ಬೆಳಗಾವಿ: ವಿಧಾನ ಪರಿಷತ್ ನಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ವಿಪ ಸದಸ್ಯ ಸಿ.ಟಿ. ರವಿ ಬಳಸಿರುವ ಪದ ಬಳಕೆ ಕ್ರಿಮಿನಲ್ ಸ್ವರೂಪದ ಅಪರಾಧವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಆಕ್ಷೇಪಾರ್ಹ ಪದದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಆ ಸಂದರ್ಭದಲ್ಲಿ ತಾನು ಮೇಲ್ಮನೆಯಲ್ಲಿರಲಿಲ್ಲ. ಅದರೆ ಶಾಸಕರು ತಮಗೆ ವಿಷಯ ಹೇಳಿದ್ದಾರೆ. ಸಿ.ಟಿ. ರವಿ ಪದ ಬಳಕೆ ಮಾಡಿಕೊಂಡಿದ್ದಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ತುಂಬಾ ನೊಂದಿದ್ದಾರೆ. ಸಭಾಪತಿ ಮತ್ತು ಪೊಲೀಸರಿಗೂ ಅವರು ದೂರು ಸಲ್ಲಿಸಿದ್ದಾರೆ. ರವಿ ಬಳಸಿರುವ ಪದ ಕ್ರಿಮಿನಲ್ ಅಫೆನ್ಸ್ ಅನಿಸಿಕೊಳ್ಳುತ್ತದೆ ಎಂದು ಆರೋಪಿಸಿದ್ದಾರೆ.