Puducherry : ನಾಡಬಾಂಬ್ ಸ್ಪೋಟಿಸಿ, ಚಾಕುವಿನಿಂದ ಚುಚ್ಚಿ ಬಿಜೆಪಿ ಕಾರ್ಯಕರ್ತನ ಕೊಲೆ…..
ಕೆಲ ದಿನಗಳ ಹಿಂದೆಯಷ್ಟೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಕಾರ್ಯಕರ್ತನನ್ನ ನಾಡ ಬಾಂಬ್ ಸ್ಪೋಟಿಸಿ ಕೊಲೆ ಮಾಡಿರುವ ಘಟನೆ ಪಾಂಡಿಚೇರಿಯಲ್ಲಿ ನಡೆದಿದೆ. 45 ವರ್ಷದ ಸೆಂಥಿಲ್‌ಕುಮಾರನ್ ಕೊಲೆಯಾದ ವ್ಯಕ್ತಿ ಇವರು ಕನುವಪ್ಪೆಟ್‌ನಿಂದ ವಿಲಿಯನೂರ್‌ನ ವನ್ನಿಯಾರ್ ರಸ್ತೆ ಶಾಲೆವೊಂದರಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಸೆಂಥಿಲ್ ಕುಮಾರನ್ ಗೃಹ ಸಚಿವ ನಮಚಿವಾಯಂ ಅವರ ನಿಕಟ ಸಂಬಂಧಿಯಾಗಿದ್ದ. ಪ್ರಸ್ತುತ ಮಂಗಳಂ ಕ್ಷೇತ್ರದ ಬಿಜೆಪಿ ಉಸ್ತುವಾರಿಯಾಗಿದ್ದಾರೆ.
ನಿನ್ನೆ ರಾತ್ರಿ 9:40 ಗಂಟೆಗೆ ವಿಲಿಯನುವಾರ್ – ವಿಲ್ಲುಪುರಂ ರಸ್ತೆಯಲ್ಲಿರುವ ಹರಿಕಾರನ್ ಬೇಕರಿ ಬಳಿ ನಿಂತು ಚಹಾ ಸೇವಿಸುತ್ತಾ ಬಿಜೆಪಿ ಕೃಷಿ ತಂಡದ ಕಾರ್ಯಕಾರಿಣಿಯೊಂದಿಗೆ ಮಾತನಾಡುತ್ತಿದ್ದರು. ಆಗ ಏಕಾಏಕಿ 3 ಬೈಕ್ ಗಳಲ್ಲಿಮಾಸ್ಕ್ ಧರಿಸಿ ಬಂದಿದ್ದ 7 ಜನರ ತಂಡ ಸೆಂಥಿಲ್ ಕುಮಾರನ್ ಮೇಲೆ ಎರಡು ನಾಡ ಬಾಂಬ್ ಗಳನ್ನು ಎಸೆದಿದೆ. ಹೊಗೆಯಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಸೆಂಥಿಲ್ ಕುಮಾರರನ್ನ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾರೆ.
ಬಿಜೆಪಿ ಮುಖಂಡ ಸೆಂಥಿಲ್ ಕುಮಾರನ್ ಹತ್ಯೆಯ ಸುದ್ದಿ ಹರಡುತ್ತಿದ್ದಂತೆ 500 ಕ್ಕೂ ಹೆಚ್ಚು ಜನರ ಗುಂಪು ಸ್ಥಳಕ್ಕೆ ಆಗಮಿಸಿದೆ. ಸ್ಥಳಕ್ಕೆ ಆಗಮಿಸಿದ ಎಡಿಜಿಪಿ ಆನಂದಮೋಹನ್, ಎಸ್‌ಪಿ. ನರ ಸೈತನ್ಯ, ಎಸ್ಪಿ, ರವಿಕುಮಾರ್, ಮತ್ತು ಇತರ ಪೊಲೀಸರು ಸೆಂಥಿಲ್‌ಕುಮಾರನ್ ಅವರ ದೇಹವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗಾಗಿ ಕತಿರ್ಗಾಮಮ್ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಕೊಲೆಯಾದ ಸೆಂಥಿಲ್‌ಕುಮಾರ್‌ಗೆ ಪತ್ನಿ ಪುನಿತಾ, ಮಗಳು ಕನಿಷ್ಕಾ (17) ಮತ್ತು ಪುತ್ರ ಕಿಶನ್‌ಕುಮಾರ್ (16) ಇದ್ದಾರೆ. ಈ ನಿಟ್ಟಿನಲ್ಲಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದು, ಆರೋಪಿಯನ್ನು ಪತ್ತೆ ಹಚ್ಚುವ ಕಾರ್ಯ ನಡೆಸುತ್ತಿದ್ದಾರೆ.
Puducherry: BJP functionary killed by country bomb; CCTV footage released