ಪುಷ್ಪ ಸಿನಿಮಾತಂಡದ ಮೇಲಿನ ಸಿಟ್ಟು ಕೊಂಚ ತಗ್ಗಿದೆ.. ಕಾರಣ ಅಪ್ಪು…!
ಡಿಸೆಂಬರ್ 17 ರಂದು ಭಾರತದ ಸಿನಿಮಾ ಮಂದಿರಗಳಲ್ಲಿ ಪುಷ್ಪ ತೆರೆಕಂಡು ಉತ್ತಮ ಪ್ರದರ್ಶನ ಕಾಣ್ತಿದೆ.. ಈ ನಡುವೆ ಪುಷ್ಪ ಕನ್ನಡ ಸಿನಿಮಾ ಪ್ರೇಕ್ಷಕರಿಂದ ತಿರಸ್ಕಾರಕ್ಕೂ ಒಳಪಟ್ಟಿದೆ.. ಕನ್ನಡಕ್ಕೆ ಕೇವಲ ಒಂದೇ ಸಕ್ರೀನ್ ನೀಡಿದ್ದೇ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು.. ಆದ್ರೆ ಅದಕ್ಕೂ ಮೀರಿ ಸಿನಿಮಾತಂಡ ಕ್ಷಮೆಯಾಚಿಸಿದೇ ಇದ್ದಿದ್ದು ಕೂಡ ಇನ್ನಷ್ಟು ಕೆರಳಿಸಿತ್ತು.. ಈ ನಡುವೆ ಮಲಯಾಳಂ ಡಬ್ಬಿಂಗ್ ವರ್ಷನ್ ನ ಕೇರಳದಲ್ಲಿ ರಿಲೀಸ್ ಮಾಡದೇ ತಮಿಳಿನಲ್ಲಿ ರಿಲೀಸ್ ಮಾಡಿ ಅಲ್ಲಿಯೂ ಡೆವಟ್ಟು ಮಾಡಿಕೊಂಡಿದ್ದ ಚಿತ್ರತಂಡ ಅಲ್ಲಿನ ಅಭಿಮಾನಿಗಳ ಬಳಿಮಾತ್ರ ಕ್ಷಮೆಯಾಚಿಸುತ್ತು.. ಇಲ್ಲೂ ಕನ್ನಡದ ಮೇಲಿನ ತಾತ್ಸಾರ ಎಂದೇ ಬಿಂಬಿಸಲಾಗಿತ್ತು.. ಎಷ್ಟೆಲ್ಲಾ ಅವಾಂತರಗಳು ವಿವಾದಗಳ ನಡುವೆಯೂ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ತಿದೆ..
ಆದ್ರೀಗ ಕನ್ನಡಿಗರ ಆಕ್ರೋಶ ಕೊಂಚ ಕಡಿಮೆಯಾಗಿದೆ ಸಿನಿಮಾತಂಡದ ಮೇಲೆ ಎನ್ನಬಹುದು.. ಕಾರಣ ಅಪ್ಪು.. ಹೌದು ಪುಷ್ಪ ಸಿನಿಮಾ ಆರಂಭಕ್ಕೂ ಮುನ್ನವೇ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರನ್ನು ನೆನಪಿಸಿಕೊಂಡಿದೆ. ಈ ವಿಚಾರಕ್ಕೆ ಸಿನಿಪ್ರಿಯರು ಕೊಂಚ ಸಮಾಧಾನಗೊಂಡಿದ್ದಾರೆ..
ಪುನೀತ್ ರಾಜ್ ಕುಮಾರ್ ಅವರಿಗಾಗಿ ಹಾಡು ರಿಲೀಸ್ ಮಾಡಿದ ‘ಸಖತ್’ ತಂಡ
ಅಂದ್ಹಾಗೆ ಬೆಂಗಳೂರಿಗೆ ಪ್ರಚಾರಕ್ಕೆ ಬಂದಾಗ ಅಪ್ಪು ಮನೆಗೆ ಅಲ್ಲು ಅರ್ಜುನ್ ಭೇಟಿ ನೀಡಿರಲಿಲ್ಲ.. ಈಗ ಪ್ರಚಾರಕ್ಕೆ ತೆರಳುತ್ತಿದ್ದೇನೆ ಆದ್ರೆ ಇದಕ್ಕೆ ಅಂತಲೇ ಮತ್ತೆ ಬರುತ್ತೇನೆ ಎಂದಿದ್ದರು.. ಅಪ್ಪು ನಮ್ಮೆನ್ನಲ್ಲ ಅಗಲಿ ಸುಮಾರು ಎರೆಡೂ ತಿಂಗಳೇ ಆಯ್ತು.. ಅನೇಕ ಪರಭಾಷಾ ನಟರು ಅಪ್ಪು ಮನೆಗೆ ಭೇಟಿ ನೀಡಿದ್ರು.. ಆದ್ರೆ ಅಲ್ಲು ಮಾತ್ರ ಈವರೆಗೂ ಅವರ ಮನೆಗೆ ಬಾರದೇ ಇರೋದು ಬೇಸರಕ್ಕೆ ಕಾರಣವಾಗಿತ್ತು.. ಆದ್ರೆ ಈಗ ಅಪ್ಪುವನ್ನ ಸಿನಿಮಾತಂಡ ನೆನಪು ಮಾಡಿಕೊಳ್ಳುವ ಮೂಲಕ ಕೊಂಚ ಕನ್ನಡಾಭಿಮಾನಿಗಳ ಆಕ್ರೋಶ ಕಡಿಮೆ ಮಾಡಿದೆ..