ಅಪ್ಪು ಬಾಲ್ಯದಲ್ಲೇ ಅವರ ಎದೆ ನೋಡಿ ಭವಿಷ್ಯ ನಡುದಿದ್ದರಂತೆ ಚಿನ್ನೇಗೌಡರು
ಅಷ್ಟು ಖುಷಿಖುಷಿಯಾಗಿ ಲವಲವಿಕೆಯಿಂದ , ಸದಾ ನಗುತ್ತಾ, ನಗಿಸುತ್ತಾ , ಉತ್ಸಾಹದಿಂದ ಎನೆರ್ಜಿಟಿಕ್ ಆಗಿ , ಫಿಟ್ ಅಂಡ್ ಅಂಡ್ ಫೈನ್ ಆಗಿದ್ದ ನಮ್ಮ ಕರುನಾಡಿನ ‘ರಾಜಕುಮಾರ’ ಪುನೀತ್ ರಾಜ್ ಕುಮಾರ್ ಅವರ ಹಠಾತ್ ನಿಧನದಿಂದ ಇನ್ನೂವರೆಗೂ ಕರುನಾಡಿನ ಜನ , ಕುಟುಂಬ ಹೊರಬಂದಿಲ್ಲ..
ಈ ನಡುವೆ ಪಾರ್ವತಮ್ಮ ರಾಜ್ಕುಮಾರ್ ಅವರ ಸಹೋದರ ನಿರ್ಮಾಪಕರಾಗಿರುವ ಚಿನ್ನೇಗೌಡ ಅವರು ಅಪ್ಪುವಿನ ಬಗ್ಗೆ ಒಂದು ವಿಷಯವನ್ನ ಹಂಚಿಕೊಂಡಿದ್ದಾರೆ.. ಇಂದು ಅರಮನೆ ಮೈದಾನ ಗಾಯತ್ರಿ ವಿಹಾರದಲ್ಲಿ ನಡೆಯುತ್ತಿರುವ ‘ಪುನೀತ್ ನಮನ’ ಕಾರ್ಯಕ್ರಮದಲ್ಲಿ ಚಿನ್ನೇಗೌಡರು ಭಾಗಿಯಾಗಿದ್ದಾರೆ. ಅಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು ‘ಅಪ್ಪುವನ್ನು ಇದೇ ಕೈಯಿಂದ ಆಡಿ ಬೆಳೆಸಿದ್ದೇನೆ. ಅವನಿಗೆ ಸ್ನಾನ ಮಾಡಿಸಿ, ಬಟ್ಟೆ ತೊಡಿಸಿ, ಹೆಗಲೆ ಮೇಲೆ ಹೊತ್ತು ಓಡಾಡಿದ್ದೇನೆ.
ಅವನು ಚಿಕ್ಕವನಿದ್ದಾಗ ಅವನಿಗೆ ಸ್ನಾನ ಮಾಡಿಸಬೇಕಾದರೆ ಅವನ ಎದೆಯ ಭಾಗ ನೋಡಿ ನಾನು ಅವನಿಗೆ ಹೇಳಿದ್ದೆ, ನೀನು ದೊಡ್ಡ ಕಲಾವಿದ ಆಗುತ್ತೀಯ ಅಂತ. ಅದಿಕ್ಕೆ ಅಪ್ಪು.. ಅಯ್ಯೋ ನಾನು ನಟ ಆಗಲ್ಲಪ್ಪ ಅಂತಿದ್ದ . ನೀನು ದೊಡ್ಡ ನಟನಾದ ಮೇಲೆ ನನಗೆ ಕಾಲ್ ಶೀಟ್ ಕೊಡ್ತೀಯ ತಾನೆ ಅಂತ ಕೇಳ್ತಿದ್ದೆ ಎಂದು ಚಿನ್ನೇಗೌಡರು ಹೇಳಿಕೊಂಡಿದ್ದಾರೆ.








