BJP | ಖರ್ಗೆ ಕುಟುಂಬದವರು ಸಂವಿಧಾನಕ್ಕೆ ಅತೀತರೇ?
ಬೆಂಗಳೂರು : ಪಿಎಸ್ ಐ ನೇಮಕಾತಿ ಅಕ್ರಮ ಕಿಂಗ್ ಪಿನ್ ರುದ್ರಗೌಡ ಅರೆಸ್ಟ್ ವಿಚಾರಕ್ಕೆ ಸಂಬಂಧಿಸಿದ್ದ ರಾಜ್ಯ ಬಿಜೆಪಿ ಘಟಕ ಟ್ವಿಟ್ ಮಾಡಿ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ದ ಕಿಡಿಕಾರಿದೆ.
ಪಿಎಸ್ಐ ನೇಮಕ ಹಗರಣ ಆರೋಪಿಗಳಾದ ರುದ್ರೇಗೌಡ ಪಾಟೀಲ್ ಸಹೋದರರು ಪ್ರಿಯಾಂಕ್ ಖರ್ಗೆ ಅತ್ಯಾಪ್ತರು.
ಖರ್ಗೆ ಕುಟುಂಬಕ್ಕೆ ಆರೋಪಿಗಳು ನಿಷ್ಠರಾಗಿದ್ದಾರೆ. ಈ ಆರೋಪಿಗಳೇ ಹಗರಣದ ಪ್ರಧಾನ ಸೂತ್ರಧಾರರು. ಈ ಬಗ್ಗೆಯಾದರೂ ಸಿಐಡಿಗೆ ಸ್ಪಷ್ಟನೆ ನೀಡಿ ಎಂದು ಬಿಜೆಪಿ ಕುಟುಕಿದೆ.
ಸಿಐಡಿ ಪೊಲೀಸರು ಪ್ರಿಯಾಂಕ್ ಖರ್ಗೆ ಅವರಿಗೆ ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ ಅನ್ವಯ ನೋಟಿಸ್ ನೀಡಿದ್ದಾರೆ.
ಇದಕ್ಕೆ ಉತ್ತರಿಸುವುದು ಖರ್ಗೆ ಅವರ ಸಂವಿಧಾನ ಬದ್ಧ ಕರ್ತವ್ಯ.
ಖರ್ಗೆ ಕುಟುಂಬದವರು ಸಂವಿಧಾನಕ್ಕೆ ಅತೀತರೇ? ಅಥವಾ ಹಕ್ಕುಗಳಿಗೆ ಮಾತ್ರ ಭಾಜನರೇ ?#CONgressPSIToolkit
— BJP Karnataka (@BJP4Karnataka) May 10, 2022
ಸಿಐಡಿ ಪೊಲೀಸರು ಪ್ರಿಯಾಂಕ್ ಖರ್ಗೆ ಅವರಿಗೆ ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ ಅನ್ವಯ ನೋಟಿಸ್ ನೀಡಿದ್ದಾರೆ.
ಇದಕ್ಕೆ ಉತ್ತರಿಸುವುದು ಖರ್ಗೆ ಅವರ ಸಂವಿಧಾನ ಬದ್ಧ ಕರ್ತವ್ಯ. ಖರ್ಗೆ ಕುಟುಂಬದವರು ಸಂವಿಧಾನಕ್ಕೆ ಅತೀತರೇ? ಅಥವಾ ಹಕ್ಕುಗಳಿಗೆ ಮಾತ್ರ ಭಾಜನರೇ ಎಂದು ಬಿಜೆಪಿ ಪ್ರಶ್ನಿಸಿದೆ. PSI recruitment karnataka bjp slams priyank kharge