PSI ಅಕ್ರಮ ನೇಮಕಾತಿ ಪ್ರಕರಣ – ಪ್ರಕರಣದ ಕಿಂಗ್ ಪಿನ್ ಮಂಜುನಾಥ್ ಮೇಳಕುಂದಿ ಸ್ವತಃ ಶರಣು
545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಕಿಂಗ್ಪಿನ್ ಮಂಜುನಾಥ ಮೇಳಕುಂದಿ ಸ್ವತಃ ಶರಣಾಗಿದ್ದಾರೆ.
ಕಳೆದ 21 ದಿನಗಳಿಂದ ನಾಪತ್ತೆಯಾಗಿದ್ದ ಸಣ್ಣ ನೀರಾವರಿ ಇಲಾಖೆಯ AE ಮಂಜುನಾಥ್ ಇಂದು ಮಧ್ಯಾಹ್ನ ಕಲಬುರಗಿಯಲ್ಲಿರುವ ಸಿಐಡಿ ಕಚೇರಿಗೆ ಆಟೋದಲ್ಲಿ ಆಗಮಿಸಿದ ಶರಣಾಗಿದ್ದಾರೆ.
ನಾನು ಯಾವುದೇ ತಪ್ಪು ಮಾಡಿಲ್ಲ, ನನ್ನ ಆರೋಗ್ಯ ಸರಿಯಿರಲಿಲ್ಲ. ಹೀಗಾಗಿ ಮಂಗಳೂರಿಗೆ ಹೋಗಿದ್ದೆ ಎಂದ ಮಂಜುನಾಥ ಮೇಳಕುಂದಿ. ಇಂದು ಮುಂಜಾನೆಯೇ ನಾನು ಕಲಬುರಗಿ ನಗರಕ್ಕೆ ಬಂದಿದ್ದೇನೆ. ನನ್ನ ಮೇಲೆ ಆರೋಪವಿರುವ ಕಾರಣಕ್ಕೆ ಸಿಐಡಿ ಮುಂದೆ ಶರಣಾಗಲು ಬಂದಿದ್ದೇನೆ ಎಂದು ಮಂಜುನಾಥ ಹೇಳಿದ್ದಾರೆ.
ಇನ್ನೂ ಪಿಎಸ್ಐ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಸಿಐಡಿ ಪೊಲೀಸರು ಏಳು ಜನರ ಆರೋಪಿಗಳನ್ನ ವೈದ್ಯಕೀಯ ತಪಾಸಣೆಗೆ ಕರೆದೊಯ್ದಿದ್ದಾರೆ.
PSI ಕೇಸ್ ಸಂಬಂಧ ದಿವ್ಯಾ ಹಾಗರಗಿ ಮತ್ತು ಗ್ಯಾಂಗ್ಗೆ ಮೆಡಿಕಲ್ ಟೆಸ್ಟ್ ಮಾಡಿಸಲು ಮುಂದಾಗಿದ್ದು, ಕಲಬುರಗಿ ಸಿಐಡಿ ಕಚೇರಿಯಿಂದ ವೈದ್ಯಕೀಯ ತಪಾಸಣೆಗೆ ಜಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ದಿವ್ಯಾ ಹಾಗರಗಿ, ಅರ್ಚನಾ, ಜ್ಯೋತಿ ಪಾಟೀಲ್, ಸುರೇಶ್ ಕಾಟೇಗಾಂವ್, ಸುನೀತಾ ಸೇರಿದಂತೆ ಏಳು ಜನರ ವೈದ್ಯಕೀಯ ತಪಾಸಣೆ ಮಾಡಿಸಲಾಗುತ್ತಿದೆ.