ಕಲಬುರಗಿ: ಜಿಲ್ಲೆಯನಲ್ಲಿ ಜೈಲಿನಲ್ಲಿ ನಿಷೇಧಿತ ತಂಬಾಕು ವಸ್ತುಗಳು ಪತ್ತೆಯಾಗಿರುವ ಘಟನೆ ನಡೆದಿದೆ.
ಇಲ್ಲಿನ ಸೆಂಟ್ರಲ್ ಜೈಲಿನ ( Kalaburagi Central Jail) ಒಳಗೋಡೆ ಬಳಿ ನಿಷೇಧಿತ ತಂಬಾಕು ವಸ್ತುಗಳು ಪತ್ತೆಯಾಗಿವೆ. ಹೀಗಾಗಿ ಫರಹತಾಬಾದ್ ( Farhatabad) ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.
ಜೈಲಿನ ಒಳಭಾಗದ ಗೋಡೆಗಳ ಹತ್ತಿರ ಚೆಂಡಿನ ಆಕಾರದ ಪ್ಲಾಸ್ಟಿಕ್ ಚೀಲಗಳಿಂದ ಮಾಡಿದ ಉಂಡೆಗಳು ಕಂಡು ಬಂದಿದ್ದವು. ಅವುಗಳನ್ನು ಪರಿಶೀಲಿಸಿದಾಗ ತಂಬಾಕು, ಗುಟ್ಕಾ, ಬೀಡಿ, ಪಾನ್ ಮಸಾಲಾ ಸೇರಿದಂತೆ ನಿಷೇಧಿತ ವಸ್ತುಗಳು ಪ್ತೆಯಾಗಿವೆ.
ಜೈಲಿನಲ್ಲಿನ ಪರಿಚಿತ ಕೈದಿಗಳಿಗೆ ತಲುಪುವಂತೆ ನಿಷೇಧಿತ ವಸ್ತುಗಳನ್ನು ಒಳಗೊಂಡ ಇಂತಹ ಚೆಂಡುಗಳನ್ನು ಕಿಡಿಗೇಡಿಗಳು ಎಸೆದು ಪರಾರಿಯಾಗುತ್ತಿರುವುದು ಹಲವು ದಿನಗಳಿಂದಲೂ ನಡೆಯುತ್ತಿದೆ ಎನ್ನಲಾಗಿದೆ.
ಜೈಲು ಸಿಬ್ಬಂದಿ ಸಂಗೀತಾ ಸಂಶಯಾಸ್ಪದ ರೀತಿಯಲ್ಲಿ ಕಂಡುಬಂದ ಈ ಚೆಂಡುಗಳನ್ನು ಗಮನಿಸಿದ ಕೂಡಲೆ ಜೈಲಿನ ಅಧೀಕ್ಷಕಿ ಅನಿತಾ ಅವರ ಗಮನಕ್ಕೆ ತಂದಿದ್ದಾರೆ. ನಂತರ ಆ ಚೆಂಡಿನ ಆಕಾರದ ಉಂಡೆಗಳನ್ನು ಬಿಡಿಸಿ ನೋಡಿದಾಗ ಗುಟ್ಕಾ, ಬೀಡಿ ಹಾಗೂ ಪಾನ್ ಮಸಾಲಾ ಪತ್ತೆಯಾಗಿವೆ.