ಆರೋಪಿಗಳಿಗೆ ಜಾಮೀನು ನೀಡದಂತೆ ಸಿಐಡಿ ನ್ಯಾಯಲಯಕ್ಕೆ ಮನವಿ
ಕಲಬುರಗಿ: ರಾಜ್ಯದಲ್ಲಿ ಸಂವನ ಸೃಷ್ಟಿಸಿರುವ ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡದಂತೆ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದಾರೆ.
ಕಳದೆ 15 ದಿನಗಳಿಂದ ತಲೆ ಮರೆಸಿಕೊಂಡಿರುವ ಜ್ಞಾನಜ್ಯೋತಿ ಶಾಲೆಯ ಮುಖ್ಯಸ್ಥೆ ದಿವ್ಯಾ ಹಾಗರಗಿ, ಪ್ರಾಂಶುಪಾಲ ಕಾಶಿನಾಥ್ ಮತ್ತು ಮಂಜುನಾಥ್ ಮೇಳಕುಂದಿ, ಅರ್ಚನಾ ಹೊನಗೇರಿ ಮತ್ತು ಸುನಂದಾ ಸಿಐಡಿ ತನಿಖೆಯಿಂದ ತಲೆ ಮರೆಸಿಕೊಂಡು ಅಜ್ಞಾತ ಸ್ಥಳದಲ್ಲಿ ವಾಸವಾಗಿದ್ದಾರೆ.
ಅಜ್ಞಾತ ಸ್ಥಳದಿಂದಲೇ ದಿವ್ಯಾ & ಟೀಮ್ ನೀರಿಕ್ಷಣಾ ಜಾಮೀನು ಕೋರಿ ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ಆದರೀಗ ನೀರಿಕ್ಷಣಾ ಜಾಮೀನಿಗೆ ಸಿಐಡಿ ತಕರಾರು ಅರ್ಜಿ ಸಲ್ಲಿಸಿದೆ. ಇದು ಸಂಘಟಿಕ ಅಪರಾಧ, ಜಾಮೀನು ಕೊಟ್ಟರೆ ಸಾಕ್ಷಿ ನಾಶ ಪಡಿಸುವ ಸಾಧ್ಯತೆ ಇದೆ. ಹಾಗಾಗಿ ಈ ಐವರಿಗೆ ನಿರೀಕ್ಷಣಾ ಜಾಮೀನು ನೀಡಬೇಡಿ ಎಂದು ಕಲಬುರಗಿಯ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ಸಿಐಡಿ ತಕರಾರು ಅರ್ಜಿ ಸಲ್ಲಿಸಿದೆ.
ಅಲ್ಲದೇ ತನಿಖೆಯಲ್ಲಿ ಮತ್ತೊಂದು ವಿಚಾರ ಬೆಳಕಿಗೆ ಬಂದಿದೆ. ಪಿಎಸ್‍ಐ ಪರೀಕ್ಷೆ ಅಕ್ರಮಕ್ಕೆ ಕೊರೊನಾದಿಂದ ಮೃತಪಟ್ಟ ನೌಕರನ ಮೊಬೈಲ್‍ನನ್ನು ಕಿಂಗ್‍ಪಿನ್ ಆರ್.ಡಿ. ಪಾಟೀಲ್ ಬಳಸುತ್ತಿದ್ದ ಎನ್ನುವ ವಿಚಾರ ತನಿಖೆಯಲ್ಲಿ ಬಯಲಾಗಿದೆ.
ತಮ್ಮ ಬಳಿಯಿರುವ ಮೊಬೈಲ್ ಬಳಸಿದರೆ ಪ್ರಕರಣ ಬಯಲಿಗೆ ಬರುತ್ತದೆ ಎಂದು ಮೃತ ವ್ಯಕ್ತಿಯ ಮೊಬೈಲ್‍ನ್ನು ಬಳಸುತ್ತಿದ್ದೆ ಎಮದು ಒಪ್ಪಿಕೊಂಡಿದ್ದಾನೆ. ಎರಡು ದಿನಗಳ ಹಿಂದೆ ಆರ್‌ಡಿ ಪಾಟೀಲ್ ಸ್ನೇಹಿತ ಮಂಜುನಾಥ್ ಮಲ್ಲುಗೌಡನನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರನ್ನು ಕಲಬುರಗಿ ಜೆಎಮ್‍ಎಫ್‍ಸಿ ಕೋರ್ಟ್ 13 ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಿದೆ.