Punjab Election – ಸೋನುಸೂದ್ ಸಹೋದರಿಗೆ ಕಪಿಲ್ ಶರ್ಮಾ, ಹರ್ಭಜನ್ ಸಿಂಗ್ ಬೆಂಬಲ
ಪಂಜಾಬ್ ರಾಜ್ಯದಲ್ಲಿ ಇಂದು ವಿಧಾಸನಸಭಾ ಚುನಾವಣೆ ನಡೆಯುತ್ತಿದೆ. ರಾಜ್ಯದ ಜನತೆ ತಮ್ಮ ಮುಂದಿನ ವಿಧಾನಸಭಾ ನಾಯಕನ್ನ ಆಯ್ಕೆ ಮಾಡಲಿದ್ದಾರೆ . ಇಂದು ನಡೆಯುತ್ತಿರುವ ಚುನಾವಣೆಯಲ್ಲಿ ಬಾಲಿವುಡ್ ನಟ ಸೋನೂ ಸೂದ್ ಸಹೋದರಿ ಮಾಳವಿಕ ಸೂದ್ ಸ್ಪರ್ಧಿಸುತ್ತಿದ್ದಾರೆ.
ಹಾಸ್ಯನಟ ಕಪಿಲ್ ಶರ್ಮಾ ಮತ್ತು ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಸೋನು ಸೂದ್ ಸಹೋದರಿ ಮಾಳವಿಕಾ ಸೂದ್ ಸಾಚಾರ್ ಅವರನ್ನು ಬೆಂಬಲಿಸಿ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ. Punjab Elections: Kapil Sharma and Harbhajan Singh came in support of Sonu Sood’s sister Malvika.
ವೀಡಿಯೋದಲ್ಲಿ ಕಪಿಲ್ ಶರ್ಮಾ ಮಾತನಾಡಿ “ನನ್ನ ಅಕ್ಕ ಮಾಳವಿಕಾ ಸೂದ್ ಅವರ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿರುವವರಿಗೆ ಶುಭವಾಗಲಿ. ಸಹೋದರ ಸಹೋದರಿಯರಿಬ್ಬರೂ (ಸೋನು ಮತ್ತು ಮಾಳವಿಕಾ) ಒಳ್ಳೆಯ ಕೆಲಸ ಮಾಡುತ್ತಾ ಜನರಿಗೆ ಸಹಾಯ ಮಾಡುತ್ತಿರಲಿ ಎಂದು ಹಾರೈಸುತ್ತೇನೆ. ಪ್ರೀತಿ ಮತ್ತು ಶುಭ ಹಾರೈಕೆಗಳು.ಎಂದಿದ್ದಾರೆ.
ಫೆಬ್ರವರಿ 20 ಅಂದರೆ ಇಂದು ಚುನಾವಣೆ ನಡೆಯುತ್ತಿದ್ದು ಮಾಳವಿಕಾ ಸೂದ್ ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರ ಸಮ್ಮುಖದಲ್ಲಿ ಮಾಳವಿಕ ತವರು ಮೊಗಾದಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.