ಕೊಳ್ಳೇಗಾಲ ಪಟ್ಟಣದ ರಸ್ತೆಗೆ ಪುನೀತ್ ರಾಜಕುಮಾರ್ ರಸ್ತೆ ಎಂದು ನಾಮಕರಣ puneeth-rajkumar
ಚಾಮರಾಜನಗರ : ಕನ್ನಡದ ರಾಜರತ್ನ, ಕರುನಾಡ ನಟಸಾರ್ವಭೌಮ ನಟ ಪುನೀತ್ ರಾಜಕುಮಾರ್ ನಮ್ಮನ್ನೆಲ್ಲ ಅಗಲಿ ಇಂದಿಗೆ 12 ದಿನ.
ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಅರಮನೆ ಮೈದಾನದಲ್ಲಿ ಅಪ್ಪು ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.
ಇತ್ತ ಚಾಮರಾಜನಗರದಲ್ಲಿ ಅಪ್ಪು ಅಭಿಮಾನಿಗಳು ವಿಶೇಷವಾಗಿ ತಮ್ಮ ಅಭಿಮಾನವನ್ನು ಸಾರಿದ್ದಾರೆ.
ಕೊಳ್ಳೇಗಾಲ ಪಟ್ಟಣದ ರಸ್ತೆಗೆ ಪುನೀತ್ ರಾಜಕುಮಾರ್ ರಸ್ತೆ ಎಂದು ನಾಮಕರಣ ಮಾಡುವ ಮೂಲಕ ಅಪ್ಪುಗೆ ತವರು ಜಿಲ್ಲೆಯಲ್ಲಿ ಗೌರವ ಸಲ್ಲಿಸಲಾಗಿದೆ.
ಇಂದು ಕೊಳ್ಳೇಗಾಲ ಪಟ್ಟಣದ ತಾಲೂಕು ಪಂಚಾಯ್ತಿ ಕಚೇರಿಯಿಂದ ಅಚ್ಗಾಳ್ ಯಾತ್ರಿನಿವಾಸದವರೆಗೆ ಒಂದು ಕಿಲೋಮೀಟರ್ ಉದ್ದವಿರುವ ರಸ್ತೆಗೆ ಪುನೀತ್ ರಾಜಕುಮಾರ್ ರಸ್ತೆ ಎಂದು ನಾಮಕರಣ ಮಾಡಲಾಗಿದೆ.
ಶಾಸಕ ಎನ್. ಮಹೇಶ್ ಈ ರಸ್ತೆ ನಾಮ ಫಲಕಕ್ಕೆ ಪೂಜೆ ಸಲ್ಲಿಸುವ ಮೂಲಕ ಅನಾವರಣಗೊಳಿಸಿದರು.









