ಬೆಂಗಳೂರು : (PUC Supplement Exam Results) ಕಳೆದ ತಿಂಗಳು 07ರಿಂದ 19 ನೇ ತಾರೀಕಿನ ವರೆಗೆ ನಡೆದ ದ್ವಿತೀಯ ಪಿಯುಸಿ ( PUC ) ಪೂರಕ ಪರೀಕ್ಷೆಯ ಫಲಿತಾಶ ಪ್ರಕಟವಾಗಿದೆ. ರಾಜ್ಯದ 305 ಪರೀಕ್ಷಾ ಕೇಂದ್ರದಲ್ಲಿ ನಡೆದಿದ್ದ ಈ ಪರೀಕ್ಷೆಯಲ್ಲಿ 2,12,678 ವಿದ್ಯಾರ್ಥಿಗಳು ಹಾಜರಾಗಿದ್ದರು. ಇದರಲ್ಲಿ 87,784 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಶೇ.41.28ರಷ್ಟು ಫಲಿತಾಂಶ ಬಂದಿದೆ ಎಂದು ಪದವಿ ಪೂರ್ವ ಶಿಕ್ಷಣ ಮಂಡಳಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಇದನ್ನೂ ಓದಿ : ಕೇಂದ್ರ ಮಂತ್ರಿಗಳು, ಎಂಪಿಗಳು ಸತ್ರೆ ಲೋಕಸಭೆ ಮುಚ್ಚೋಕಾಗುತ್ತಾ: ನಾಲಿಗೆ ಹರಿಬಿಟ್ಟ ಸಚಿವ ಈಶ್ವರಪ್ಪ
ಕಲಾ ವಿಭಾಗದಲ್ಲಿ 40,911 ಮಂದಿ ವಿದ್ಯಾರ್ಥಿಗಳು. ವಾಣಿಜ್ಯ ವಿಭಾಗದಲ್ಲಿ 29,062 ವಿಧ್ಯಾರ್ಥಿಗಳು, ವಿಜ್ಞಾನ ವಿಭಾಗದಲ್ಲಿ 17,811 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

2020ರ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶವನ್ನು www.karresults.nic.in ಜಾಲತಾಣದಲ್ಲಿ ಪ್ರಕಟಿಸಲಾಗಿದೆ.








