Puneet raj kumar | ಅಪ್ಪು ಜನ್ಮದಿನವು “ಸ್ಫೂರ್ತಿ ದಿನ”
ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ
ನವೆಂವರ್ 01ಕ್ಕೆ ಕರ್ನಾಟಕ ರತ್ನ ಪ್ರಶಸ್ತಿ
ಸಚಿವರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ
ಸಿಎಂಗೆ ಧನ್ಯವಾದ ತಿಳಿಸಿದ ಸುನಿಲ್ ಕುಮಾರ್
ಬೆಂಗಳೂರು : ಕರುನಾಡ ರಾಜರತ್ನ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುನೀತ್ ರಾಜ್ ಕುಮಾರ್ ಅವರ ಜನ್ಮದಿನವನ್ನು ಸ್ಪೂರ್ತಿದಿನವನ್ನಾಗಿ ಆಚರಣೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಮಾರ್ಚ್ 17 ಅಂದರೇ ಪುನೀತ್ ರಾಜ್ ಕುಮಾರ್ ಹುಟ್ಟಿದ ದಿನದಂದು ರಾಜ್ಯ ಸರ್ಕಾರದ ವತಯಿಂದ ಸ್ಪೂರ್ತಿ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ 168ನೇ ನಾರಾಯಣ ಗುರುಗಳ ಜನ್ಮ ದಿನಾಚರಣೆಯಲ್ಲಿ ಸಿಎಂ ಬೊಮ್ಮಾಯಿ ಈ ಘೋಷಣೆ ಮಾಡಿದ್ದಾರೆ. ಅಲ್ಲದೇ ನವೆಂಬರ್ 1 ರಂದು ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗುವುದು ಎಂದು ಹೇಳಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಸಚಿವ ಸುನಿಲ್ ಕುಮಾರ್, ಸ್ಪೂರ್ತಿದಿನ ನಡೆಸಬೇಕೆಂಬ ನನ್ನ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿಗೆ ಧನ್ಯವಾದಗಳು. ಲಕ್ಷಾಂತರ ಯುವಕರಿಗೆ ಅಭಿಮಾನಿಗಳಿಗೆ ಇದು ಸ್ಪೂರ್ತಿಯಾಗಲಿದೆ ಎಂದಿದ್ದಾರೆ.








