ಬೆಂಗಳೂರು : “ಹೆಸರು ಮಾಡು ಹಸಿರಾಗೋವರೆಗೂ ಉಸಿರು ಹೋದರೂ ಹೆಸರಿರೋವರೆಗೂ”…. ಈ ಸಾಲುಗಳು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ‘ಯುವರತ್ನ’ ಸಿನಿಮಾದ ‘ಪವರ್ ಆಫ್ ಯೂತ್’ ಹಾಡಿನದ್ದು.. ಕಡೆಯದಾಗಿ ಥಿಯೇಟರ್ ನಲ್ಲಿ ರಿಲೀಸ್ ಆದ ಅಪ್ಪು ಅಭಿನಯದ ಕಡೆಯ ಸಿನಿಮಾ ಕೂಡ “ಯುವರತ್ನ”…
ಈ ಸಾಲುಗಳನ್ನ ಈಗ ಕೇಳಿದ್ರೂ ಕಣ್ಣಂಚಲ್ಲಿ ನೀರು ಜಾರಿಹೋಗುತ್ತೆ.. ಈ ಸಾಲುಗಳಂತೆಯೇ ಅಪ್ಪು ಜೀವನವೂ.. ಅವರು ಇವತ್ತು ನಮ್ಮೊಂದಿಗಿಲ್ಲ. ಆದ್ರೆ ಇದ್ದಷ್ಟೂ ದಿನ ರಾಜನಂತೆಯೇ ಬದುಕಿ ಆಕಶದಷ್ಟು ಸಾಧನೆ ಮಾಡಿ ನಮ್ಮನ್ನೆಲ್ಲಾ ಅಗಲಿದ್ರೂ.. ಜನ ಅವರು ನಮ್ಮೊಂದಿಗಿಲ್ಲ ಆದ್ರೂ ಶತಮಾನಗಳ ಕಾಲ ಅವರ ಹೆಸರು ಉಳಿಯುವಂತಹ ಸಾಧನೆ ಮಾಡಿ ಹೋಗಿದ್ದಾರೆ ಅಪ್ಪು ಸರ್..
ಅಪ್ಪು ಎಂದಾಕ್ಷಣ ಮತ್ತೊಂದು ಹಾಡು ಥಟ್ ಅಂತ ನೆನಪಿಗೆ ಬರುತ್ತೆ.. ಅದು ಬೊಂಬೈ ಹೇಳುತೈತೆ.. “ರಾಜಕುಮಾರ” ಸಿನಿಮಾದ ಈ ಹಾಡು ಜನರ ಮನಸ್ಸನ್ನ ನಾಟಿತ್ತು.. ಎಷ್ಟರ ಮಟ್ಟಿಗೆ ಅಂದ್ರೆ ಈ ಒಂದು ಹಾಡು ಅಎಷ್ಟೋ ಜನರ ಬದುಕನ್ನ ಬದಲಾಯಿಸಿದೆ.. ಅಕ್ಟೋಬರ್ 29ರಂದು ಅಪ್ಪು ನಮ್ಮೆಲ್ಲರನ್ನೂ ಅಗಲಿದರು.. ಇಂದಿಗೆ 18 ದಿನಗಳಾಗಿವೆ. ಅಭಿಮಾನಿಗಳು ಕುಟುಂಬಸ್ಥರು ಈ ನೋವಿನಿಂದ ಇನ್ನೂವರೆಗೂ ಹೊರ ಬಂದಿಲ್ಲ..
ಶರ್ಟ್ ಲೆಸ್ ಹುಡುಗರು ‘ಕಿರಿಕ್ ಹುಡುಗಿ’ಗೆ ಇಷ್ಟ ಆಗಲ್ವಂತೆ..!
ಹೀಗಿರುವಾಗ್ಲೇ ಅಪ್ಪು ನಟಿಸಿದ “ರಾಜಕುಮಾರ” ಚಿತ್ರದ “ಬೊಂಬೆ ಹೇಳುತೈತೆ” ಹಾಡು ಹೊಸ ದಾಖಲೆ ಬರೆದಿದೆ. 2017, ಮಾರ್ಚ್ 24ರಂದು ತೆರೆಕಂಡಿದ್ದ ರಾಜಕುಮಾರ ಸಿನಿಮಾ ಸೂಪರ್ ಹಿಟ್ ಆಗಿತ್ತು.. ಈ ಸಿನಿಮಾದ ಸಕ್ಸಸ್ ಗೆ ಬೊಂಬೆ ಹೇಳುತೈತೆ ಹಾಡು ಕೂಡ ಪ್ರಮುಖ ಕಾರಣ.
ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದ ಈ ಹಾಡಿಗೆ ವಿಜಯ್ ಪ್ರಕಾಶ್ ಧ್ವನಿಯಾಗಿದ್ದರು. ಈ ಬೊಂಬೈ ಹೇಳುತೈತೆ ಹಾಡು ಈಗ ಅಪ್ಪು ನಿಧನದ ಬಳಿಕ ಮತ್ತಷ್ಟು ಜನಪ್ರಿಯವಾಗಿದೆ. ಸಿನಿಮಾ ರಿಲೀಸ್ ಮುನ್ನ ಬಿಡುಗಡೆ ಮಾಡಿದ್ದ ಹಾಡಿನ ಮೇಕಿಂಗ್ ವಿಡಿಯೋ ಯುಟ್ಯೂಬ್‌ನಲ್ಲಿ ಬರೋಬ್ಬರಿ 100 ಮಿಲಿಯನ್ ವೀಕ್ಷಣೆ ಕಂಡು ದಾಖಲೆ ಬರೆದಿದೆ. ಇನ್ನೂ ಭಾರತದಲ್ಲಿ ಮೇಕಿಂಗ್ ವಿಡಿಯೋಗೆ ಇಷ್ಟೊಂದು ವೀವ್ಸ್ ಸಿಕ್ಕಿಲ್ಲವೆಂದು ಅಪ್ಪು ಅಭಿಮಾನಿಗಳು ಅಂತೋಷ ಪಟ್ಟಿದ್ದಾರೆ.
ಪ್ಯಾನ್ ಇಂಡಿಯಾ ಚಿತ್ರದಲ್ಲಿ ಮೇಘಾ ಶೆಟ್ಟಿ