Punjab Kings | ಅನಿಲ್ ಕುಂಬ್ಳೆಗೆ ಪಂಜಾಬ್ ಕಿಂಗ್ಸ್ ಶಾಕ್
ಟೀಂ ಇಂಡಿಯಾದ ದಿಗ್ಗಜ ಸ್ಪಿನ್ನರ್ ಅನಿಲ್ ಕುಂಬ್ಳೆಗೆ ಐಪಿಎಲ್ ಫ್ರಾಂಚೈಸಿ ಪಂಜಾಬ್ ಕಿಂಗ್ಸ್ ಶಾಕ್ ಕೊಡಲಿದೆ ಎಂದು ವರದಿಯಾಗಿದೆ.
ಪಂಜಾಬ್ ಕಿಂಗ್ಸ್ ಕೋಚ್ ಆಗಿ ಅನಿಲ್ ಕುಂಬ್ಳೆ ಸ್ಥಾನದಲ್ಲಿ ಹೊಸ ಕೋಚ್ ಗೆ ಅವಕಾಶ ನೀಡಲು ಫ್ರಾಂಚೈಸಿ ಚಿಂತನೆ ನಡೆಸಿದೆಯಂತೆ.
ಈ ಸೆಪ್ಟಂಬರ್ ನಲ್ಲಿ ಕುಂಬ್ಳೆ ಜೊತೆಗೆ ಪಂಜಾಬ್ ಕಿಂಗ್ಸ್ ಮಾಡಿಕೊಂಡಿದ್ದ ಮೂರು ವರ್ಷಗಳ ಒಪಂದ ಮುಗಿಯಲಿದೆ.
ಈ ಹಿನ್ನೆಲೆಯಲ್ಲಿ ಕುಂಬ್ಳೆ ಜೊತೆಗಿನ ಒಪ್ಪಂದವನ್ನು ಮುಂದುವರೆಸಲು ಪಂಜಾಬ್ ಕಿಂಗ್ಸ್ ಗೆ ಇಷ್ಟವಿಲ್ಲವಂತೆ.
ಪಂಜಾಬ್ ಕಿಂಗ್ಸ್‌ನ ನೂತನ ಕೋಚ್ ಹುದ್ದೆಗೆ ಹೈದರಾಬಾದ್‌ನ ಮಾಜಿ ಕೋಚ್ ಟ್ರೆವರ್ ಬೆಲ್ಲಿಸ್ ಮತ್ತು ಇಂಗ್ಲೆಂಡ್‌ನ ಮಾಜಿ ಆಟಗಾರ ಇಯಾನ್ ಮಾರ್ಗನ್ ಅವರ ಹೆಸರನ್ನು ಈಗಾಗಲೇ ಪರಿಗಣಿಸಲಾಗಿದೆಯಂತೆ.
![punjab-kings-not-intrested-renew-anil-kumble-head-coach saaksha tv](http://saakshatv.com/wp-content/uploads/2022/08/anil-kumble.jpg)
ಇವರೊಂದಿಗೆ ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಅವರ ಹೆಸರನ್ನೂ ಪರಿಗಣಿಸಲಾಗುತ್ತಿದೆ.
ಮತ್ತೊಂದು ವಾರದಲ್ಲಿ ಪಂಜಾಬ್ ಕಿಂಗ್ಸ್ ಗೆ ಹೊಸ ಕೋಚ್ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಲಿದೆ.
ಇನ್ನು ಕುಂಬ್ಳೆ ಮಾರ್ಗದರ್ಶನದಲ್ಲಿ ಪಂಜಾಬ್ ಕಿಂಗ್ಸ್ ಐಪಿಎಲ್ ನಲ್ಲಿ 42 ಮ್ಯಾಚ್ ಗಳಲ್ಲಿ 19 ಗೆಲುವುಗಳನ್ನು ಕಂಡಿದೆ.
ಅನಿಲ್ ಕುಂಬ್ಳೆ ಮಾರ್ಗದರ್ಶನದಲ್ಲಿ ಸತತವಾಗಿ ನಾಲ್ಕು ಸೀಸನ್ ನಲ್ಲಿ ಆರನೇ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡಿತ್ತು.
ಐಪಿಎಲ್ ಆರಂಭವಾದಾಗಿನಿಂದ ಪಂಜಾಬ್ ಕಿಂಗ್ಸ್ 2014ರಲ್ಲಿ ಬಿಟ್ಟರೆ ಒಮ್ಮೆಯೂ ಫೈನಲ್ ತಲುಪಿರಲಿಲ್ಲ. ಎಷ್ಟೇ ನಾಯಕರು, ಕೋಚ್, ಆಟಗಾರರು ಬದಲಾದರೂ ತಂಡದ ಪ್ರದರ್ಶನ ಸುಧಾರಿಸುತ್ತಿಲ್ಲ.