Pushkar films | ಸೂಪರ್ ಸ್ಟಾರ್ ಆಗಲಿದ್ದಾರೆ ಪುಷ್ಕರ್ ಮಲ್ಲಿಕಾರ್ಜುನಯ್ಯ pushkar-films- pushkara-mallikarjunaiah-become-hero
ಸ್ಯಾಂಡಲ್ವುಡ್ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಶೀಘ್ರದಲ್ಲಿಯೇ ಹೀರೋ ಆಗಿ ಬೆಳ್ಳಿ ಪರದೆ ಮೇಲೆ ಮಿಂಚಲಿದ್ದಾರೆ.
ಪುಷ್ಕರ್ ಮಲ್ಲಿಕಾರ್ಜುನಯ್ಯ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಮತ್ತು ಅವನೇ ಶ್ರೀಮನ್ನಾರಾಯಣ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ.
ಸದ್ಯ ಪುಷ್ಕರ್ ನಿರ್ಮಾಣದ ಆಶಿಕಾ ರಂಗನಾಥ್ ಮತ್ತು ಶರಣ್ ಅಭಿನಯದ ಅವತಾರ ಪುರುಷ ಸಿನಿಮಾ ತೆರೆಗೆ ಬರಬೇಕಿದೆ.
ಈ ಮಧ್ಯೆ ಪುಷ್ಕರ್ ಮಲ್ಲಿಕಾರ್ಜುನಯ್ಯ ನಟರಾಗಿ ಸಿಲ್ವರ್ ಸ್ಕ್ರೀನ್ ಮೇಲೆ ಅಬ್ಬರಿಸಲು ಮುಂದಾಗಿದ್ದಾರೆ.

ಈ ಬಗ್ಗೆ ಮಾತನಾಡಿರುವ ಪುಷ್ಕರ್, “ಕಳೆದ ನಾಲ್ಕು ವರ್ಷಗಳಿಂದ ನಾನು ನಟನಾಗಲು ಹಂಬಲಿಸುತ್ತಿದ್ದೆ.
ನಾನು 2 ವರ್ಷಗಳನ್ನು ಇದಕ್ಕಾಗಿ ಮೀಸಲಿಟ್ಟಿದ್ದೇನೆ ಮತ್ತು ನಟನೆಯ ಸೂಕ್ಷ್ಮ ವ್ಯತ್ಯಾಸಗಳನ್ನು ಕಲಿಯಲು 300 ಗಂಟೆಗಳು ಕಾರ್ಯಾಗಾರಗಳಿಗೆ ಹಾಜರಾಗಿದ್ದೇನೆ.
ನಾನು ಈಗ ಆತ್ಮವಿಶ್ವಾಸ ಹೊಂದಿದ್ದೇನೆ ಮತ್ತು ಕ್ಯಾಮೆರಾವನ್ನು ಎದುರಿಸಲು ಸಿದ್ಧನಾಗಿದ್ದೇನೆ ಎಂದಿದ್ದಾರೆ.
ಅಂದಹಾಗೆ ಈ ಸಿನಿಮಾದ ಕಥೆ ‘ಕೌ ಥೆರಪಿ’ ಮೇಲೆ ಆಧಾರವಾಗಿ ಇರುತ್ತಂತೆ.
ಪುಷ್ಕರ್ ಫಿಲಂಸ್ ಬ್ಯಾನರ್ನಡಿಯಲ್ಲಿ ಫೆಬ್ರವರಿ 6 ರಂದು ಚಿತ್ರ ಅಧಿಕೃತವಾಗಿ ಪ್ರಾರಂಭವಾಗಲಿದೆ ಎಂದು ತಿಳಿದು ಬಂದಿದೆ.
ಚಿತ್ರವನ್ನು ಎರಡು ಶೆಡ್ಯೂಲ್ಗಳಲ್ಲಿ ಚಿತ್ರೀಕರಿಸಲು ಪ್ಲಾನ್ ಮಾಡಿಕೊಂಡಿರುವ ಚಿತ್ರತಂಡ, ಕುದುರೆಮುಖದಲ್ಲಿ 50% ಭಾಗದ ಚಿತ್ರೀಕರಣ ಮಾಡಲಾಗುತ್ತಂತೆ.








