ಮಡಿಕೇರಿ: ಕೊಡಗು ಜಿಲ್ಲೆಯ ಗಡಿ ಪಿರಿಯಾಪಟ್ಟಣ, ಹುಣಸೂರು, ಹಾಸನ ಭಾಗದಲ್ಲಿ ರೈತರು ರಸ್ತೆ ಮೇಲೆ ಒಕ್ಕಣೆ ಮಾಡುವುದು ಕಂಡು ಬಂದರೆ ಸಂಬಂಧಿಸಿದ ರೈತರ ಮೇಲೆ ಕ್ರಿಮಿನಲ್ ಕೇಸ್ ಹಾಕಲು ಲೋಕೋಪಯೋಗಿ ಇಲಾಖೆ ನಿರ್ಧರಿಸಿದೆ.
ಇತ್ತೀಚೆಗೆ ಒಕ್ಕಣೆ ಮಾಡುತ್ತಿದ್ದ ರಸ್ತೆ ಮೇಲೆ ತೆರಳಿದ ಕಾರಿಗೆ ಬೆಂಕಿ ತಗುಲಿದ ನಂತರ ಎಚ್ಚೆತ್ತುಕೊಂಡ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.
ಇದಲ್ಲದೆ ದ್ವಿಚಕ್ರ ವಾಹನಗಳು ಸಹ ಬಿದ್ದು ಸವಾರರಿಗೆ ಪ್ರಾಣಾಪಾಯ ಸಂಭವಿಸಿರುವುದರಿಂದ ಇಂತಹ ಒಕ್ಕಣೆ ನಡೆಯುತ್ತಿರುವುದು ಕಂಡು ಬಂದರೆ ಇಲಾಖೆಗೆ ಸಾರ್ವಜನಿಕರೂ ತಿಳಿಸುವಂತೆ ಮನವಿ ಮಾಡಲಾಗಿದೆ.
ರಾಜ್ಯದ ಇತರೆ ಜಿಲ್ಲೆಗಳಲ್ಲೂ ರಸ್ತೆಗಳ ಮೇಲೆ ಭತ್ತ, ಜೋಳ, ರಾಗಿ ಸೇರಿದಂತೆ ಇತರೆ ಬೆಳೆಗಳನ್ನು ಒಕ್ಕಣೆ ಮಾಡುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ರೈತರ ಬಳಿ ಎತ್ತುಗಳನ್ನು ಸಾಕಲು ಆಗದೇ ಇರುವುದು, ಕೂಲಿಕಾರ್ಮಿಕರ ಸಮಸ್ಯೆ ಹಲವು ಕಾರಣಕ್ಕೆ ರೈತರು ರಸ್ತೆ ಮೇಲೆ ಫಸಲು ಹಾಕಿ ವಾಹನಗಳ ಓಡಾಟದಿಂದ ಬೆಳೆಗಳ ಒಕ್ಕಣೆ ಮಾಡಿಕೊಳ್ಳುತ್ತಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel