ಪ್ರಜೆಗಳು ದೂರು ನೀಡಲು ವಾಸ್ಟ್ ಅಪ್ ನಂಬರ್ ನೀಡಿದ ಪಂಜಾಬ್ ಸಿಎಂ
ಪಂಜಾಬ್: ಭ್ರಷ್ಟ ಅಧಿಕಾರಿಗಳ ವಿರುದ್ಧ ದೂರು ನೀಡಿಲು ವಿನೂತ ಕ್ರಮವೊಂದನ್ನು ಪಂಜಾಬ್ ಭಗವಂತ್ ಮಾನ್ ಅವರು ಕೈಗೊಂಡಿದ್ದಾರೆ.
ಅದು ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಉದ್ದೇಶದಿಂದ ರಾಜ್ಯದಲ್ಲಿ ನಡೆಯುವ ಭ್ರಷ್ಟಾಚಾರದ ಬಗ್ಗೆ ಅಥವಾ ಯಾರಾದರೂ ಲಂಚ ಕೇಳಿದರೆ ರಾಜ್ಯದ ಜನರು ಇನ್ಮುಂದೆ ತನ್ನದೇ ವಾಟ್ಸಾಪ್ ನಂಬರ್‌ಗೆ ವಿಡಿಯೋ ಅಥವಾ ಆಡಿಯೋ ರೆಕಾರ್ಡ್ ಮಾಡಿ ನೇರವಾಗಿ ಕಳುಹಿಸಬಹುದು ಎಂದು ತಿಳಿಸಿದ್ದಾರೆ.
ಪಂಜಾಬ್ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿರುವ ಭಗವಂತ್ ಮಾನ್ ಅವರು ಪಂಜಾಬ್ ಇತಿಹಾಸದಲ್ಲಿ ಯಾರೂ ತೆಗೆದುಕೊಳ್ಳದ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಟ್ವೀಟ್ ಮಾಡಿ, ಕುತೂಹಲ ಕೆರಳಿಸಿದ್ದರು. ಇದರ ಬೆನ್ನಲ್ಲೇ ಅವರು ಕೈಗೊಂಡಿರುವ ಈ ನಿರ್ಧಾರದ ಬಗ್ಗೆ ಟ್ವೀಟ್ ಮಾಡಿದ್ದಾರೆ.
ರಾಜ್ಯದ ಮಾಜಿ ಸಚಿವರು, ಶಾಸಕರು ಸೇರಿದಂತೆ 57 ಮುಖಂಡರು ಸರ್ಕಾರಿ ಬಂಗಲೆ ಹಾಗೂ ಫ್ಲ್ಯಾಟ್ಗಳನ್ನು ಖಾಲಿ ಮಾಡುವಂತೆ ಈಗಾಗಲೇ ಸೂಚನೆ ನೀಡಿದ್ದಾರೆ. ಇದಕ್ಕೂ ಮುಂಚಿತವಾಗಿ ಪಂಜಾಬ್ನಲ್ಲಿ ಮಾಜಿ ಸಂಸದರು, ಮಾಜಿ ಸಚಿವರು, ಶಾಸಕರು ಸೇರಿದಂತೆ ವಿವಿಐಪಿಗಳಿಗೆ ನೀಡಿರುವ ಭದ್ರತೆಯನ್ನು ತಕ್ಷಣವೇ ಹಿಂಪಡೆದುಕೊಳ್ಳುವಂತೆ ಆದೇಶ ಹೊರಡಿಸಿದ್ದರು.








