PSI ಮರು ಪರೀಕ್ಷೆ ಬೆಂಬಲ ಸೂಚಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ
ಬೆಂಗಳೂರು: ಸರಕಾರ PSI ಮರು ಪರೀಕ್ಷೆ ನಡೆಸಲು ನಿರ್ಧರಿಸಿದ್ದು, ಇದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಬೆಂಬಲ ಸೂಚಿಸಿದ್ದಾರೆ.
ಟಿ ನರಸೀಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು PSI ಅಕ್ರಮದಲ್ಲಿ ಯಾರು ತಪ್ಪು ಮಾಡಿದ್ದಾರೆ, ಯಾರು ಸರಿ ಇದ್ದಾರೆ ಗೊತ್ತಾಗಲ್ಲಾ. ಈ ಸಂಬಂಧ ತನಿಕೆ ನಡೆದಿದ್ದು, 20 ಜನರ ಬಂಧನವಾಗಿದೆ. ಈಗ ಮರು ಪರೀಕ್ಷೆ ಮಾಡುವುದು ಸರಿ ಇದೆ. ಆದರೆ ಈಗಾಗಲೇ ಪರೀಕ್ಷೆ ಬರೆದಿರುವ ಯಾರ ಬಳಿಯೂ ಕಡಾ ಮತ್ತೆ ಪರೀಕ್ಷಾ ಶುಲ್ಕ ಪಡೆಯಬಾರದು ಎಂದು ಹೇಳಿದ್ದಾರೆ.
ಇನ್ನೂ ಬಿಜೆಪಿ ವಿರುದ್ಧ ಹರಿಹಾಯ್ದ ಅವರು ಇವರ ದುರಾಡಳಿತದಿಂದ ಇಂತಹ ಘಟನೆಗಳು ಮರುಕಳಿಸುತ್ತವೆ. ಗೃಹ ಸಚಿವ ಅರಗ ಜ್ಞಾನೇಂದ್ರ ಒಂದು ಕ್ಷಣವು ಪದವಿಯಲ್ಲಿ ಮುಂದುವರೆಯಬಾರದು. ಈ ಬಗ್ಗೆ ಮುಖ್ಯಮಂತ್ರಿಗಳು ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಅಲ್ಲದೇ ಬಂಧಿತ ಆರೋಪಿ ದಿವ್ಯಾ ಹಾಗರಗಿ ಸತ್ಯ ಹೇಳಬೇಕಲ್ವಾ? ಇದರ ಹಿಂದೆ ಯಾರಿದ್ದಾರೆ? ಹೇಗೆ ಪ್ರಶ್ನೆ ಪತ್ರಕೆ ಲೀಕ್ ಆಯ್ತು? ಎಲ್ಲಾ ಗೊತ್ತಾಗಬೇಕಲ್ವಾ? ಈ ಬಗ್ಗೆ ತನಿಕೆ ಆಗಲಿ ಎಂದರು.
ಹಾಗೇ ಶಾಸಕ ಪ್ರಿಯಾಂಕ್ ಖರ್ಗೆಗೆ ಸಿಐಡಿ ನೋಟಿಸ್ ವಿಚಾರವಾಗಿ, ಪ್ರಿಯಾಂಕ್ ಖರ್ಗೆಗೆ ನೋಟಿಸ್ ನೀಡುವ ಅಗತ್ಯವಿಲ್ಲ. ಅವರ ಬಳಿ ಏನು ದಾಖಲೆ ಇದೆಯೋ ಅದನ್ನ ಕೇಳಬಹುದಿತ್ತು. ಪ್ರಕರಣ ಸಂಬಂಧ ತನಿಖಾಧಿಕಾರಿಗಳು ಸಾಕ್ಷ್ಯ ಸಂಗ್ರಹಿಸಬೇಕು. ಅದನ್ನು ಬಿಟ್ಟು ನೋಟಿಸ್ ಯಾಕೆ ಕೊಡಬೇಕು ಎಂದ ಪ್ರಶ್ನಿಸಿದರು.








