ಮೈಸೂರು: ಸದ ನೇರ-ನಿಷ್ಠುರ ನಡೆ-ನುಡಿ ವ್ಯಕ್ತಿತ್ವದ ಕಾರಣಕ್ಕಾಗಿ ಸಿದ್ದರಾಮಯ್ಯ ವಿರುದ್ಧದ ಕೋಪಕ್ಕೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಸಂಸದರಾಗಿ ಆಯ್ಕೆಯಾಗಿರುವ ವಿ.ಶ್ರೀನಿವಾಸ್ ಪ್ರಸಾದ್, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಆಡಳಿತ ವೈಖರಿ ವಿರುದ್ಧ ಪ್ರಹಾರ ಮುಂದುವರೆಸಿದ್ದಾರೆ.
`ಯಡಿಯೂರಪ್ಪ ಮುಳ್ಳಿನ ಮೇಲೆ ಪಂಚೆ ಹಾಕಿದ್ದಾರೆ. ಪಂಚೆಯನ್ನು ಮುಳ್ಳಿನಿಂದ ಹುಷಾರಾಗಿ ತೆಗೆಯಬೇಕು’ ಎನ್ನುವ ಮೂಲಕ ಬಿಎಸ್‍ವೈ ವಿರುದ್ಧ ಪಕ್ಷದ ನಾಯಕರೊಳಗಿನ ಅಸಮಾಧಾನ ಹಾಗೂ ತಮ್ಮ ಸಿಟ್ಟನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ.

ಅಧಿಕಾರ ಕೆಲವೊಮ್ಮೆ ಎಲ್ಲರನ್ನೂ ಬದಲಾವಣೆ ಮಾಡಿಸಿಬಿಡುತ್ತದೆ. ನಿಗಮ ಮಂಡಳಿ ಆಯ್ಕೆ ವಿಚಾರದಲ್ಲಿ ನನಗೆ ಅತೃಪ್ತಿ ಇದೆ. ಇನ್ನೂ ಉತ್ತಮವಾಗಿ ಅಧ್ಯಕ್ಷರ ನೇಮಕಾತಿ ಮಾಡಬಹುದಿತ್ತು. ಎಲ್ಲರ ಸಲಹೆ ಪಡೆದು ಮಾಡಬಹುದಿತ್ತು ಅನ್ನೋದು ನನ್ನ ಅಭಿಪ್ರಾಯ ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಬೇಸರ ವ್ಯಕ್ತಪಡಿಸಿದ್ದಾರೆ.
ಯಡಿಯೂರಪ್ಪ ಅವರಿಹೆ ಇನ್ನು ಬಾಕಿ ಇರೋದು ಎರಡೂವರೆ ವರ್ಷ ಅಷ್ಟೇ. ಅಷ್ಟರೊಳಗೆ ರಾಜ್ಯದಲ್ಲಿ ಏನಾದರೂ ಮಾಡಬೇಕಲ್ಲವೇ? ಸಿಎಂಗೆ ಕಾರ್ಯದ ಒತ್ತಡ ಇದ್ದೇ ಇರುತ್ತದೆ. ಸಿದ್ದರಾಮಯ್ಯ ಸೋತಿದ್ದು ಇದರಿಂದಲೇ ಅಲ್ಲವೇ? ಸಿಎಂಗೆ ಪರಮಾಧಿಕಾರ ಇರುತ್ತದೆ, ಅದರಂತೆ ಬುದ್ದಿವಂತಿಕೆ ಕೂಡ ಇರಬೇಕು ತಿವಿದಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಬುದ್ದಿ ಇರಲಿಲ್ಲ. ಯಡಿಯೂರಪ್ಪ ಅವರಿಗೂ ಅದನ್ನೇ ಹೇಳುತ್ತಿದ್ದೇನೆ. ಸಿದ್ದರಾಮಯ್ಯ ಮಾಡಿದ ತಪ್ಪನ್ನು ನೀವು ಮಾಡಬೇಡಿ, ಸ್ವಲ್ಪ ಬುದ್ದಿವಂತಿಕೆಯಿಂದ ತೀರ್ಮಾನ ತಗೊಳ್ಳಿ. ಉಪ ಚುನಾವಣೆಯಲ್ಲಿ ಒಳ್ಳೆಯ ಫಲಿತಾಂಶ ಬಂದಿದೆ ಅಂತ ಹಿಗ್ಗಿ ಹೀರೇಕಾಯಿ ಆಗಬೇಕಿಲ್ಲ. ವಿಪಕ್ಷಗಳು ಕುಸಿದು ಹೋಗಿವೆ. ತಿಹಾರ್ ಜೈಲಿನಲ್ಲಿದ್ದವನನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದರೆ ಇನ್ನೇನಾಗುತ್ತದೆ? ಹಾಗಾಗಿ ಅದರ ಲಾಭ ಬಿಜೆಪಿಗೆ ಬಂದಿದೆ ಅಷ್ಟೇ ಎಂದು ವಿಶ್ಲೇಷಿಸಿದ್ದಾರೆ.
ತಾವು ಶಿಫಾರಸು ಮಾಡಿದವರಿಗೆ ನಿಗಮ ಮಂಡಳಿಗಳಲ್ಲಿ ಸಿಎಂ ಯಡಿಯೂರಪ್ಪ ಅಧ್ಯಕ್ಷ ಸ್ಥಾನ ನೀಡದ ಬಗ್ಗೆ ಸಂಸದ ಶ್ರೀನಿವಾಸ್ ಪ್ರಸಾದ್ ಬುಧವಾರವೂ ಅಸಮಾಧಾನ ಹೊರಹಾಕಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








