ಪುನೀತ್ ರಾಜ್ ಕುಮಾರ್ ಅವರಿಗಾಗಿ ಹಾಡು ರಿಲೀಸ್ ಮಾಡಿದ ‘ಸಖತ್’ ತಂಡ
ಸ್ಯಾಂಡಲ್ ವುಡ್ ನ ಯುವರಾಜ ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲಾ ಅಗಲಿ ಹತ್ತಿರ ಹತ್ತಿರ ಒಂದು ತಿಂಗಳೇ ಆದ್ರೂ ಇನ್ನೂವರೆಗೂ ಅವರು ಅಗಲಿದ ಸತ್ಯ ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ.. ಅವರ ಅಗಲಿಕೆಯ ನೋವು ಮಾಸುತ್ತಿಲ್ಲ.. ಅಪ್ಪುಗೆ ಅಭಿಮಾನಿಗಳು ಸಿನಿಮಾರಂಗದವರು ನಾನಾ ರೀತಿಯಲ್ಲಿ , ಅರ್ಥಪೂರ್ಣ ರೀತಿಗಳಲ್ಲಿ ಗೌರವ ಸಲ್ಲಿಸ್ತಿದ್ದಾರೆ.. ಈ ನಡುವೆ ಗೋಲ್ಡನ್ ಸ್ಟಾರ್ ಗಣೇಶ್ ನಟನೆ, ಸಿಂಪಲ್ ಸ್ಟಾರ್ ಸುನಿ ನಿರ್ದೇಶನದ ‘ಸಖತ್’ ಸಿನಿಮಾತಂಡದಿಂದ ಅಪ್ಪುಗಾಗಿ ಒಂದು ಹಾಡನ್ನ ರಿಲೀಸ್ ಮಾಡಲಾಗಿದೆ..
1.36 ನಿಮಿಷವಿರುವ , ಅಪ್ಪು ಮರಳಿ ಬಾ ಎಂಬ ಟೈಟಲ್ ಹೊಂದಿರುವ ಈ ಎಮೋಚನಲ್ ಹಾಡನ್ನ ಆನಂದ್ ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಲಾಗಿದ್ದು, ಹಾಡು ಕೇಳ್ತಿದ್ರೆ ಕರುನಾಡಿನ ಜನರ ಕಣ್ಣುತುಂಬುವಂತಿದೆ.. ಪ್ರಮೋದ್ ಮಾರವಂತೆ ಅವರ ಸಾಹಿತ್ಯವಿರುವ ಈ ಹಾಡಿಗೆ ಪಂಚಮ್ ಜೀವಾ ಅವರು ಜೀವ ತುಂಬಿದ್ದಾರೆ.. ಸದ್ಯ ಸಖತ್ ಸಿನಿಮಾವು ಯಶಸ್ವಿಯಾಗಿ 25 ದಿನವೂ ಪ್ರದರ್ಶನ ಕಾಣ್ತಿದೆ.. ಈ ಸಂದರ್ಭದಲ್ಲಿ ಸಿನಿಮಾತಂಡ ಅಪ್ಪು ಸ್ಮರಣಾರ್ಥ ಹಾಡು ಬಿಡುಗಡೆ ಮಾಡಿದ್ದಾರೆ..