ಕೇರಳದಲ್ಲಿ ಕೊರೋನಾ ಸೊಂಕು ಪತ್ತೆಯಾದ ಹಿನ್ನೆಲೆಯಲ್ಲಿ ನೆರೆಯ ಗಡಿ ರಾಜ್ಯ ದಕ್ಷಿಣ ಕನ್ನಡದಲ್ಲಿ ಕೊರೋನಾ ವೈರಸ್ ಸೊಂಕು ತಡೆ ಹಾಗೂ ನಿಯಂತ್ರಣ ಕುರಿತು ಜಾಗೃತಿ ಮೂಡಿಸುವ ಕಾರ್ಯಗಳು ಮುಂದುವರಿದಿದೆ. ಇಲ್ಲಿಯವರೆಗೆ ಯಾವುದೇ ಶಂಕಿತ ಪ್ರಕರಣ ಕಂಡು ಬರದೇ ಇದ್ದರೂ, ಮುಂಜಾಗ್ರತಾ ಕ್ರಮಗಳನ್ನು ಬಿಗಿಗೊಳಿಸಲಾಗಿದೆ. ವಿಶ್ವದ ಯಾವುದೇ ದೇಶಗಳಿಂದ ಒಂದು ತಿಂಗಳಿನಿಂದೀಚೆಗೆ ಯಾವುದೇ ವ್ಯಕ್ತಿ ಜಿಲ್ಲೆಗೆ ಬಂದಿದ್ದರೆ, ಅಂತಹವರ ಬಗ್ಗೆ ಸಾರ್ವಜನಿಕರಲ್ಲಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡಲು ಮನವಿ ಮಾಡಲಾಗಿದೆ. ಅವರಲ್ಲಿ ಕೊರೋನಾ ವೈರಸ್ ಸೋಂಕಿನ ಗುಣ ಲಕ್ಷಣಗಳು ಇದ್ದರೂ, ಇಲ್ಲದೆ ಇದ್ದರೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ದೂರವಾಣಿ 0824-2423672 ಅಥವಾ ಜಿಲ್ಲಾ ಸರ್ವೆಲೆನ್ಸ್ ಘಟಕದ ದೂರವಾಣಿ 0824-2427316ಗೆ ಮಾಹಿತಿ ನೀಡಲು ದ.ಕ. ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ. ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಬಿಜೆಪಿಯಲ್ಲಿ ಬಿರುಕು: ಅತೃಪ್ತ ನಾಯಕರ ‘ಬಣ’ ಕದನ
ಕರ್ನಾಟಕದ ಬಿಜೆಪಿ ಘಟಕದಲ್ಲಿ ಬಣ ರಾಜಕೀಯ ಮತ್ತೆ ಮುಂದುವರೆದಿದೆ. ಪಕ್ಷದೊಳಗಿನ ಅತೃಪ್ತ ನಾಯಕರು ಮಾಜಿ ಸಚಿವ ಕುಮಾರ್ ಬಂಗಾರಪ್ಪನವರ ನಿವಾಸದಲ್ಲಿ ಸಭೆ ಸೇರಿದ್ದು, ಈ ಸಭೆ ಹಲವು...