PSI ದೈಹಿಕ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ : ಪ್ರಿಯಾಂಕ ಖರ್ಗೆ
ಕಲಬುರಗಿ: PSI ನೇಮಕತಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು, ಇದೀಗ ದೈಹಿಕ ಪರೀಕ್ಷೆಯಲ್ಲೂ ಅಕ್ರಮ ನೇಮಕಾತಿ ನಡೆದಿದೆ ಎಂದು ಹೇಳುವ ಮೂಲಕ ಶಾಸಕ ಪ್ರಿಯಾಂಕ ಖರ್ಗೆ ಹೊಸ್ ಬಾಂಬ್ ಸಿಡಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು 02-08-2021ರಂದು ಬೆಳಗಾವಿಯಲ್ಲಿ ಬಾಳೆ ಶರಣಬಸಪ್ಪ ದೂರದುಂಡಿ ಎ-1 ಆರೋಪಿ. ಈತನ ಮೇಲೆ ನಿಗದಿತ ಎತ್ತರ ಇರದ ಆರೋಪ ಇದೆ. ತಲೆ ಮೇಲೆ ಮೂರು ವಿಗ್ ಹಾಕಿ ನೇಮಕಾತಿಯಲ್ಲಿ ಬರುವ ಹಾಗೆ ಮಾಡಿದ್ದಾರೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ಹಾಗೇ ಉಮೇಶ್ ಅನ್ನೋ ಅಭ್ಯರ್ಥಿ ಕೂಡ ಎತ್ತರ ಇಲ್ಲದಿದ್ದರೂ ತಲೆ ಮೇಲೆ ಕರಿ ಬಣ್ಣದ ವಿಗ್ ಹಾಕಿಕೊಂಡು ಪರೀಕ್ಷೆಗೆ ಹಾಜರಾಗಲು ಬಂದಿದ್ದ ಹೀಗಾಗಿ ಬೆಳಗಾವಿ ಮಾರ್ಕೆಟ್ ಸ್ಟೇಷನ್ನಲ್ಲಿ ಎರಡನೇ ದೂರು ದಾಖಲಾಗಿದೆ. ಎಂದು ಖರ್ಗೆ ಮಾಹಿತಿ ನೀಡಿದರು.
ಈಗ ಒಂದು ಪರೀಕ್ಷಾ ಕೇಂದ್ರದ ಬಗ್ಗೆ ಮಾತ್ರ ಗಮನಹರಿಸಲಾಗಿದೆ ಅಷ್ಟೇ. ರಾಜ್ಯದ ಬೇರೆ ಬೇರೆ ಪರೀಕ್ಷಾ ಕೇಂದ್ರಗಳ ಬಗ್ಗೆಯೂ ತನಿಖೆ ಮಾಡಬೇಕು. 250ಕ್ಕೂ ಹೆಚ್ಚು ಅಭ್ಯರ್ಥಿಗಳು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಸರ್ಕಾರದವರೇ ಹೇಳ್ತಿದ್ದಾರೆ. 545 ಜನರಲ್ಲಿ ದೈಹಿಕ ಪರೀಕ್ಷೆ ಪಾಸಾದವರೆಷ್ಟು?. ಯಾರ ಯಾರ ಮೇಲೆ ದೂರಿದೆ, ಅವರ ದೈಹಿಕ ಪರೀಕ್ಷೆ ಮತ್ತೊಮ್ಮೆ ಮಾಡಿ ಎಂದರು.
ಈಗಾಗಲೇ ಸರ್ಕಾರ ಮರು ಪರೀಕ್ಷೆ ನಡೆಸುವುದಾಗಿಯೂ ತಿಳಿಸಿದೆ. ಆದ್ರೆ ಈ ಮರು ಪರೀಕ್ಷೆ ಪೇಪರ್ ಒಂದಕ್ಕೋ, ಪೇಪರ್ ಎರಡಕ್ಕೋ ಅಥವಾ ಫಿಜಿಕಲ್ಗೂ ಇದೆಯೇ? ಎಂದು ಪ್ರಶ್ನಿಸಿದರು.