PUC ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ
ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ವೇಳಾಪಟ್ಟಿ ಪ್ರಕಟ
ಏಪ್ರಿಲ್ 22ರಿಂದ ಮೇ 18ರವರೆಗೆ ನಡೆಯಲಿರುವ ಪರೀಕ್ಷೆ
ಏಪ್ರಿಲ್ 22: ತರ್ಕಶಾಸ್ತ್ರ, ಬಿಸಿನೆಸ್ ಸ್ಟಡೀಸ್
ಏಪ್ರಿಲ್ 23: ಗಣಿತ, ಶಿಕ್ಷಣ, ಏಪ್ರಿಲ್ 25: ಅರ್ಥಶಾಸ್ತ್ರ
ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದೆ.
ಪರೀಕ್ಷೆ ಏಪ್ರಿಲ್ 22ರಿಂದ ಮೇ 18ರವರೆಗೆ ನಡೆಯಲಿದೆ.
ಈ ಹಿಂದೆ ಪರೀಕ್ಷೆಯನ್ನು ಏಪ್ರಿಲ್ 22ರಿಂದ ಮೇ 11ರವರೆಗೆ ನಡೆಸುವುದೆಂದು ಹೇಳಲಾಗಿತ್ತು.
ಇದೀಗ ಹೊಸ ವೇಳಾಪಟ್ಟಿ ಪ್ರಕಟವಾಗಿದ್ದು ಇದೇ ಅಂತಿಮ ವೇಳಾಪಟ್ಟಿ ಎಂದು ಹೇಳಿದೆ.
ವೇಳಾಪಟ್ಟಿ ಪ್ರಕಾರ ಪರೀಕ್ಷೆ ಇಂತಿದೆ:
ಏಪ್ರಿಲ್ 22: ತರ್ಕಶಾಸ್ತ್ರ, ಬಿಸಿನೆಸ್ ಸ್ಟಡೀಸ್
ಏಪ್ರಿಲ್ 23: ಗಣಿತ, ಶಿಕ್ಷಣ
ಏಪ್ರಿಲ್ 25: ಅರ್ಥಶಾಸ್ತ್ರ
ಏಪ್ರಿಲ್ 26: ಹಿಂದೂಸ್ತಾನಿ ಸಂಗೀತ, ಮನೋವಿಜ್ಞಾನ, ರಸಾಯನಶಾಸ್ತ್ರ, ಮೂಲ ಗಣಿತ
ಏಪ್ರಿಲ್ 27: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
ಏಪ್ರಿಲ್ 28: ಕನ್ನಡ, ಅರೇಬಿಕ್
ಮೇ 2: ಭೂಗೋಳ, ಜೀವಶಾಸ್ತ್ರ
ಮೇ 4: ಮಾಹಿತಿ ತಂತ್ರಜ್ಞಾನ, ಚಿಲ್ಲರೆ ವ್ಯಾಪಾರ, ಆಟೋಮೊಬೈಲ್, ಆರೋಗ್ಯ ರಕ್ಷಣೆ, ಸೌಂದರ್ಯ ಮತ್ತು ಸ್ವಾಸ್ಥ್ಯ
ಮೇ 5: ಇಂಗ್ಲಿಷ್
ಮೇ 10: ಇತಿಹಾಸ, ಭೌತಶಾಸ್ತ್ರ
ಮೇ 12: ರಾಜ್ಯಶಾಸ್ತ್ರ, ಸ್ಟಾಟಸ್ಟಿಕ್ಸ್
ಮೇ 14: ಸಮಾಜಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್
ಮೇ 17: ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂವಿಜ್ಞಾನ, ಗೃಹ ವಿಜ್ಞಾನ









