Property Clash : ಜಮೀನು ವಿವಾದಕ್ಕೆ ಮಾವಿನಮರಗಳ ಮಾರಣ ಹೋಮ..!!
ತುಮಕೂರು : ಜಮೀನು ವಿವಾದ ಹಿನ್ನೆಲೆ ದುಷಷ್ಕರ್ಮಿಗಳು ಮಾವಿನಮರಗಳನ್ನ ನಾಶ ಮಾಡಿರುವ ಘಟನೆ ಕುಣಿಗಲ್ ತಾಲೂಕಿನ ಕಡೆಸಿಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ..
ಡಾ. ಉಮಲತಾ ಎಂಬುವವರಿಗೆ ಸೇರಿದ ಜಮೀನು ಇದಾಗಿದೆ.. ಹುಚ್ಚೇಗೌಡ,ಪುನೀತ್, ಮತ್ತು ರಾಮಣ್ಣ ಎಂಬುವವರು ಮಾವಿನ ಮರಗಳನ್ನು ನಾಶಪಡಿಸಿರುವ ಆರೋಪವಿದೆ..
ಹುಚ್ಚೇಗೌಡ ಹಾಗೂ ಉಮಲತಾರ ನಡುವೆ 2011 ರಿಂದಲೂ ಜಮೀನು ಸಂಬಂಧ ವಾಗ್ವಾದ ನಡೆಯುತ್ತಲೇ ಇದೆ..
ಇದೀಗ ಹುಚ್ಚೇಗೌಡ ಹಾಗೂ ಸಹಚರರು , ಜಮೀನಿಗೆ ನುಗ್ಗಿ ಎಂಟು ವರ್ಷದ ಸುಮಾರು 48 ಮಾವಿನ ಮರಗಳನ್ನು ನಾಶಪಡಿಸಿದ್ದಾರೆ..
ಈ ಸಂಬಂಧ ಉಮಲತಾ ಪತಿ ಹರೀಶ್ ಕುಣಿಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ..
ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ..
Property Clash , mango trees were destroyed








