ಮಂಗಳೂರು, ಮೇ 19 : ಪದವಿ ಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಸಿದ್ಧತೆ ನಡೆಸಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಮೌಲ್ಯ ಮಾಪನಕ್ಕಾಗಿ ಬೆಂಗಳೂರಿಗೆ ತೆರಳ ಬೇಕಾದ ಉಪನ್ಯಾಸಕರಲ್ಲಿ ಆತಂಕ ಮನೆ ಮಾಡಿದೆ. ಅಂಗ್ಲ ಭಾಷಾ ಉತ್ತರ ಪತ್ರಿಕೆಯ ಮೌಲ್ಯಮಾಪನ ಹೊರತು ಪಡಿಸಿ ಇತರ ಪತ್ರಿಕೆಗಳ ಮೌಲ್ಯ ಮಾಪನ ಸದ್ಯದಲ್ಲೇ ನಡೆಯಲಿದ್ದು, ಮೌಲ್ಯ ಮಾಪನ ಶಿಬಿರಗಳ ಮೇಲ್ವಿಚಾರಕರಿಗೆ ಜ್ಞಾಪನಾ ಪತ್ರವನ್ನು ಸರ್ಕಾರ ಕಳುಹಿಸಿ ಕೊಟ್ಟಿದೆ. ಆದರೆ ಕೊರೊನಾದ ಭೀತಿಯಿಂದ ರಾಜ್ಯದ ವಿವಿಧ ಜಿಲ್ಲೆಗಳ ಉಪನ್ಯಾಸಕರು ಬೆಂಗಳೂರಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಹಿಂದಿ, ಸಂಸ್ಕೃತ, ಸಂಖ್ಯಾ ಶಾಸ್ತ್ರ, ಕಂಪ್ಯೂಟರ್ ಸಾಯನ್ಸ್ ಮೊದಲಾದ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಕೇಂದ್ರ ಬೆಂಗಳೂರಿನಲ್ಲಿ ಮಾತ್ರವೇ ಇದ್ದು, ವಿವಿಧ ಜಿಲ್ಲೆಗಳ ಉಪನ್ಯಾಸಕರು ಬೆಂಗಳೂರಿಗೆ ತೆರಳುತ್ತಿದ್ದರು. ಆದರೆ ಈ ಬಾರಿ ಕೊರೊನಾ ಸೋಂಕಿನ ಭೀತಿ ಬೆಂಗಳೂರಿಗೆ ತೆರಳಲು ಹಿಂದೇಟ
ಹಾಕುವಂತೆ ಮಾಡಿದೆ.
ಆಮಿರ್ ಖಾನ್ ಬದುಕಲ್ಲಿ ಹೊಸ ಪ್ರೀತಿ – 25 ವರ್ಷಗಳ ಹಿಂದಿನ ಪರಿಚಯ ಪ್ರಣಯದ ಹಾದಿಗೆ
ಬಾಲಿವುಡ್ನ ಖ್ಯಾತ ನಟ ಆಮಿರ್ ಖಾನ್, ತಮ್ಮ ವೈಯಕ್ತಿಕ ಜೀವನದಲ್ಲಿ ಮತ್ತೊಮ್ಮೆ ಪ್ರೀತಿಯ ಚಿಗುರು ಕಂಡಿದ್ದಾರೆ. ಮಾರ್ಚ್ 13 ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, ಅವರು ತಮ್ಮ...