property details of kusuma hanumantarayappa
ಬೆಂಗಳೂರು : ಆರ್ ಆರ್ ನಗರ ಉಪ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಇಂದು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಡಿ.ಕೆ.ರವಿ ಪತ್ನಿ ಕುಸುಮಾ( kusuma) ಅವರು ಕಣಕ್ಕಿಳಿದಿದ್ದು, ಬಿಜೆಪಿಯಿಂದ ಮುನಿರತ್ನ, ಜೆಡಿಎಸ್ ನಿಂದ ವಿ.ಕೃಷ್ಣಮೂರ್ತಿ ಅವರು ಅಖಾಡದಲ್ಲಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರಿಂದು ಅಧಿಕೃತವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದು, ಕುಸುಮ ಹನುಮಂತರಾಯಪ್ಪ ಲಕ್ಷಾದೀಶೆ ಆಗಿದ್ದು, ಸ್ವಲ್ಪ ಸಾಲ ಕೂಡ ಹೊಂದಿದ್ದಾರೆ.
ನಾಮಪತ್ರ ಸಲ್ಲಿಕೆ ವೇಳೆ ಅವರು ನೀಡಿರುವ ಮಾಹಿತಿ ಪ್ರಕಾರ ಕುಸುಮಾ ಅವರ ಆಸ್ತಿ ವಿವರ ಈ ಕೆಳಗಿನಂತಿದೆ.
ಕುಸುಮಾ ಬಳಿ ನಗದು ರೂಪದಲ್ಲಿ 1,41,050 ರೂ.
ಕೆನರಾ ಬ್ಯಾಂಕ್, ನಾಗರಭಾವಿ ಬ್ರ್ಯಾಂಚ್ ನಲ್ಲಿ 1,76,670.85 ರೂ
ಆಕ್ಸಿಸ್ ಬ್ಯಾಂಕ್ ಐಟಿಐ ಲೇಔಟ್ 57,775ರೂ.
ಬ್ಯಾಂಕ್ ಆಫ್ ಬರೋಡಾ, ಕುಮಾರಸ್ವಾಮಿ ಲೇ ಔಟ್ 3,27,765.29 ರೂ.
ಬ್ಯಾಂಕ್ ಆಫ್ ಬರೋಡಾ ಸೌತ್ ಎಂಡ್ ರಸ್ತೆ- 1,000ರೂ
ಎಸ್ ಬಿಐ ನಾಗರಭಾವಿ ಬ್ಯಾಂಕ್ – 41,620. 24 ರೂ ಉಳಿತಾಯ ಖಾತೆ, ನಿಶ್ಚಿತ ಠೇವಣಿ ಮುಂತಾದ ಹೂಡಿಕೆ ಹೊಂದಿದ್ದಾರೆ.
ಸುಮಾರು 2,45, 000 ರು ವಿವಿಧ ಬಾಂಡ್, ಷೇರುಗಳಲ್ಲಿ ಹೂಡಿಕೆ ಮಾಡಿದ್ದಾರೆ. ಇವರ ಬಳಿ ಯಾವುದೇ ಸ್ವಂತ ವಾಹನ ಇಲ್ಲ
ಶೀಘ್ರ ಗ್ರಾಮ ಪಂಚಾಯತ್ ಚುನಾವಣೆ ನಡೆಸಿ : ರಾಜ್ಯ ಸರ್ಕಾರಕ್ಕೆ ಪತ್ರ
ಸಾಲದ ವಿವರ
ವೈಯಕ್ತಿಕ ಸಾಲ 2,05,000 ರೂ (ಅನಿಲ್ ಗೌಡ ಎಚ್) ಹಾಗೂ 56, 58, 316 ರೂ (ಎ ಬಿಎಚ್ ಇನ್ಫ್ರಾಸ್ಟ್ರಕ್ಚರ್ಸ್) ಹೆಸರಿನಲ್ಲಿ ಸಾಲ ಹೊಂದಿದ್ದಾರೆ.
ಚಿನ್ನ-ಬೆಳ್ಳಿ ವಿವರ
1,100 ಗ್ರಾಂ 45,00,000 ರೂ ಮೌಲ್ಯ (ಗಿಫ್ಟ್) ಹೊಂದಿದ್ದಾರೆ.
ಚರಾಸ್ತಿ ವಿವರ
ಕುಸುಮ ಅವರು ಒಟ್ಟು ಚರಾಸ್ತಿ ಮೊತ್ತ 1,13,02,197. 38 ರೂ
ಕೃಷಿ, ವಾಣಿಜ್ಯ ಭೂಮಿ, ಸ್ಥಿರಾಸ್ತಿ ವಿವರ ವಿಭಾಗದಲ್ಲಿ ತಮ್ಮ ಹೆಸರಿನಲ್ಲಿ ಯಾವುದೇ ಕೃಷಿ ಭೂಮಿ ಇಲ್ಲ
ಬಿಬಿಎಂಪಿ ವಾರ್ಡ್ 40ರಲ್ಲಿ 1500 ಚದರ ಅಡಿ ಹಾಗೂ 2380 ಚದರಡಿ ವಿಸ್ತೀರ್ಣದ ಎರಡು ನಿವೇಶನ (ಮೌಲ್ಯ 17, 84, 575 ರೂ.)
ಎರಡು ಆಸ್ತಿಯ ಸದ್ಯದ ಮಾರುಕಟ್ಟೆ ಮೌಲ್ಯ ಒಟ್ಟು 1,37, 10,000 ರೂ.
ಇದನ್ನೂ ಓದಿ :ಆರ್.ಆರ್ ನಗರಕ್ಕೆ ಮುನಿರತ್ನ, ಶಿರಾಗೆ ಡಾ.ರಾಜೇಶ್ ಗೌಡ ಬಿಜೆಪಿ ಟಿಕೆಟ್..!
ತೆರಿಗೆ ತುಂಬಿದ ವಿವರ
2019-20ನೇ ಆರ್ಥಿಕ ವರ್ಷದಲ್ಲಿ 3,673,870 ಐಟಿ ರಿಟರ್ನ್ ಫೈಲ್ ಮಾಡಿದ್ದಾರೆ. 2018-19ರಲ್ಲಿ 48,00,000 ರೂ ಹಾಗೂ 2017-18ರಲ್ಲಿ 6,00,000 ರು ಐಟಿ ರಿಟನ್ರ್ಸ್ ತೋರಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel