ಚಾಮುಂಡೇಶ್ವರಿ ಮಿಥ್ಯ, ಮಹಿಷಾಸುರ ಸತ್ಯ : ಪ್ರೊ.ಮಹೇಶ್ ಚಂದ್ರಗುರು
ಮೈಸೂರು : ಮಹಿಷಾ ದಸರಾ ಆಚರಣೆ ವಿಚಾರವಾಗಿ ಇಂದು ಪ್ರಗತಿಪರ ಚಿಂತನ ಪ್ರೊ.ಮಹೇಶ್ ಚಂದ್ರಗುರು ಮೈಸೂರಿನ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿ ನಡೆಸಿದರು.
ಈ ವೇಳೆ ಸಂಸದ ಪ್ರತಾಪ ಸಿಂಹ ವಿರುದ್ಧ ಕಿಡಿಕಾರಿದ ಅವರು, ಪ್ರತಾಪ್ ಸಿಂಹ ಮಹಿಷಾ ದಸರಾ ಆಚರಣೆ ಅಡ್ಡಿ ಪಡಿಸುತ್ತಿದ್ದಾರೆ.
ಈತ ಪುಂಡ. ಇಂತಹ ಸಾವಿರ ದೊಣ್ಣೆ ನಾಯಕರು ಬಂದರೂ ನಾವು ಮಹಿಷಾ ದಸರಾ ಮಾಡುತ್ತೇವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಹೇಶ್ ಚಂದ್ರಗುರು, ಸಿದ್ದರಾಮಯ್ಯ ಸರ್ಕಾರ ಇದ್ದಾಗ, ವಿ.ಶ್ರೀನಿವಾಸ್ ಪ್ರಸಾದ್ ಸಚಿವರಾಗಿದ್ದಾಗ ಮಹಿಷಾ ದಸರಾ ಆಚರಣೆ ಮಾಡಲು ಅನುಮತಿ ನೀಡಲಾಗಿತ್ತು.
ಆದರೆ ಸಂಸದ ಪ್ರತಾಪ್ ಸಿಂಹ ಮಹಿಷಾ ದಸರಾ ಆಚರಣೆ ಅಡ್ಡಿ ಪಡಿಸುತ್ತಿದ್ದಾರೆ. ಈತ ಪುಂಡ. ಇಂತಹ ಸಾವಿರ ದೊಣ್ಣೆ ನಾಯಕರು ಬಂದರೂ ನಾವು ಮಹಿಷಾ ದಸರಾ ಮಾಡುತ್ತೇವೆ.
ಚಾಮುಂಡೇಶ್ವರಿ ಮಿಥ್ಯ, ಮಹಿಷಾಸುರ ಸತ್ಯ. ಆದರೆ, ವೈದಿಕ ಧರ್ಮದ ಮನುವಾದಿಗಳು ಮಹಿಷಾಸುರನನ್ನು ಕೆಟ್ಟದಾಗಿ ಬಿಂಬಿಸಿದ್ದಾರೆ. ಈ ಸತ್ಯವನ್ನು ಎಲ್ಲರೂ ಅರಿಯಬೇಕಿದೆ ಎಂದು ಮನವಿ ಮಾಡಿಕೊಂಡರು.
ಅಲ್ಲದೆ ದಸರಾಗೆ ನಾವು ಹೇಗೆ ತೊಂದರೆ ಕೊಡುವುದಿಲ್ಲವೋ, ಅದೇ ರೀತಿ ಮಹಿಷಾ ದಸರಾ ಆಚರಣೆ ಮಾಡಲು ಜಿಲ್ಲಾಡಳಿತ ಅನುಮತಿ ಕೊಡಬೇಕು ಎಂದು ಪ್ರೊ.ಮಹೇಶ್ ಚಂದ್ರಗುರು ಒತ್ತಾಯಿಸಿದರು.