ಆರು ಮಂತ್ರಿಗಳು ರಾಜೀನಾಮೆ ನೀಡೋವರೆಗೆ ಧರಣಿ : ಸಿದ್ದರಾಮಯ್ಯ
ಬೆಂಗಳೂರು : ಆರು ಮಂತ್ರಿಗಳು ರಾಜೀನಾಮೆ ನೀಡುವವರೆಗೂ ನಾವು ಸದನದಲ್ಲಿ ಧರಣಿ ಮುಂದುವರೆಸುತ್ತೇವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ನ್ಯಾಯಯುತ ಬೇಡಿಕೆಗಳನ್ನ ಮಾಡಿದ್ದೇವೆ. ಸಂತ್ರಸ್ತ ಹೆಣ್ಣುಮಗಳನ್ನ ಕೂಡನೇ ಪತ್ತೆ ಹಚ್ಚಿ ರಕ್ಷಣೆ ನೀಡಬೇಕು.
ಆಕೆ ವಿಡಿಯೋದಲ್ಲಿ ರಮೇಶ್ ಜಾರಕಿಹೊಳಿ ನನ್ನನ್ನು ಬಳಸಿಕೊಂಡ್ರು ಅಂತ ಹೇಳಿದ್ದಾಳೆ. ಸಮ್ಮತಿ ಇಲ್ಲದೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ. ಹೀಗಾಗಿ ರಮೇಶ್ ವಿರುದ್ಧ ರೇಪ್ ಕೇಸ್ ದಾಖಲಿಸಬೇಕು.
ಜೊತೆಗೆ ಆರು ಮಂತ್ರಿಗಳು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಇನ್ನು ಈ ಪ್ರಕರಣ ಹೈಕೋರ್ಟ್ ಸಿಜೆ ನೇತೃತ್ವದಲ್ಲಿ ತನಿಖೆ ಆಗಬೇಕು. ಎಸ್ ಐಟಿ ಮೇಲೆ ನಮಗೆ ನಂಬಿಕೆ ಇಲ್ಲ. ಎಸ್ ಐಟಿಯಿಂದ ಸತ್ಯ ಹೊರಬರಲು ಸಾಧ್ಯವಿಲ್ಲ.
ನಮಗೆ ಹೆಣ್ಣುಮಗಳಿಗೆ ರಕ್ಷಣೆ ಕೊಡಲಾಗದಿದ್ರೆ ನಾವು ಯಾಕೆ ಅಸೆಂಬ್ಲಿಗೆ ಬರಬೇಕು. ಎಲ್ಲಿ ಹೆಣ್ಣುಮಕ್ಕಳನ್ನ ಪೂಜಿಸ್ತಾರೆ ಅಲ್ಲಿ ಗೌರವ ಹೆಚ್ಚುತ್ತೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಇದೆ ವೇಳೆ ಇವರು ಒಂದಾದ್ರೂ ತನಿಖೆಯನ್ನು ಸಿಬಿಐಗೆ ನೀಡಿದ್ದಾರಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಸೋಮೇಂದು ಮುಖರ್ಜಿ ನೇತೃತ್ವದಲ್ಲಿ ಎಸ್ ಐಟಿ ಮಾಡಿ ಸರ್ಕಾರಕ್ಕೆ ವರದಿ ಕೊಡುವಂತೆ ಹೇಳಿದ್ದಾರೆ.
ಎಸ್ ಐಟಿ ಕೋರ್ಟ್ ಗೆ ವರದಿ ನೀಡಬೇಕೇ ಹೊರತು ಸರ್ಕಾರಕ್ಕೆ ಅಲ್ಲ. ಹೀಗಾಗಿ ನಾವು ನಮ್ಮ ಧರಣಿ ಮುಂದುವರೆಸುತ್ತೇವೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.