ಅಪ್ಪು ಅವರ ನಿಧನದ ಸುದ್ದಿ ಇನ್ನೂವರೆಗೂ ಅರಗಿಸಿ ಕೊಳ್ಳಲು ಸಾಧ್ಯವಾಗ್ತಿಲ್ಲ : ವಿಶಾಲ್
ಬೆಂಗಳೂರು: ನಮ್ಮನ್ನೆಲ್ಲಾ ಅಗಲಿದ ಕನ್ನಡದ “ರಾಜಕುಮಾರ್” ಪುನೀತ್ ರಾಜ್ ಕುಮಾರ್ ಅವರಿಗೆ ಗೌರವಾರ್ಥ ಇಂದು ಅರಮನೆ ಮೈದಾನದಲ್ಲಿ ನಮನ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ.. ಕಾರ್ಯಕ್ರಮದಲ್ಲಿ ಗಣ್ಯಾತಿ ಗಣ್ಯರು ಭಾಗಿಯಾಗಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ , ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಯಡಿಯೂರಪ್ಪ , ಸೇರಿದಂತೆ ಅನೇಕ ರಾಜಕೀಯ ಮುಖಂಡರು, ಕನ್ನಡ ಸಿನಿಮಾದ ತಾರೆಯರು , ಪರಭಾಷಾ ತಾರೆಯರು , ತಮಿಳಿನ ಸ್ಟಾರ್ ನಟ ವಿಸಾಲ್ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.. ಈ ವೇಳೆ ವಿಶಾಲ್ ಅವರು ಮಾತನಾಡಿ ಅಪ್ಪು ನೆನೆದು ಭಾವುಕರಾದ್ರು..
ನನಗೆ ಅಪ್ಪು ಅವರ ನಿಧನದ ಸುದ್ದಿ ಇನ್ನೂವರೆಗೂ ಅರಗಿಸಿ ಕೊಳ್ಳಲು ಸಾಧ್ಯವಾಗ್ತಿಲ್ಲ.. 2 ವಾರಗಳಿಂದ ನನಗೇ ಸರಿಯಾಗಿ ನಿದ್ದೆ ಬರುತ್ತಿಲ್ಲ.. ಅಪ್ಪು ಅವರ ಒಳ್ಳೆಯ ಕೆಲಸಗಳು ಮುಂದುವರೆಯಬೇಕು.. ಅವರನ್ನ ಯಾವತ್ತೂ ಕೂಡ ಜೀವನ ಪರಿಯಂತ ಮರೆಯಲು ಸಾಧ್ಯವಿಲ್ಲ.. ಪುನೀತ್ ಅವರು , ರಾಜ್ ಕುಟುಂಬದವರ ಸಮಾಜಮುಖಿ ಕಾರ್ಯದಲ್ಲಿ ನಾನು ಸ್ವಯಂ ಪ್ರೇರಿತನಾಗಿ ಬಾಗಿಯಾಗಲು ಬಯಸುತ್ತೇನೆ.. ಅಪ್ಪು ಅವರು ಓದಿಸುತ್ತಿದ್ದ ವಿದ್ಯಾರ್ಥಿಗಳ ಜವಾಬ್ದಾರಿಯನ್ನ ನಾನು ತೆಗೆದುಕೊಳ್ತೇನೆ ಎಂದಿದ್ದಾರೆ..