ನಾಳೆ ಪುನೀತ್ ರಾಜ್ ಕುಮಾರ್ ಅವರ 11 ನೇ ಪುಣ್ಯಾರಾಧನೆಗೆ ಸಿದ್ಧತೆ
ನಾಳೆ ಪುನೀತ್ ರಾಜ್ ಕುಮಾರ್ ಅವರ 11 ನೇ ಪುಣ್ಯಾರಾಧನೆಗೆ ಸಕಲ ತಯಾರಿಗಳು ನಡೆದಿದೆ. ಮನೆಯ ಮುಂದಿನ ರಸ್ತೆಗೂ ಶಾಮಿಯಾನ ಹಾಕುವ ತಯಾರಿ ನಡೆಯುತ್ತಿದೆ. ಇತ್ತ ಪುನೀತ್ ನಿವಾಸಕ್ಕೆ ನಟ ಶ್ರೀಮುರುಳಿ, ನಿದೇರ್ಶಕ ಪಿ ವಾಸು ಭೇಟಿ ನೀಡಿದ್ದರು..
ಅಲ್ಲದೇ ಪುನೀತ್ ನಿವಾಸಕ್ಕೆ ಮಾವ ಚಿನ್ನೇ ಗೌಡ, ರಾಕ್ ಲೈನ್ ವೆಂಕಟೇಶ್ ಸಹ ಭೇಟಿ ನೀಡಿದ್ದಾರೆ. 11 ನೇ ದಿನದ ಕಾರ್ಯದ ಬಗ್ಗೆ ರಾಘಣ್ಣ ಮತ್ತು ಶಿವಣ್ಣ ಚರ್ಚೆ ಮಾಡಿದ್ದಾರೆ. ನಾಳೆ 12 ಗಂಟೆಗೆ ತಿಥಿ ಕಾರ್ಯ ನಡೆಸಲು ಕುಟುಂಬದವರು ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ.
ಇನ್ನೂ ಕಾರ್ಯಕ್ರಮದಲ್ಲಿ ಕುಟುಂಸ್ಥರು ಮತ್ತು ಚಿತ್ರರಂಗದ ಗಣ್ಯ ವ್ಯಕ್ತಿಗಳಿಗೆ ಮಾತ್ರ ಅವಕಾಶ ಅಪ್ಪು ಮನೆಯಲ್ಲಿ 1500 ಜನ ಸೇರೋ ಸಾದ್ಯತೆ ಅಭಿಮಾನಿಗಳಿಗೆ ಮಂಗಳವಾರ ಅರಮನೆ ಮೈದಾನದಲ್ಲಿ ಕಾರ್ಯದ ವ್ಯವಸ್ಥೆ ಮಾಡಲಾಗುತ್ತದೆ..