‘ವಿಲ್ಲನ್’ ಆಗಿ ಹೊಸ ಸೆನ್ಷೇಶನ್ ಹುಟ್ಟಿಸಬೇಕಿತ್ತು… ನಮ್ಮ ಅಪ್ಪು..!!!
ಕರುನಾಡಿನ ‘ಯುವರತ್ನ’ ಕೋಟ್ಯಾಂತರ ಹೃದಗಳ ‘ಅರಸು’ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಸುಮಾರು ಮೂರು ತಿಂಗಳೇ ಕಳೆಯುತ್ತಾ ಬಂದರು ಅವರ ಅಭಿಮಾನಿಗಳು , ಕುಟುಂಬದವರಲ್ಲಿ ಅವರ ಅಗಲಿಕೆಯ ನೋವು ಮಾಸಿಲ್ಲ..
ವಿಧಿಗೆ ಈಗಲೂ ಅಪ್ಪು ಅಭಿಮಾನಿಗಳು ಶಾಪ ಹಾಕುತ್ತಿದ್ದಾರೆ.. ಅಪ್ಪು ಎಷ್ಟೋ ಸಿನಿಮಾಗಳಲ್ಲಿ ಇನ್ನೂ ನಟಿಸಬೇಕಿತ್ತು.. ಅದರಲ್ಲೇ ಒಂದು ಮನ್ಸೂರೆ ನಿರ್ದೇಶನದ ‘ಮಿಶನ್ ಕೊಲಂಬಸ್’.. ಕರುನಾಡ ರತ್ನ ಅಪ್ಪು ‘ಮಿಶನ್ ಕೊಲಂಬಸ್’ ಸಿನಿಮಾದಲ್ಲಿ ವಿಲ್ಲನ್ ಆಗಿ ಮಿಂಚಲು ಸೈ ಎಂದಿದ್ದರು ಅನ್ನುವ ಸುದ್ದಿ ಈಗ ಹರಿದಾಡ್ತಿದೆ. ಈ ಸುದ್ದಿ ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ.. ರೀಲ್ ಲೈಫ್ ನಲ್ಲು ಹೀರೋ ಆಗಿ ರಿಯಲ್ ಲೈಫ್ ನಲ್ಲೂ ಮಾಸ್ ಅಂಡ್ ಪವರ್ ಫುಲ್ ಹೀರೋ ಆಗಿದ್ದ ಅಪ್ಪು ವಿಲ್ಲನ್ ಪಾತ್ರ ಮಾಡಲು ಒಪ್ಪಿದ್ದರು ಎಂದ್ರೆ ಸಹಜವಾಗಿ ಶಾಕ್ ಆಗದೇ ಇರುವುದಿಲ್ಲ.. ಆದ್ರೆ ಇಲ್ಲಿ ಮತ್ತೊಂದು ಸ್ವಾರಸ್ಯಕರ ಸಂಗತಿ ಎಂದ್ರೆ ಅಪ್ಪು ಅವರೇ ಈ ಸಿನಿಮಾದ ಹೀರೋ ಕೂಡ ಆಗಬೇಕಿತ್ತು.. ಅರ್ಥಾತ್ ಡಬಲ್ ಶೇಡ್ ನಲ್ಲಿ ಅಪ್ಪು ಬಣ್ಣ ಹಚ್ಚುವವರಿದ್ದರು. ಆದ್ರೆ ವಿಧಿ ಮೋಸ ಮಾಡಿತು..
ನಿರ್ದೇಶಕ ಮಂಸೋರೆ ಅವರು ಪುನೀತ್ರಾಜ್ಕುಮಾರ್ ಜೊತೆಗೆ ಒಂದು ಸಿನಿಮಾ ಮಾಡಬೇಕು ಎಂದು, ವರ್ಷಗಳ ಹಿಂದೆಯೇ ಕಥೆ ಒಂದನ್ನು ಸಿದ್ಧ ಮಾಡಿಕೊಂಡಿದ್ದರು. ಈ ವಿಚಾರವನ್ನು ಅವರು ಈ ಹಿಂದೆಯೇ ಹೇಳಿಕೊಂಡಿದ್ದಾರೆ. ಈಗಾಗಲೇ ಪೋಸ್ಟರ್ ಒಂದನ್ನು ಕೂಡ ರಿಲೀಸ್ ಮಾಡಿದ್ದಾರೆ. ಚಿತ್ರಕ್ಕೆ ‘ಮಿಷನ್ ಕೊಲಂಬಸ್’ ಎನ್ನುವ ಟೈಟಲ್ ಕೂಡ ಇಡಲಾಗಿತ್ತು. ಇದೇ ಚಿತ್ರದಲ್ಲಿ ಅಪ್ಪು ವಿಲನ್ ಶೇಡ್ನಲ್ಲಿ ಕಾಣಿಸಿಕೊಳ್ಳಬೇಕಿತ್ತು.
ನಿರ್ದೇಶಕ ಮಂಸೋರೆ ಮತ್ತು ಕಥೆಗಾರ ಟಿ.ಕೆ. ದಯಾನಂದ. ಈ ಕಥೆಯನ್ನು ರಚಿಸಲು ಹೆಚ್ಚು ಸಮಯ ತೆಗೆದುಕೊಂಡು, ಅಪ್ಪು ಅವರಿಗಾಗಿಯೇ ಕಥೆಯನ್ನು ಸಿದ್ದ ಮಾಡಿದ್ದರು ಎಂದು ಅವರೇ ಸಂದರ್ಶನವೊಂದ್ರಲ್ಲಿ ಹೇಳಿಕೊಂಡಿದ್ದಾರೆ. ಈ ಕಥೆಯ ನಾಯಕನ ಪಾತ್ರ ಜೆಮ್ಸ್ ಬಾಂಡ್ ರೀತಿಯಲ್ಲಿ ಸಿಕ್ಕಾ ಪಟ್ಟೆ ಸ್ಟೈಲಿಶ್ ಇರುತ್ತೆ. ಹಾಗೆ ವಿಲನ್ ಕೂಡ ತುಂಬಾ ತೂಕ ಇರುವ ವ್ಯಕ್ತಿಯ ಹಾಗೆ ಕಾಣಿಸಿಕೊಳ್ಳುತ್ತಾನೆ. ಹೀರೋಗಿಂತಲೂ ವಿಲನ್ ಪಾತ್ರ ಸ್ಟ್ರಾಂಗ್. ಹಾಗಾಗಿ ಈ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ಅವರನ್ನೇ, ಹೀರೋ ಮತ್ತು ವಿಲನ್ ಪಾತ್ರಕ್ಕೆ ನೇಮಿಸಲಾಗಿತ್ತು ಎಂದಿದ್ದಾರೆ..
ಅಷ್ಟೇ ಅಲ್ಲ ಈಗಾಗಲೇ ರಿಲೀಸ್ ಆಗಿರುವ ಪೋಸ್ಟರನ್ನು ಅಪ್ಪು ಅವರು ನೋಡಿದ್ದರಂತೆ. ಚಿತ್ರದ ಬಗ್ಗೆ ಮಾತನಾಡಿದಾಗ ಅಪ್ಪು ಮಂಸೋರೆ ಅವರಿಗೆ ಸಿನಿಮಾ ಮಾಡುವ ಭರವಸೆ ನೀಡಿದ್ದರಂತೆ. ಆ ಸಮಯದಲ್ಲಿ ಪುನೀತ್ರಾಜ್ಕುಮಾರ್ ಅವರು ಬೇರೆ ಸಿನಿಮಾದಲ್ಲಿ ಬ್ಯುಸಿ ಇದ್ದ ಕಾರಣಕ್ಕೆ ಸಮಯ ಬರಲಿ ಖಂಡಿತ ಸಿನಿಮಾ ಮಾಡೋಣ ಎಂದು ಪುನೀತ್ ರಾಜ್ಕುಮಾರ್ ಅವರು ಮಂಸೋರೆ ಅವರಿಗೆ ಭರವಸೆ ನೀಡಿದ್ದರು ಎಂದಿದ್ದಾರೆ..
ಅಲ್ಲದೇ ಅಪ್ಪು ಇಲ್ಲದ ಈ ವೇಳೆ ಈ ಕಥೆಗೆ ಬೇರೆಯವರು ಸಿನಿಮಾ ಮಾಡೋದು ಕಷ್ಟ.. ಕಥೆ ಬರೆದಿದ್ದು ಅಪ್ಪು ಅವರಿಗಾಗಿ.. ಆದ್ರೆ ಈಗ ಈ ಕಥೆಯಲ್ಲಿ ಬೇರೆಯವರು ನಟಿಸುವುದು ಕಷ್ಟ ಎಂದು ಹೇಳಿಕೊಂಡಿದ್ದಾರೆ..









