Punjab Election – ಕಾಂಗ್ರೆಸ್ ನಿಂದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಚರಂಜಿತ್ ಸಿಂಗ್ ಚನ್ನಿ ಆಯ್ಕೆ…
ಪಂಜಾಬ್ ಚುನಾವಣೆಯಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎನ್ನುವ ಚರ್ಚೆಗೆ ರಾಹುಲ್ ಗಾಂಧಿ ತೆರೆ ಎಳೆದಿದ್ದಾರೆ. ಭಾನುವಾರ ಲೂಧಿಯಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮುಂಬರುವ ಪಂಜಾಬ್ ವಿಧಾನಸಭೆ ಚುನಾವಣೆಗೆ ಚರಂಜಿತ್ ಸಿಂಗ್ ಚನ್ನಿ ಅವರನ್ನು ಪಕ್ಷದ ಮುಖ್ಯಮಂತ್ರಿ ಆಯ್ಕೆ ಎಂದು ಘೋಷಿಸಿದ್ದಾರೆ.
ಕಾಂಗ್ರೆಸ್ನ ಸಿಎಂ ಮುಖವನ್ನು ಪ್ರಕಟಿಸಿದ ರಾಹುಲ್ ಗಾಂಧಿ, ಜನರ ಸಲಹೆಯಂತೆ, ಕೆಳವರ್ಗದವರ ನೋವನ್ನು ಅರ್ಥಮಾಡಿಕೊಳ್ಳುವ ಬಡ ಹಿನ್ನೆಲೆಯ ಮುಖ್ಯಮಂತ್ರಿಯನ್ನು ಪಕ್ಷವು ಬಯಸುತ್ತದೆ ಎಂದು ರ್ಯಾಲಿಯಲ್ಲಿ ಹೇಳಿದ್ದಾರೆ.
ಚನ್ನಿ ಬಡ ಕುಟುಂಬದಿಂದ ಬಂದವರು. ಅವರು ಬಡತನವನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಅದರ ಬಗ್ಗೆ ಆಳವಾಗಿ ತಿಳಿದಿದ್ದಾರೆ. ಅವರ ಹೃದಯ ಮತ್ತು ರಕ್ತದಲ್ಲಿ ಪಂಜಾಬ್ ಇದೆ” ಎಂದು ರಾಹುಲ್ ಗಾಂಧಿ ಹೇಳಿದರು.
ಚರಂಜಿತ್ ಸಿಂಗ್ ಚನ್ನಿ ಅವರು ರಾಹುಲ್ ಗಾಂಧಿಗೆ ಧನ್ಯವಾದ ಅರ್ಪಿಸಿದ್ದಾರೆ. ಅವರ ಕಾರಣದಿಂದಾಗಿ ಒಬ್ಬ ಬಡ ವ್ಯಕ್ತಿ ಪಂಜಾಬ್ನ ಮುಖ್ಯಮಂತ್ರಿಯಾಗಿದ್ದಾನೆ ಎಂದು ಹೇಳಿದರು.
ಚರಣ್ಜಿತ್ ಸಿಂಗ್ ಚನ್ನಿ ಮತ್ತು ನವಜೋತ್ ಸಿಂಗ್ ಸಿಧು ಅವರು ಪಕ್ಷದ ಮುಖ್ಯಮಂತ್ರಿಯಾಗಲು ಪ್ರಮುಖ ಸ್ಪರ್ಧಿಗಳಾಗಿದ್ದರು, ಆದರೂ ಯಾರನ್ನು ಆಯ್ಕೆ ಮಾಡಿದರೂ ನಿರ್ಧಾರಕ್ಕೆ ಬದ್ಧರಾಗುತ್ತೇವೆ ಎಂದು ಇಬ್ಬರೂ ರಾಹುಲ್ ಗಾಂಧಿ ಅವರಿಗೆ ಭರವಸೆ ನೀಡಿದ್ದರು.