ಕೋಕಾ ಕೋಲಾವನ್ನು ಮೊದಲು ರಿಜೆಕ್ಟ್ ಮಾಡಿದ್ದು ಕ್ರಿಸ್ಟಿಯಾನೊ ಅಲ್ಲ… ನಮ್ಮ ಪುಲ್ಲೇಲಾ ಗೋಪಿಚಂದ್…!
ಪುಲ್ಲೇಲಾ ಗೋಪಿಚಂದ್.. ಗೊತ್ತಿರಲೇಬೇಕು.. ಭಾರತದ ಶ್ರೇಷ್ಠ ಬ್ಯಾಡ್ಮಿಂಟನ್ ಆಟಗಾರ. ಆಲ್ ಇಂಗ್ಲೆಂಡ್ ಚಾಂಪಿಯನ್.. ಸೈನಾ ನೆಹ್ವಾಲ್ ಮತ್ತು ಪಿ.ವಿ. ಸಿಂಧೂನಂತರ ಚಾಂಪಿಯನ್ ಆಟಗಾರರನ್ನು ತರಬೇತಿಗೊಳಿಸಿದ್ದ ಖ್ಯಾತಿ ಪುಲ್ಲೇಲಾ ಗೋಪಿಚಂದ್.
ಯುವ ಬ್ಯಾಡ್ಮಿಂಟನ್ ಆಟಗಾರರಿಗೆ ತರಬೇತಿ ನೀಡುತ್ತಿರುವ ಪುಲ್ಲೇಲಾ ಗೋಪಿಚಂದ್ ತಂಪು ಪಾನೀಯಗಳ ಜಾಹಿರಾತಿನಲ್ಲಿ ಯಾವತ್ತಿಗೂ ಕಾಣಿಸಿಕೊಂಡಿಲ್ಲ.
ಸದ್ಯ ಯೂರೋಕಪ್ ಫುಟ್ ಬಾಲ್ ಟೂರ್ನಿಯ ಸುದ್ದಿಗೋಷ್ಠಿಯಲ್ಲಿ ಪೋರ್ಚ್‍ಗಲ್ ನ ಸೂಪರ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಕೋಕಾ ಕೋಲಾ ಬಾಟಲ್ ಗಳನ್ನು ಪಕ್ಕಕ್ಕಿಟ್ಟು ನೀರಿನ ಬಾಟಲ್ ಅನ್ನು ಕೈಗೆತ್ತಿಕೊಂಡಿದ್ದು ದೊಡ್ಡ ಸುದ್ದಿಯಾಗಿದೆ.
ತಂಪು ಪಾನೀಯಗಳನ್ನು ಕುಡಿಯಬೇಡಿ. ಅದರ ಬದಲು ಆರೋಗ್ಯಕ್ಕಾಗಿ ನೀರು ಕುಡಿಯಿರಿ ಎಂಬ ಸಂದೇಶವನ್ನು ಕ್ರಿಸ್ಟಿಯಾನೊ ರೋನಾಲ್ಡೊ ತನ್ನ ಅಭಿಮಾನಿಗಳಿಗೆ ರವಾನಿಸಿದ್ದಾರೆ.
ಕ್ರಿಸ್ಟಿಯಾನೊ ರೋನಾಲ್ಡೊ ಅವರ ಈ ಒಂದು ಸಂದೇಶದಿಂದ ಕೋಕೋ ಕೋಲಾ ಕಂಪೆನಿಯ ಷೇರು ಮಾರುಕಟ್ಟೆ ದರ ಕುಸಿದಿದೆ. ಅಲ್ಲದೆ ಕೋಟ್ಯಂತರ ರೂಪಾಯಿ ನಷ್ಟ ಕೂಡ ಅನುಭವಿಸಿದೆ.
ಅದೇ ರೀತಿ ಫ್ರಾನ್ಸ್ ತಂಡದ ಪೌಲ್ ಪೋಗ್ಬಾ ಕೂಡ ಹೈನೆಕೆನ್ ಬಿಯರ್ ಬಾಟಲ್ ಅನ್ನು ಟೇಬಲ್ ನಿಂದ ಕೆಳಗಿಟ್ಟು ಸುದ್ದಿಯಾಗಿದ್ದರು.
ಆದ್ರೆ ಕ್ರಿಸ್ಟಿಯಾನೊ ರೋನಾಲ್ಡೊ ಮಾಡಿದ್ದು ಸರಿನಾ ತಪ್ಪಾ ಎಂಬ ಚರ್ಚೆಗಳು ಈಗ ಎಲ್ಲೆಡೆ ನಡೆಯುತ್ತಿದೆ.
ಒಂದು ರೀತಿಯಲ್ಲಿ ಕ್ರಿಸ್ಟಿಯಾನೊ ರೋನಾಲ್ಡೊ ಮಾಡಿದ್ದು ಸರಿ ಅಂತ ವಾದ ಕೂಡ ಮಾಡುತ್ತಿದ್ದಾರೆ. ತಂಪು ಪಾನೀಯಗಳು ಆರೋಗ್ಯಕ್ಕೆ ಹಾನಿಕಾರ. ಹೀಗಾಗಿ ಕ್ರಿಸ್ಟಿಯಾನೊ ರೋನಾಲ್ಡೊ ಮಾಡಿದ್ದು ಸರಿಯಾಗಿಯೇ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇನ್ನೊಂದೆಡೆ ಕ್ರಿಸ್ಟಿಯಾನೊ ರೋನಾಲ್ಡೊ ಮಾಡಿರುವುದು ತಪ್ಪು. ಮಾಧ್ಯಮಗಳ ಎದುರು ಹೀರೋ ಆಗಲು ಹೊರಟಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಇದಕ್ಕೆ ಬಲವಾದ ಕಾರಣಗಳಿವೆ. ಯಾಕಂದ್ರೆ ಕ್ರಿಸ್ಟಿಯಾನೊ ರೋನಾಲ್ಡೊ ಅವರು ಈ ಹಿಂದೆ ಕೋಕಾ ಕೋಲಾ ಕಂಪೆನಿಯ ರಾಯಭಾರಿಯಾಗಿ ಜಾಹಿರಾತಿನಲ್ಲಿ ಕೂಡ ಕಾಣಿಸಿಕೊಂಡಿದ್ದರು. ಸಾಮಾಜಿಕ ಜಾಲ ತಾಣದಲ್ಲಿ ಕ್ರಿಸ್ಟಿಯಾನೊ ರೋನಾಲ್ಡೊ ಅವರ ಹಳೆಯ ಜಾಹಿರಾತು ವಿಡಿಯೋವನ್ನು ಶೇರ್ ಮಾಡುತ್ತಿದ್ದಾರೆ.
ಹಾಗಾದ್ರೆ ಯೂರೋ ಕಪ್ ಫುಟ್ ಬಾಲ್ ಟೂರ್ನಿಯ ಸುದ್ದಿಗೋಷ್ಠಿಯಲ್ಲಿ ಕ್ರಿಸ್ಟಿಯಾನೊ ರೋನಾಲ್ಡೊ ಮಾಡಿದ್ದು ಗಿಮಿಕ್ ಅಲ್ವಾ ಅನ್ನೋ ಪ್ರಶ್ನೆ ಕೂಡ ಕಾಡುತ್ತಿದೆ.
ಅಂದ ಹಾಗೇ ಕ್ರಿಸ್ಟಿಯಾನೊ ರೋನಾಲ್ಡೊ ಅವರು ಫಿಟ್ ಆಗಿರುವ ಅಥ್ಲೀಟ್. ಅಲ್ಲದೆ ಅಲ್ಕೋಹಾಲ್ ಕೂಡ ಸೇವಿಸುವುದಿಲ್ಲ. ತಂದೆ ಕುಡಿತದ ಚಟಕ್ಕೆ ಬಿದ್ದು ಸಾವನ್ನಪ್ಪಿರುವುದರಿಂದ ಕ್ರಿಸ್ಟಿಯಾನೊ ಅವರು ಅಲ್ಕೋಹಾಲ್ ನಿಂದ ದೂರವೇ ಉಳಿದಿದ್ದಾರೆ.
ಈ ನಡುವೆ, ನಮ್ಮ ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ಆಟಗಾರ ಪುಲ್ಲೇಲಾ ಗೋಪಿಚಂದ್ ಇವರಿಗಿಂತ ಭಿನ್ನವಾಗಿ ಕಾಣುತ್ತಾರೆ.
ಆಲ್ ಇಂಗ್ಲೆಂಡ್ ಚಾಂಪಿಯನ್ ಬಳಿಕ ಪುಲ್ಲೇಲಾ ಗೋಪಿಚಂದ್ ಭಾರತದ ಸ್ಟಾರ್ ಕ್ರೀಡಾಪಟುವಾಗಿದ್ದರು. ಆಗಿನ ಸಮಯದಲ್ಲಿ ಕೋಕಾ ಕೋಲಾ ಕಂಪೆನಿಯೂ ಪುಲ್ಲೇಲಾ ಗೋಪಿಚಂದ್ ಅವರನ್ನು ರಾಯಭಾರಿಯಾಗಿ ಆಯ್ಕೆ ಮಾಡಲು ಮುಂದಾಗಿತ್ತು.
ಆದ್ರೆ ಪುಲ್ಲೇಲಾ ಗೋಪಿಚಂದ್ ಕೋಕಾ ಕೋಲಾ ಕಂಪೆನಿಯ ಮನವಿಯನ್ನು ನಿರಾಕರಿಸಿದ್ದರು. ಕಾರಣ ತಂಪು ಪಾನೀಯಗಳು ಆರೋಗ್ಯಕ್ಕೆ ಹಾನಿಕರ ಎಂದು ನಂಬಿದ್ದರು.
ಒಟ್ಟಿನಲ್ಲಿ ಕೋಕಾ ಕೋಲಾ ಕಂಪೆನಿಗೆ ಕ್ರಿಸ್ಟಿಯಾನೋ ರೋನಾಲ್ಡೊ ಅವರ ಈ ಒಂದು ನಿರ್ಧಾರದಿಂದ ಸಾವಿರಾರು ಕೋಟಿ ರೂಪಾಯಿ ನಷ್ಟ ಅನುಭವಿಸಿದೆ, ಇಲ್ಲಿ ಕ್ರಿಸ್ಟಿಯಾನೋ ರೋನಾಲ್ಡೊ ಮತ್ತು ಕೋಕಾ ಕೋಲಾ ಕಂಪೆನಿ ನಡುವೆ ಈ ಹಿಂದೆ ಏನಾದ್ರೂ ಜಟಾಪಟಿ ನಡೆದಿತ್ತಾ ಅನ್ನೋ ಅನುಮಾನ ಕೂಡ ಬರುತ್ತಿದೆ.
KSRLPSನಲ್ಲಿ ಉದ್ಯೋಗಾವಕಾಶಗಳು – ಈಗಲೇ ಅರ್ಜಿ ಸಲ್ಲಿಸಿ!
ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸಂಘ (KSRLPS) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಸಂಘವು ಗ್ರಾಮೀಣ ಭಾಗದ ಜೀವನೋಪಾಯವನ್ನು ಬೆಂಬಲಿಸಲು ಹಾಗೂ ಅಭಿವೃದ್ಧಿಗೆ ಕೈಗೊಂಡಿರುವ...