ಪುಷ್ಪ ಸಿನಿಮಾದ Deleted Scenes ವೈರಲ್ Pushpa saaksha tv
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭಾರಿ ಕಮಾಯಿ ಮಾಡುತ್ತಿದೆ.
ಪುಷ್ಪರಾಜ್ ಆಗಿ ಅಲ್ಲು ಅರ್ಜುನ್ ಆಕ್ಟಿಂಗ್ ಗೆ ಸಿನಿ ಪ್ರೇಕ್ಷಕರು ಜೈ ಹೋ ಎಂದಿದ್ದು, ಯಶಸ್ವಿ ಪ್ರದರ್ಶನದ ಮೂಲಕ ಸಿನಿಮಾ ಮುನ್ನುಗ್ಗುತ್ತಿದೆ.
ಇನ್ನು ನಿರ್ದೇಶಕ ಸುಕುಮಾರ್ ಈ ಸಿನಿಮಾವನ್ನ ಬಹಳ ಮುತುವರ್ಜಿ ವಹಿಸಿ ತೆಗೆದಿದ್ದು, ಮೈತ್ರಿ ಮೂವಿ ಮೇಕರ್ಸ್ ಎಲ್ಲೂ ರಾಜಿ ಆಗದೇ ಸಿನಿಮಾ ನಿರ್ಮಿಸಿದ್ದಾರೆ.
ಈ ಮಧ್ಯೆ ಸಿನಿಮಾ ಪ್ರಮೋಷನ್ ಭಾಗವಾಗಿ ಪುಷ್ಪ ಸಿನಿಮಾದ ಡಿಲೇಟೆಡ್ ಸೀನ್ ಗಳನ್ನ ಚಿತ್ರತಂಡ ಶೇರ್ ಮಾಡಿಕೊಂಡಿದ್ದು, ಭಾರಿ ವೈರಲ್ ಆಗುತ್ತಿದೆ.









