ಕಲಬುರಗಿ: ಮಹಾಮಾರಿ ಕೊರೊನಾ ಅಬ್ಬರಕ್ಕೆ ರಾಜ್ಯ ತತ್ತರಿಸಿ ಹೋಗಿದೆ. ಲಾಕ್‌ಡೌನ್ ಮಾಡಿ ಹೆಚ್ಚು ಜನರು ಸೇರುವ ಸರ್ಕಾರಿ, ಖಾಸಗಿ ಸಮಾರಂಭಗಳನ್ನು ನಿಷೇಧಿಸಲಾಗಿದೆ. ಆದರೆ ಇಲ್ಲೊಬ್ಬ ಪೊಲೀಸ್ ಇನ್ಸ್ ಪೆಕ್ಟರ್ ರೊಬ್ಬರು ಕೊರೊನಾ ಸಮಯದಲ್ಲಿ ಅದ್ದೂರಿ ಬರ್ತಡೆ ಆಚರಣೆ ಮಾಡಿಕೊಂಡಿದ್ದು, ಭಾರಿ ಟೀಕೆಗೆ ಗುರಿಯಾಗಿದೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಠಾಣೆಯ ಪಿಎಸ್‌ಐ ಮಲ್ಲಣ್ಣ ಯಲಗೋಡ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಪಿಎಸ್‌ಐ ಸಾಹೇಬ್ರ ಬರ್ತಡೇ ಅಂದ್ರೆ ಲೆವೆಲ್ ಕಮ್ಮೀನಾ ಅಂತ ಅವ್ರ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿ ಖುಷಿಪಟ್ಟಿದ್ದಾರೆ. ಪಿಎಸ್‌ಐ ಸಾಹೇಬ್ರು ಹಾಲಿನ ಅಭಿಷೇಕ ಮಾಡಿಸಿಕೊಂಡ ವಿಡಿಯೋ ಸಾಮಾಜಿಕ ತಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.
ಕಾನೂನು ರಕ್ಷಕರಿಂದಲೇ ಕಾನೂನು ಉಲ್ಲಂಘನೆ ಮಾಡದರೆ ಹೇಗೆ. ಅಭಿಮಾನಿಗಳು ಬರ್ತಡೇ ಆಚರಿಸುತ್ತಾರೆಂದು ಪಿಎಸ್‌ಐ ಹಾಲಿನ ಅಭಿಷೇಕ ಮಾಡಿಸಿಕೊಂಡಿದಿದ್ದಾರೂ ಹೇಗೆ. ಸಾಮಾಜಿಕ ಅಂತರ ಇಲ್ಲ, ಮಾಸ್ಕ್ ಇಲ್ಲದೆ ಅದ್ದೂರಿ ಬರ್ತಡೆ ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿ ಮಲ್ಲಣ್ಣ ಪಾಲ್ಗೊಳ್ಳುವ ಮುನ್ನ ಯೋಚನೆ ಮಾಡಲಿಲ್ಲವೇ ಎಂಬ ಪ್ರಶ್ನೆಯನ್ನು ಜನರು ಕೇಳುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆದ್ರೂ ಹಿರಿಯ ಪೊಲೀಸ್ ಅಧಿಕಾರಿಗಳು ಚಕಾರ ಎತ್ತಿಲ್ಲ. ಲಾಕ್‌ಡೌನ್ ವೇಳೆ ಜನರ ಮೇಲೆ ಪೊಲೀಸರು ಲಾಠಿ ಬೀಸಿದರು. ಆಗ ಇದ್ದ ಪೌರುಷ ಈಗ ಎಲ್ಲಿ ಹೋಯ್ತು, ಈಗಲಾದರೂ ಎಚ್ಚೆತ್ತು ಕ್ರಮಕೈಗೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ.








