Punjab Election – “ಸಂಶಯಾಸ್ಪದ ಚಟುವಟಿಕೆ” ನಟ ಸೋನು ಸೂದ್ ಕಾರು ವಶಕ್ಕೆ…
ಪಂಜಾಬ್ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದ್ದಾಗ ಮೋಗಾ ಜಿಲ್ಲೆಯ ಲಂಧೇಕೆ ಗ್ರಾಮದಲ್ಲಿ “ಸಂಶಯಾಸ್ಪದ ಚಟುವಟಿಕೆ” ನಡೆಸಲಾಗುತ್ತಿದೆ ಎಂಬ ಕಾರಣಕ್ಕೆ ಬಾಲಿವುಡ್ ನಟ ಮತ್ತು ಸಾಮಾಜಿಕ ಕಾರ್ಯಕರ್ತ ಸೋನು ಸೂದ್ ಕುಳಿತಿದ್ದ ಕಾರನ್ನ (SUV) ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸೋನು ಸೂದ್ ಅವರ ಸಹೋದರಿ ಮಾಳವಿಕಾ ಸೂದ್ ಸಾಚಾರ್ ಅವರು ಮೋಗಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.
ಚುನಾವಣಾ ವೀಕ್ಷಕರ ನಿರ್ದೇಶನದ ಮೇರೆಗೆ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಎಸ್‌ಡಿಎಂ-ಕಮ್-ರಿಟರ್ನಿಂಗ್ ಅಧಿಕಾರಿ ಸತ್ವಂತ್ ಸಿಂಗ್ ಅವರು ಸೋನು ಸೂದ್ ಅವರ ಮನೆಗೆ ವೀಡಿಯೊ ಕಣ್ಗಾವಲು ಹಾಕಲು ನಿರ್ದೇಶಿಸಿದ್ದಾರೆ.
ಅನುಮಾನಾಸ್ಪದ ಚಟುವಟಿಕೆಯ ಆಧಾರದ ಮೇಲೆ ಎಸ್‌ಯುವಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ದೇವಿಂದರ್ ಸಿಂಗ್ ಹೇಳಿದ್ದಾರೆ. ಲಂಧೇಕೆ ಗ್ರಾಮದ ಮತಗಟ್ಟೆ ಬಳಿ ಎಸ್‌ಯುವಿ ಸುತ್ತಾಡುತ್ತಿರುವ ಬಗ್ಗೆ ನಮಗೆ ದೂರು ಬಂದಿದೆ. ನಾವು ಅದನ್ನು ವಶಪಡಿಸಿಕೊಂಡಿದ್ದೇವೆ. ಮುಂದಿನ ಕ್ರಮ ನಡೆಯುತ್ತಿದೆ. ” ಎಂದು ಹೇಳಿದರು.
ಈ ವಾಹನ ಸೋನು ಸೂದ್ ಅವರ ಪರಿಚಯಸ್ಥರಿಗೆ ಸೇರಿದ್ದು, ಅವರು ಮೊಗಾದಲ್ಲಿ ಚುನಾವಣಾ ಪ್ರಚಾರದ ವೇಳೆ ಬಳಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
Punjab elections: Police impound actor Sonu Sood’s SUV at Moga polling booth
ಸತ್ವಂತ್ ಸಿಂಗ್ ಅವರು, “ಸೋನು ಸೂದ್‌ಗೆ ಮೋಗಾ ಕ್ಷೇತ್ರದಲ್ಲಿ ಮತ ಇಲ್ಲದ ಕಾರಣ ಆ ಪ್ರದೇಶದಲ್ಲಿ ಓಡಾಡಲು ಅವಕಾಶವಿಲ್ಲದ ಕಾರಣ ಅವರ ಮನೆಯಲ್ಲೇ ಇರುವಂತೆ ಸೂಚಿಸಿದ್ದೇನೆ. ಆದರೆ, ಅವರು ನಿರ್ದೇಶನವನ್ನು ಉಲ್ಲಂಘಿಸಿದ್ದಾರೆ. ಆದ್ದರಿಂದ, ನಾನು ಅವರ ಮನೆಯ ವೀಡಿಯೊಗೆ ಕಣ್ಗಾವಲು ನಿರ್ದೇಶಿಸಿದ್ದೇನೆ ಎಂದು ತಿಳಿಸಿದ್ದಾರೆ.
ಮಾಧ್ಯಮಗಳು ಸೋನು ಸೂದ್ ಅವರನ್ನು ಸಂಪರ್ಕಿಸಿದಾಗ, “ಶಿರೋಮಣಿ ಅಕಾಲಿದಳದ ಅಭ್ಯರ್ಥಿ ಬರ್ಜಿಂದರ್ ಸಿಂಗ್, ಅಲಿಯಾಸ್ ಮಖನ್ ಬ್ರಾರ್, ನನ್ನ ವಿರುದ್ಧ ಸುಳ್ಳು ದೂರು ದಾಖಲಿಸಿದ್ದಾರೆ. ಇದು ಕೇವಲ ಪಾರ್ಕಿಂಗ್ ಸಮಸ್ಯೆಯಾಗಿತ್ತು. ವಾಹನವನ್ನು ಸರಿಯಾಗಿ ನಿಲ್ಲಿಸಿರಲಿಲ್ಲ. ಅಷ್ಟೆ ಬೇರೆ ಏನೂ ಇರಲಿಲ್ಲ. ” ಎಂದಿದ್ದಾರೆ.
ನಂತರ ಸೋನು ಸೂದ್ ಅವರು ಮೋಗಾ ಕ್ಷೇತ್ರದಲ್ಲಿ ಇತರ ಪಕ್ಷಗಳ ಅಭ್ಯರ್ಥಿಗಳು ಮತಗಳನ್ನು ಖರೀದಿಸುತ್ತಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಆರೋಪಿಸಿದ್ದಾರೆ “ಚುನಾವಣಾ ಆಯೋಗವು ಈ ಬಗ್ಗೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು” ಎಂದು ಅವರು ಟ್ವೀಟ್ ಮಾಡಿದ್ದು, ಮೊಗಾ ಪೊಲೀಸರನ್ನು ಹೊರತುಪಡಿಸಿ ರಾಜ್ಯ ಪೊಲೀಸ್ ಮುಖ್ಯಸ್ಥರನ್ನು ಟ್ಯಾಗ್ ಮಾಡಿದ್ದಾರೆ.








