ಅಪ್ಪು ಹೊಸ ಸಿನಿಮಾದ ಟೈಟಲ್ ಏನು..? ಪವನ್ ಕುಮಾರ್ ಈ ಕಥೆಯನ್ನ ಮೊದಲು ಹೇಳಿದ್ದು ಯಾರಿಗೆ ಗೊತ್ತಾ..?
ಒಂದೆಡೆ ಸ್ಯಾಂಡಲ್ ವುಡ್ ನ ಯುವರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್…. ಯಾವುದೇ ಸಿನಿಮಾ ಇದ್ರು ಕಾನ್ಸೆಪ್ಟ್ ಫೋಕಸ್ ಮಾಡೋ ನಟ.. ತಮ್ಮ ನಟನೆಯಿಂದ, ಡ್ಯಾನ್ಸ್ , ಡೈಲಾಗ್ಸ್ , ಫೈಟ್ಸ್ ನಿಂದ ಅಭಿಮಾನಿಗಳ ಹೃದಯದಲ್ಲಿ ದರ್ಬಾರ್ ನಡೆಸುವ ನಟ. ಮತ್ತೊಂದೆಡೆ ಏನೇ ಮಾಡಿದ್ರು ಡಿಫರೆಮಟ್ ಆಗಿ ಯೂನೀಕ್ ಕಾನ್ಸೆಪ್ಟ್ ನಿಂದ ಸಿನಿಮಾ ಮಾಡೋ ಕಲೆ ಇರುವ ನಿರ್ದೇಶಕ ಪವನ್ ಕುಮಾರ್.. ಈ ಇಬ್ಬರು ಈಗ ಸಿನಿಮಾವೊಂದಕ್ಕೆ ಒಟ್ಟಾಗಿದ್ದು ಹಲ್ ಚಲ್ ಸೃಷ್ಟಿಸಿದ್ದಾರೆ. ಈಗಾಗಲೇ ಪವನ್ ಕುಮಾರ್ ಅವರ ಯೂಟೂರ್ನ್ ಲೂಸಿಯಾ ಸಿನಿಮಾಗಳು ಅವರ ವಿಭಿನ್ನತೆಗೆ ಸಾಕ್ಷಿ.. ಆ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು.
ವಿಷಯ ಏನೆಂದ್ರೆ ಪುನೀತ್ ರಾಜ್ ಕುಮಾರ್ ಸದ್ಯ ಪವನ್ ಒಡೆಯರ್ ಜೊತೆಗೆ ಸಿನಿಮಾ ಮಾಡ್ತಿರೋದು.. ಹಾಗಂತೆ ಎದು ಯಾರಿಗೂ ಗೊತ್ತಿರದ ವಿಚಾರವೇನಲ್ಲ.. ಇತ್ತೀಚೆಗೆ ಪವನ್ ಕುಮಾರ್ , ಪುನೀತ್ ರಾಜ್ ಕುಮಾರ್ ಹಾಗೂ ಹೊಂಬಾಳೆ ಫಿಲ್ಮ್ಸ್ ಜೊತೆಗೆ ಸಿನಿಮಾ ಮಾಡ್ತಿರುವ ವಿಚಾರವನ್ನ ಅಧಿಕೃತವಾಗಿಯೇ ಘೋಷಣೆ ಮಾಡಲಾಗಿತ್ತು. ಆದ್ರೆ ಪವನ್ ಕುಮಾರ್ ಅವರು ಅಪ್ಪುಗಾಗಿ ಯಾವ ರೀತಿಯಾದ ಕಥೆ ತಯಾರಿಸಿದ್ದಾರೆ. ಸಿನಿಮಾ ಹೇಗಿರಲಿದೆ. ಸಿನಿಮಾ ಟೈಟಲ್ ಏನು.. ಈ ಎಲ್ಲಾ ಪ್ರಶ್ನೆಗಳು ಅಭಿಮಾನಿಗಳನ್ನ ಕಾತರತೆಗೆ ಈಡು ಮಾಡಿದೆ.
ಹಾಗಾದ್ರೆ ಸಿನಿಮಾ ಟೈಟಲ್ ಏನು… ಈ ಕಥೆಯ ವಿಶೇಷತೆ ಏನು..?
ಅಂದ್ಹಾಗೆ ಈ ಸಿನಿಮಾಗೆ ‘ನಿಕೋಟಿಸ್’ ಎಂಬ ಟೈಟಲ್ ಇಡಲಾಗಿದೆ ಎಂದು ಹೇಳಲಾಗ್ತಿದೆ. ಆದ್ರೆ ಇನ್ನೂವರೆಗೂ ಅಧಿಕೃತ ಘೋಷಣೆಯಾಗಿಲ್ಗಲ. ಆದ್ರೆ ವಿಸೇಷ ಅಂದ್ರೆ ಈ ಸಿನಿಮಾದಲ್ಲು ಕೂಡ ಯೂನಿಕ್ ಕಾನ್ಸೆಪ್ಟ್ ಇದೆ.. ಒಂದು ವಿಭಿನ್ನ ಕಥೆ ಇದೆ ಎಂದು ಹೇಳಲಾಗಿದೆ. ಅಂದ್ಹಾಗೆ ಈ ಕಥೆಯನ್ನ ಬಹಳ ವರ್ಷಗಳ ಹಿಂದೆಯೇ ಪವನ್ ಕುಮಾರ್ ಅವರು ರೆಡಿ ಮಾಡಿದ್ದರಂತೆ. ಅಲ್ಲದೇ ದಿಗಂತ್ ಗಾಗಿ ಈ ಕಥೆ ತಯಾರು ಮಾಡಿದ್ದರಂತೆ. ಬಳಿಕ ಟಾಲಿವುಡ್ ನ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಗೂ ಸಹ ಈ ಕಥೆ ಹೇಳಿದ್ರೆಂತೆ. ಅಂತಿಮವಾಗಿ ಈ ಸಿನಿಮಾಗೆ ನಟ ಸಾರ್ವಭೌಮ ಒಪ್ಪಿಕೊಂಡು ಗ್ರೀನ್ ಸಿಗ್ನಲ್ ನೀಡಿದ್ದಾರೆ..
ಸದ್ಯ ಪುನೀತ್ ರಾಜ್ ಕುಮಾರ್ ಅವರು ಜೇಮ್ಸ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಿದ್ದರು. ಆದ್ರೆ ಕೊರೊನ ಆ ಹಾವಳಿಯಿಂದಾಗಿ ಶೂಟಿಂಗ್ ಗೆ ಅಡಚನೆ ಉಂಟಾಗಿದೆ. ಇದಾದ ಬಳಿಕ ದಿನಕರ್ ತೂಗುದೀಪ ಅವರ ಜೊತೆಗೆ ಸಿನಿಮಾ ಮಾಡಲಿದ್ದು, ನಂತರ ಪವನ್ ಕುಮಾರ್ ಅವರ ಜೊತೆ ಸಿನಿಮಾ ಮಾಡಲಿದ್ದಾರೆ.








