ ಹಣೆಬರಹ ಯಾರೂ ಕಿತ್ಕೊಳೋಕಾಗೊಲ್ಲ : ಉಮಾಪತಿ
ಬೆಂಗಳೂರು : ನಟ ದರ್ಶನ್ ಅವರಿಗೆ ವಂಚನೆ ಯತ್ನ ಕೇಸ್ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಗಳು ಸಿಗುತ್ತಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಹೊಸ ಆಡಿಯೋಗಳು ವೈರಲ್ ಆಗುತ್ತಲೇ ಇವೆ.
ಈ ಮಧ್ಯೆ ನಿರ್ಮಾಪಕ ಉಮಾಪತಿ ಸುದ್ದಿಗಾರರೊಂದಿಗೆ ಮಾತನಾಡಿ, ಅರುಣಾ ಕುಮಾರಿ ಏಪ್ರಿಲ್ ನಿಂದ ಪರಿಚಯ, ಸೀಜ್ ಆಗಿರೋ ಲೋನ್ ವಿಚಾರವಾಗಿ ಮಾತಾಡ್ತಿರ್ತಾರೆ. ಮೇ 3ನೇ ವಾರದಲ್ಲಿ ದರ್ಶನ್ ಸರ್ ವಿಚಾರವಾಗಿ ಕೇಳ್ತಾರೆ. ಶ್ಯೂರಿಟಿ ಹಾಕಿದ್ದಾರಾ ಅವರು ಅಂತ ಕೇಳ್ತಾರೆ ಎಂದರು.
ಇನ್ನು ದರ್ಶನ್ ಸರ್ ಜಗಪತಿ ಬಾಬು ಅವರು ಬಂದಾಗ ಪಾರ್ಟಿ ಕೊಟ್ಟಿದ್ರು, ಆ ವೇಳೆ ಪಾರ್ಟಿ ನಡೆಯುತ್ತಿದ್ದ ಜಾಗಕ್ಕೆ ನನ್ನ ಮೊದಲು ಬಿಡಲ್ಲ. ಓನರ್ ಪರ್ಮಿಷನ್ ಪಡೆದು ನಂತರ ನೀವು ನನ್ನ ಒಳಗೆ ಬಿಡ್ತಿರಾ. ಇಷ್ಟು ಬುದ್ದಿವಂತರಾದ ನೀವು ಲಾಕ್ ಡೌನ್ ವೇಳೆ ಅರುಣ ಕುಮಾರಿ ಅವರನ್ನು ತೋಟದ ಒಳಗೆ ಹೇಗೆ ಬಿಟ್ರಿ. ಸಿಸಿಟಿವಿ ವಿಡಿಯೋ ನೀವೆ ಹರಿಬಿಟ್ಟಿದ್ದೀರಿ. ನಾನೇನು ದಡ್ಡ ಸರಿ, ಆದ್ರೆ ನೀವು ಯಾಕೆ ಈ ತರ ಮಾಡಿದ್ರೀ ಎಂದು ದರ್ಶನ್ ಆಪ್ತರಿಗೆ ಉಮಾಪತಿ ಪ್ರಶ್ನೆ ಮಾಡಿದ್ದಾರೆ.
ಇನ್ನು ವಾಟ್ಸಾಪ್ ಚಾಪ್ ಬಗ್ಗೆ ಮಾತನಾಡಿ, ಅಷ್ಟೂ ಚಾಟ್ ನಲ್ಲಿ ಅಶ್ಲೀಲ ಪದ ಉಪಯೋಗಿಸಿಲ್ಲ. ಇದನ್ನ ಘಂಟಘೋಷವಾಗಿ ಹೇಳ್ತೀನಿ. ನನ್ನ ಹಣೆಬರಹ ಯಾರೂ ಕಿತ್ಕೊಳೋಕಾಗೊಲ್ಲ. ದರ್ಶನ್ ಸರ್ ಎಲ್ಲೂ ನನ್ನ ವಿಚಾರವಾಗಿ ಹೇಳಿಲ್ಲ. ಅವರಿಗೆ ನನ್ನ ಮೇಲಿರೋ ಮರ್ಯಾದೆ ಹಾಗೇ ಇದೆ ಎಂದು ಹೇಳಿದರು.
ದರ್ಶನ್ ಸರ್ ಆ ಮೂರು ವಿಷಯ ಹೇಳಬೇಡಿ ಎಂದು ಹೇಳಿದ್ದಾರೆ. ಅವರು ನನ್ನ ಮೇಲೆ ನಂಬಿಕೆ ಇಟ್ಟು ಆ ಮೂರು ವಿಷಯ ಹೇಳಿದ್ದಾರೆ. ಹೀಗಾಗಿ ಆ ಮೂರು ವಿಚಾರ ಹೊರಗೆ ಹೇಳಲ್ಲ. ಆ ಮೂರು ವಿಷಯ ಹೇಳಿದ್ರೆ ಅಲ್ಲೋಲ-ಕಲ್ಲೋಲ ಆಗುತ್ತೆ ಎಂದು ಉಮಾಪತಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಇದೇ ವೇಳೆ ಹರ್ಷ ಮೇಲಾಂಟನೇ ಯಾಕೆ ಮಾಡಿರಬಾರದು..? ರಾಕೇಶ್ ಪಾಪಣ್ಣನೇ ಯಾಕೆ ಮಾಡಿರಬಾರದು ಎಂದು ಪ್ರಶ್ನಿಸಿದ ಉಮಾಪತಿ, ರಾಕೇಶ್ ಪಾಪಣ್ಣ ಹೇಳ್ತಾನೇ ಬೆಂಗಳೂರು ಪೊಲೀಸ್ ಮೇಲೆ ನಂಬಿಕೆ ಇಲ್ಲ. ಮೈಸೂರಲ್ಲೇ ತನಿಖೆ ಮಾಡಿ ಅಂತ. ಎಫ್ ಐಆರ್‍ನಲ್ಲಿ ಹರ್ಷ ಮೆಲಾಂಟ ಸುಳ್ಳು ನಂಬರ್ ಯಾಕೆ ಕೊಟ್ಟ? ಬೆಂಗಳೂರಲ್ಲಿ ತನಿಖೆ ಮಾಡೋದು ಬೇಡ ಅಂತ ಯಾಕೆ ಹೇಳ್ತಿದ್ದಾರೆ ಎಂದು ಉಮಾಪತಿ ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.