Pune rains : ಭಾರಿ ಮಳೆಗೆ ರಸ್ತೆಯಲ್ಲಿ ಕೊಚ್ಚಿ ಹೋದ ಕಾರು ಬೈಕ್…
ಮಹಾರಾಷ್ಟ್ರದ ಪುಣೆಯಲ್ಲಿ ಸೋಮವಾರ ಸುರಿದ ಭಾರೀ ಮಳೆಗೆ ಕಾರುಗಳು ಕೊಚ್ಚಿ ಹೋಗಿದ್ದು, ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಪುಣೆಯ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಭಾರೀ ಮಳೆ ನಿಂತಿದ್ದರೂ ಮಂಗಳವಾರ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಸಾಂಗ್ವಿ ಪ್ರದೇಶದಲ್ಲಿ ದ್ವಿಚಕ್ರ ವಾಹನಗಳು, ಕಾರುಗಳು ಸೇರಿದಂತೆ ವಾಹನಗಳು ಜಲಾವೃತಗೊಂಡ ರಸ್ತೆಗಳಲ್ಲಿ ಸಂಚರಿಸಿದವು. ಕಾರುಗಳು ಪ್ರವಾಹಕ್ಕೆ ಸಿಲುಕಿದ ರಸ್ತೆಯಲ್ಲಿ ಸುಮಾರು 200 ಮೀಟರ್ಗಳವರೆಗೆ ತೇಲುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.
करून दाखवलं… पुण्यात आता पाण्यावर चालणाऱ्या गाड्या… 😂😂😂🤦🏻🤦🏻pic.twitter.com/SWgI9IqvIB
— किरण (@Coolkiranj) October 18, 2022
ಭಾರೀ ಮಳೆಯಿಂದಾಗಿ ಪುಣೆಯ ಬಹುತೇಕ ಪ್ರದೇಶಗಳು ಜಲಾವೃತವಾಗಿದ್ದು, ವಾಹನಗಳು ಸಿಲುಕಿಕೊಂಡಿವೆ.
ಸೋಮವಾರದಂದು ಮಹಾರಾಷ್ಟ್ರದ ಪುಣೆ ನಗರದಲ್ಲಿ ಭಾರೀ ಮಳೆಯು ಹಾನಿಯನ್ನುಂಟುಮಾಡಿದೆ. ನಗರದ ಶಿವಾಜಿ ನಗರ ಪ್ರದೇಶವೊಂದರಲ್ಲೇ ಕೇವಲ ಒಂದೆರಡು ಗಂಟೆಗಳಲ್ಲಿ ಸುಮಾರು 81 ಮಿ.ಮೀ ಮಳೆಯಾಗಿದೆ.
ಹಡಪ್ಸರ್, ಮಾರ್ಕೆಟ್ ಯಾರ್ಡ್, ಸಿನ್ಹಗಡ್ ರಸ್ತೆ, ಎನ್ಐಬಿಎಂ, ಬಿಟಿ ಕವಡೆ ರಸ್ತೆ ಮತ್ತು ಕಟ್ರಾಜ್ನಂತಹ ಹಲವಾರು ಪ್ರದೇಶಗಳು ಜಲಾವೃತಗೊಂಡಿವೆ.
Pune rains: Cars get washed away due to heavy rain in Maharashtra’s Pune