ಪಿಯುಸಿ ಪರೀಕ್ಷೆ – ಹಿಜಾಬ್ ಸೇರಿದಂತೆ ಯಾವುದೇ ಧಾರ್ಮಿಕ ವಸ್ತ್ರಕ್ಕೆ ಅವಕಾಶ ಇಲ್ಲ
ಪಿಯುಸಿ ಪರೀಕ್ಷೆಯಲ್ಲಿ ಸಮವಸ್ತ್ರ ಧರಿಸಿ ಬರಬೇಕು ಹಿಜಾಬ್ ಸೇರಿ ಯಾವುದೇ ಧಾರ್ಮಿಕ ವಸ್ತ್ರಗಳನ್ನ ಧರಿಸಲು ಅವಕಾಶವಿಲ್ಲ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆದಿರುವ ಶಿಕ್ಷಣ ಸಚಿವರು ಏಪ್ರಿಲ್ 22 ರಿಂದ ಮೇ 18 ವರೆಗೆ 2021-22 ನೇ ಸಾಲಿನ ಪಿಯುಸಿ ಪರೀಕ್ಷೆ ನಡೆಸಲಾಗುತ್ತಿದೆ. ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡಲಾಗುವುದಿಲ್ಲ. ದ್ವಿತಿಯ ಪಿಯುಸಿ ಪರೀಕ್ಷೆ ಬರೆಯಲು ಸಮವಸ್ತ್ರ ಕಡ್ಡಾಯ ಎಂದು ತಿಳಿಸಿದರು.
ಶಿಕ್ಷಕರಿಗೆ ಯವುದೇ ರೀತಿಯ ಸಮವಸ್ತ್ರ ಇಲ್ಲ ಪರೀಕ್ಷೆಗೆ ಗೈರಾದವರಿಗೆ ಪ್ರತಿ ವರ್ಷದಂತೆ ಪೂರಕ ಪರೀಕ್ಷೆ ಇರುತ್ತದೆ. SSLC ಮಾದರಿಯಂತೆ ಸರಳ ರೀತಿಯಲ್ಲಿ ಎಕ್ಸಾಮ್ ಇರಲಿದೆ ಪೋಷಕರು ಮತ್ತು ಶಿಕ್ಷಕರು ಮಕ್ಕಳಿಗೆ ಧೈರ್ಯ ತಂಬಬೇಕು ಎಂದು ನಾಗೇಶ್ ಸಲಹೆ ನೀಡಿದರು.
ಒಟ್ಟು 6,84,255 ಮಕ್ಕಳು ಪರೀಕ್ಷೆಗೆ ನೊಂದಣಿ ಮಾಡಿಸಿಕೊಂಡಿದ್ದಾರೆ. ಈ ಪೈಕಿ 3,46,936 ಬಾಲಕರು, 3,37,319 ಬಾಲಕೀಯರು ಪರೀಕ್ಷೆ ಬರೆಯಲಿದ್ದಾರೆ. ಒಟ್ಟು 1076 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.








