ಕೊರೋನಾ ವೈರಸ್ ಸೋಂಕು ಹಿನ್ನೆಲೆಯಲ್ಲಿ ಮೆಕ್ಕಾ ಮತ್ತು ಮದೀನಾ ಭೇಟಿಗೆ ಸೌದಿ ಅರೇಬಿಯಾ ನಿಷೇಧ ಹೇರಿದೆ. ಹಜ್ ಯಾತ್ರೆ ಮತ್ತು ಉಮ್ರಾ ಯಾತ್ರೆಗಾಗಿ ಮೆಕ್ಕಾ ಮದೀನಾಗಳಿಗೆ ಆಗಮಿಸುವವರಿಗೆ ಸೌದಿ ಅರೇಬಿಯಾ ಸರಕಾರ ನಿಷೇಧ ಹೇರಿದ್ದು, ವೀಸಾಗಳನ್ನು ರದ್ದುಗೊಳಿಸಿದೆ. ಸೌದಿ ಅರೇಬಿಯಾದಲ್ಲಿ ಇಲ್ಲಿಯವರೆಗೆ ಕೊರೋನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗದಿದ್ದರೂ ನೆರೆಹೊರೆಯ ರಾಷ್ಟ್ರಗಳಲ್ಲಿ ಸೋಂಕು ದೃಡಪಟ್ಟಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಯಾರಿಗೂ ವೀಸಾ ನೀಡದಿರಲು ನಿರ್ಧರಿಸಲಾಗಿದೆ ಎಂದು ಸೌದಿ ಅರೇಬಿಯಾ ಸರಕಾರ ತಿಳಿಸಿದೆ.
ಜಗತ್ತಿನಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ ದಿನ ಕಳೆದಂತೆ ಏರಿಕೆಯಾಗುತ್ತಿದ್ದು, ಚೀನಾದಲ್ಲಿ ಮೃತರ ಸಂಖ್ಯೆ 2744ಕ್ಕೆ ಏರಿಕೆಯಾಗಿದ್ದರೆ 78497 ಸೋಂಕು ಪ್ರಕರಣ ದಾಖಲಾಗಿದೆ. ಇರಾನ್ ನಲ್ಲಿ 26 ಮಂದಿ ಕೊರೋನಾ ಗೆ ಬಲಿಯಾಗಿದ್ದರೆ, 245 ಮಂದಿಗೆ ಸೋಂಕು ದೃಢಪಟ್ಟಿದೆ. ದಕ್ಷಿಣ ಕೊರಿಯಾದಲ್ಲಿ ಸೋಂಕು ಪ್ರಕರಣಗಳು 1766ಕ್ಕೆ ಏರಿದ್ದು, ಸಾವಿನ ಸಂಖ್ಯೆ 13ಕ್ಕೆ ಏರಿದೆ. ಇಟಲಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 400ಕ್ಕೆ ಏರಿಕೆಯಾಗಿದ್ದರೆ, ಪಾಕಿಸ್ತಾನದಲ್ಲಿ ಇಬ್ಬರಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ರೊಮಾನಿಯಾದಲ್ಲಿ ಮೊದಲ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿದೆ. ಕೊರೋನಾ ವೈರಸ್ ಸೋಂಕಿನಿಂದಾಗಿ ಇಡೀ ಜಗತ್ತೇ ಆತಂಕದ ಪರಿಸ್ಥಿತಿ ಎದುರಿಸುತ್ತಿದೆ.
ಜೀವನದಲ್ಲಿ ಅದೆಷ್ಟೇ ದಾರಿದ್ರವಿದ್ದರೂ ಕಷ್ಟವಿದ್ರು ಈ ಶಕ್ತಿಶಾಲಿ ನರಸಿಂಹ ಸ್ವಾಮಿ ಶ್ಲೋಕವನ್ನು ನಿತ್ಯ ಪಠಿಸಿ ಚಮತ್ಕಾರ ನೋಡಿ
ಜೀವನದಲ್ಲಿ ಅದೆಷ್ಟೇ ದಾರಿದ್ರವಿದ್ದರೂ ಕಷ್ಟವಿದ್ರು ಈ ಶಕ್ತಿಶಾಲಿ ನರಸಿಂಹ ಸ್ವಾಮಿ ಶ್ಲೋಕವನ್ನು ನಿತ್ಯ ಪಠಿಸಿ ಚಮತ್ಕಾರ ನೋಡಿ ಪ್ರತಿನಿತ್ಯ ಮುಂಜಾನೆ ಈ ಒಂದು ಶಕ್ತಿಶಾಲಿಯಾದ ಅಂತಹ ನರಸಿಂಹ...








