ನವದೆಹಲಿ : ಜೂನ್ 10 2019 ಕ್ರಿಕೆಟ್ ಅಭಿಮಾನಿಗಳಿಗೆ ಶಾಕ್ ನೀಡಿ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಎಲ್ಲ ಮಾದರಿಯ ಕ್ರಿಕೆಟ್ ಗೆ ವಿದಾಯ ಘೋಷಿಸಿದರು. ಅಂದು ಕೇವಲ ಯುವಿ ಅಭಿಮಾನಿಗಳು ಮಾತ್ರವಲ್ಲದೇ ಕ್ರಿಕೆಟ್ ನ ಅಭಿಮಾನಿಗಳೆಲ್ಲರೂ ಒಂದು ಕ್ಷಣ “ಛೇ ಯುವಿ ವಿದಾಯ ನೀಡಬಾರದಿತ್ತು” ಎಂದು ಯೋಚಿಸುತ್ತ ಮಂಕಾಗಿದ್ದರು. ಅದರಲ್ಲಿ ನಾನೂ ಕೂಡ ಒಬ್ಬ.
ಅಂದು ಯುವರಾಜ್ ವಿದಾಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಸಂಗತಿ ಗಾಳಿ ವೇಗದಲ್ಲಿ ಇಡೀ ವಿಶ್ವಕ್ಕೆ ಹರಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಯುವಿ ವಿ ಮಿಸ್ ಯೂ, ಯುವಿ ಪ್ಲೀಸ್ ಕಂ ಬ್ಯಾಕ್, ಎಂದು ಯುವರಾಜನ ಫೋಟೋಗಳೇ ಕಾಣಿಸುತ್ತಿದ್ದವು. ಎಲ್ಲರ ಸ್ಟೇಟಸ್ ಗಳು ಯುವರಾಜನ ಮಯ ಆಗಿದ್ದರು. ಹೌದು, ಅದಕ್ಕೆ ಪಂಜಾಬ್ ಕಾ ಪುತ್ತರ್ ಅರ್ಹ ಕೂಡ.
ಮತ್ತೆ ಅಂಗಳಕ್ಕೆ ಸಿಕ್ಸರ್ ಕಿಂಗ್
ಎರಡು ವಿಶ್ವಕಪ್ ಗಳ ಹೀರೋ, ಕ್ರಿಕೆಟ್ ಜಗತ್ತು ಕಂಡ ಅತ್ಯದ್ಭುತ ಆಟಗಾರ, ರಿಯಲ್ ಫೈಟರ್ ಮತ್ತೆ ಕಮ್ ಬ್ಯಾಕ್ ಮಾಡಬೇಕು ಎಂಬ ಅಭಿಮಾನಿಗಳ ಪ್ರಾರ್ಥನೆ ಈಗ ಫಸಿಲಿಸಿದೆ. ಒಂದು ವರ್ಷದ ಹಿಂದೆ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದ ಯುವರಾಜ್ ಸಿಂಗ್ ಮತ್ತೆ ಅಂಗಳಕ್ಕೆ ಬರಲು ತಯಾರು ನಡೆಸುತ್ತಿದ್ದಾರೆ. ನಿವೃತ್ತಿಯನ್ನು ವಾಪಸ್ ಪಡೆದು ಪಂಜಾಬ್ ತಂಡದ ಪರ ದೇಶಿ ಕ್ರಿಕೆಟ್ ಆಡಲು ಎಡಗೈ ಬ್ಯಾಟ್ಸ್‍ಮನ್ ನಿರ್ಧರಿಸಿದ್ದಾರೆ. ಅಲ್ಲದೆ ಮತ್ತೆ ದೇಶಿ ಕ್ರಿಕೆಟ್ ಆಡಲು ಅನುಮತಿ ಕೋರಿ ಯುವಿ ಬಿಸಿಸಿಐಗೆ ಪತ್ರ ಬರೆದಿದ್ದಾರೆ.
ಕೊರೊನಾ ವೈರಸ್‍ನಿಂದ ಕಳೆದ ಮಾರ್ಚ್ ತಿಂಗಳಿನಿಂದ ಭಾರತದಲ್ಲಿ ಕ್ರಿಕೆಟ್ ಚಟುವಟಿಕೆಗಳು ನಿಲ್ಲಿಸಲಾಗಿದೆ. ಆದರೆ, ಯುವರಾಜ್ ಕಳೆದ ಹಲವು ತಿಂಗಳುಗಳಿಂದ ಶುಭಮನ್ ಗಿಲ್, ಅಭಿಷೇಕ್ ವರ್ಮಾ, ಅನ್ಮೋಲ್‍ಪ್ರೀತ್ ಸಿಂಗ್ ಅವರೊಂದಿಗೆ ಯುವರಾಜ್ ಸಿಂಗ್ ಪಿಸಿಎ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿದ್ದರು.
ಈ ವೇಳೆ ಕ್ರಿಕ್ ಬಜ್ ಜೊತೆ ಮಾತನಾಡಿರುವ ಯುವರಾಜ್ ಸಿಂಗ್, “ಈ ಯುವ ಆಟಗಾರರ ಜತೆ ಸಮಯ ಕಳೆದಿದ್ದು ತುಂಬಾ ಸಂತೋಷ ತಂದಿದೆ. ಬಹಳ ಸಮಯದವರೆಗೆ ಬ್ಯಾಟ್ ಹಿಡಿದಿಲ್ಲದಿದ್ದರೂ ನಾನು ಚೆಂಡನ್ನು ಎಷ್ಟು ಚೆನ್ನಾಗಿ ಹೊಡೆಯುತ್ತಿದ್ದೇನೆ ಎಂದು ನನಗೆ ಆಶ್ಚರ್ಯವಾಯಿತು.ಯಾವುದೇ ಅವಕಾಶಗಳು ಬಂದರೂ ಅವುಗಳನ್ನು ಸ್ವೀಕರಿಸುತ್ತೇನೆಂಬ ಬಗ್ಗೆ ನನಗೆ ಸ್ಪಷ್ಟತೆಯಿಲ್ಲ. ಈಗಾಗಲೇ ದೇಶಿ ಕ್ರಿಕೆಟ್ ಆಡಿದ್ದೇನೆ, ಬಿಸಿಸಿಐ ನನಗೆ ಒಪ್ಪಿಗೆ ನೀಡಿದರೆ, ಪಂಜಾಬ್ ಪರ ಆಡುತ್ತೇನೆ. ಇದರ ನಡುವೆ ಮಿಸ್ಟರ್ ಬಲಿ ಅವರ ಮನವಿಯನ್ನು ಮರೆಯುವುದಿಲ್ಲ. ಕಳೆದ ಮೂರು ಅಥವಾ ನಾಲ್ಕು ವಾರಗಳಿಂದ ನನ್ನ ಮನಸ್ಸಿನಲ್ಲಿರುವ ವಿಷಯಗಳನ್ನು ತಿಳಿಸಿದ್ದೇನೆ. ಹಾಗಾಗಿ ಕೊನೆಯಲ್ಲಿ ನಾನು ಪ್ರಜ್ಞಾಪೂರ್ವಕ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿಲ್ಲ,” ಎಂದು ಹೇಳಿದರು.
ಪಂಜಾಬ್ ಚಾಂಪಿಯನ್‍ಶಿಪ್ ಗೆಲುವಿಗೆ ಪ್ರೇರಣೆಯು ಸಹಾಯವಾಗಲಿದೆ. ಹರಭಜನ್ ಸಿಂಗ್, ನಾನು ಹಲವು ಟೂರ್ನಿಗಳನ್ನು ಗೆದ್ದಿದ್ದೇವೆ. ಆದರೆ ನಾವಿಬ್ಬರೂ ಜತೆಯಾಗಿ ಪಂಜಾಬ್ ತಂಡವನ್ನು ಒಮ್ಮೆಯೂ ಚಾಂಪಿಯನ್ ಶಿಪ್ ಮಾಡಲಾಗಲಿಲ್ಲ. ಈ ಅಂಶ ನನ್ನ ಅಂತಿಮ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸಬಹುದು,” ಎಂದು ಯುವರಾಜ್ ಸಿಂಗ್ ತಿಳಿಸಿದ್ದಾರೆ.








