ಬೆಂಗಳೂರು: ನಮ್ಮನ್ನೆಲ್ಲಾ ಅಗಲಿದ ಕನ್ನಡದ “ರಾಜಕುಮಾರ್” ಪುನೀತ್ ರಾಜ್ ಕುಮಾರ್ ಅವರಿಗೆ ಗೌರವಾರ್ಥ ಇಂದು ಅರಮನೆ ಮೈದಾನದಲ್ಲಿ ನಮನ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ.. ಕಾರ್ಯಕ್ರಮದಲ್ಲಿ ಗಣ್ಯಾತಿ ಗಣ್ಯರು ಭಾಗಿಯಾಗಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ , ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಯಡಿಯೂರಪ್ಪ , ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.. ಈ ವೇಳೆ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಪುನೀತ್ ರಾಜ್ ಕುಮಾರ್ ಅವರ ನಗು , ಅವರ , ಸರಳತೆ , ಅವರ ವಿನಯತೆಯನ್ನ ಮರೆಯುವುದಕ್ಕೆ ಆಗುವುದಿಲ್ಲ ಎಂದಿದ್ದಾರೆ..
ಇದೇ ವೇಳೆ ಪುನೀತ್ ರಾಜ್ ಕುಮಾರ್ ಅವರು ರಾಜಕುಮಾರ್ ಸಿನಿಮಾ ರಿಲೀಸ್ ಸಂದರ್ಭದಲ್ಲಿ ಅವರು ನನಗೆ ‘ಮಾಮ ಸಿನಿಮಾ’ ನೋಡಿ ಎಂದಿದ್ರು.. ನಾನೂ ಸಿನಿಮಾ ನೋಡೋದನ್ನೇ ಬಿಟ್ಟಿದ್ದೆ.. ಆದ್ರೆ ರಾಜಕುಮಾರ್ ಸಿನಿಮಾವನ್ನ ಹೋಗಿ ಸರಸ್ವತಿ ಥಿಯೇಟರ್ ನಲ್ಲಿ ನೋಡಿದ್ದೆ.. ಆ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಅವರು ಅದ್ಭುತವಾಗಿ ನಟಿಸಿದ್ದಾರೆ.. ಎಂದರು.. ಇನ್ನೂ ರಾಜ್ ಕುಮಾರ್ ಕುಟುಂಬದವರ ಸಾಮಾಜಿಕ ಕೆಲಸ ಅತ್ಯಂತ ಶ್ಲಾಘನೀಯ..
ನಾನು ನೋಡಿದ ಹಾಗೇ ಬಹುಶಃ ಯಾವುದೇ ಯುವ ನಟ ನಿಧನರಾದಾಗ ಇಡೀ ಕರ್ನಾಟಕದ ಜನ ಇಷ್ಟು ದುಃಖ ಪಟ್ಟಿದ್ದು ಕಣ್ಣೀರು ಹಾಕಿದ್ದನ್ನ ನಾನು ನೋಡಿಯೇ ಇಲ್ಲ ಎಂದು ಬೇಸರ ಹೊರಹಾಕಿದರು.. ಅವರು ಹೋದ್ರೂ ಕೂಡ ಅವರು ದೊಡ್ಡ ಹೆಜ್ಜೆ ಗುರುತನ್ನ ಬಿಟ್ಟು ಹೋಗಿದ್ದಾರೆ.. ಅವರ ಆದರ್ಶ ಯುವಜನತೆಗೆ ದಾರಿದೀಪ ಎಂದಿದ್ದಾರೆ.. ಅಲ್ಲದೇ ಅಪ್ಪುಗೆ ಕರ್ನಾಟಕ ರತ್ನ ಕೊಟ್ಟಿದ್ದು ಸ್ವಾತಾರ್ಯ ಎಂದು ಕರ್ನಾಟಕ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ರು.. ಅಷ್ಟೇ ಅಲ್ಲದೇ ಅಪ್ಪುಗೆ ಪದ್ಮಶ್ರೀ ಕೊಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಪಾರಸ್ಸು ಮಾಡುವಂತೆ ನಾನು ಈ ವೇಳೆ ಒತ್ತಾಯಿಸುತ್ತೇನೆ ಎಂದ್ರು…








